ಶಿವಮೊಗ್ಗದ ಶರಾವತಿ ಒಡಲಲ್ಲಿ ಶೀಘ್ರ ಮತ್ತೊಂದು ಯೋಜನೆ

ಶಿವಮೊಗ್ಗ, ಸೆಪ್ಟೆಂಬರ್ 27: ಶರಾವತಿ ಭೂಗರ್ಭದಲ್ಲಿ ಮತ್ತೊಂದು ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಈಗಾಗಲೇ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಹರಿಸುವ ವಿವಾದಿತ ಯೋಜನೆ ಬೆನ್ನಲ್ಲೇ ಇನ್ನೊಂದು ಯೋಜನೆಗೆ ಸಿದ್ಧತೆ ನಡೆದಿದೆ.

ಅದೇ ಕಣಿವೆಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸುವ ಯೋಜನೆಗೂ ಸರ್ಕಾರ ಮುಂದಾಗಿದೆ. ಪಂಪ್ಡ್ ಸ್ಟೋರೇಜ್ ಮೂಲಕ ಶರಾವತಿ ನೀರು ಬಳಸಿಕೊಂಡು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಯೋಜನೆಗೆ ಪೂರಕವಾಗಿ ಸಮಗ್ರ ಯೋಜನಾ ವರದಿ ತಯಾರಿಸಲು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Another Project In Sharavati River

2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ , ತಲಕಳಲೆ ಮತ್ತು ಗೇರುಸೊಪ್ಪದಲ್ಲಿ ತಲಾ 250 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಎಂಟು ಘಟಕಗಳ ಸ್ಥಾವರಗಳನ್ನು ಸ್ಥಾಪಿಸುವ ಈ ಯೋಜನೆಗೆ 378 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 370 ಅರಣ್ಯ ಭೂಮಿ ಸೇರಿದೆ.

2017ರಲ್ಲಿ ರೂಪಿಸಿದ್ದ ಯೋಜನೆಗೆ 4,862 ಕೋಟಿ ರೂ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು.

15 ಬೋರ್‌ವೆಲ್‌ಗಳನ್ನು ಕೊರೆಯಲು ಉದ್ದೇಶಿಸಲಾಗಿದ್ದು, ಇದರಲ್ಲಿ 12 ಬೋರ್‌ವೆಲ್‌ಗಳು ಅರಣ್ಯದಲ್ಲೇ ಇರಲಿದೆ.

ಮಲೆನಾಡಿಗರು, ಪರಿಸರ ಪ್ರಿಯರು ಬೆಂಗಳೂರಿಗೆ ನೀರಿನ ದಾಹ ನೀಗಿಸಲು ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಿಕೊಳ್ಳುವ ಯೋಜನೆ ವಿರುದ್ಧ ಹೋರಾಟ ನಡೆದಿದೆ. ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ತಾಲೂಕುಗಳು ಬರದಿಂದ ಬಳಲುತ್ತಿವೆ. ನಮಗೇ ನೀರಿನ ಅಭಾವ ಇದೆ. ಹೀಗಿದ್ದಾಗ ಬೆಂಗಳೂರಿಗೆ ನೀರು ಕೊಡಲು ಹೇಗೆ ಸಾಧ್ಯ ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಸರಬರಾಜು ಅವೈಜ್ಞಾನಿಕ ಯೋಜನೆ. ಹೀಗಾಗಿ, ಸರ್ಕಾರದ ಹುನ್ನಾರವನ್ನು ವಿರೋಧಿಸುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಈ ಯೋಜನೆ ಕೈಬಿಡದೇ ಹೋದಲ್ಲಿ, ಹೋರಾಟವನ್ನು ತೀವ್ರಗೊಳಿಸಲಾಗುವುದು ಅಲ್ಲಿನ ಜನತೆ ಎಚ್ಚರಿಕೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+