Shirahatti Elections: ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ
ಶಿರಹಟ್ಟಿ, ಮಾರ್ಚ್ 24: ಶಿರಹಟ್ಟಿ ಗದಗ ಜಿಲ್ಲೆಯ ಪ್ರಮುಖ ತಾಲೂಕು ಹಾಗೂ ಮೀಸಲು ವಿಧಾನಸಭಾ ಕ್ಷೇತ್ರವಾಗಿದೆ. ಧರ್ಮ ಸಹಿಷ್ಣುತೆ ಮತ್ತು ಕೋಮು ಸೌಹಾರ್ದಕ್ಕೆ ಇಡೀ ದೇಶಕ್ಕೇ ಮಾದರಿಯಾಗಿರುವ ಬಯಲು ಸೀಮೆ ಇದು. ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾದಂತೆ ಕ್ಷೇತ್ರದಲ್ಲಿ ರಾಜಕೀಯ ಸ್ಥಿತಿಗತಿಯ ಬಗ್ಗೆ ಪರಿಚಯ ಇಲ್ಲಿದೆ.
ಶಿರಹಟ್ಟಿ ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ ಹಳಗನ್ನಡ ಕವಿ ಆದಯ್ಯನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ. ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ. ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿಯಲ್ಲಿ ಶಿಥಿಲಕೋಟಿ ಇಂದಿಗೂ ಕಾಣಬಹುದಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿ ಶಿರಹಟ್ಟಿಯ ಫಕ್ಕಿರೇಶ್ವರ ಮಠ ಪ್ರಸಿದ್ಧಿ ಪಡೆದಿದೆ. 300 ವರ್ಷಗಳ ಪ್ರಾಚಿನ ಇತಿಹಾಸ ಹೊಂದಿದ ಅವ್ವ ಲಿಂಗವ್ವನ ಸಮಾಧಿ ಇರುವ ಅವ್ವ ಲಿಂಗವ್ವನ ಮಠವೂ ಶಿರಹಟ್ಟಿಯಲ್ಲಿದೆ.

ಸಕಲ ಧರ್ಮದ ಅನುಯಾಯಿಗಳಿರುವ ಕ್ಷೇತ್ರದಲ್ಲಿ ಸೂಫಿ ಸಂತರ ದರ್ಗಾಗಳು, ಹಿಂದೂ ಮುಸ್ಲಿಂ ವಾಸ್ತುಶೈಲಿಯ ಕಟ್ಟಡ ಹಾಗೂ ಎರಡೂ ಧರ್ಮಗಳ ಆರಾಧನಾ ವಿಧಾನದ ಫಕೀರೇಶ್ವರ ಮಠದಂಥ ಭಾವೈಕ್ಯತಾ ತಾಣಗಳು ಇವೆ. ಈ ಸರ್ವಜನಾಂಗದ ಶಾಂತಿಯ ತೋಟದಂತಿರುವ ಕ್ಷೇತ್ರದಲ್ಲಿ ಮಳೆ ಬಿದ್ದರಷ್ಟೇ ಸುಗ್ಗಿ. ಅಂದರೆ ಇದು ಮಳೆ ಆಶ್ರಿತ ಪ್ರದೇಶವಾಗಿದೆ.
ಹೆಸರಿಗಷ್ಟೇ ಮೀಸಲು ಕ್ಷೇತ್ರವಾಗಿರುವ ಇಲ್ಲಿ ಶಿರಹಟ್ಟಿ ಲಕ್ಷ್ಮೇಶ್ವರ-ಮುಂಡರಗಿಯ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ- ಹೀಗೆ ಸಕಲ ವಲಯಗಳೂ ಪ್ರಬಲ ಲಿಂಗಾಯತರ ಹಿಡಿತದಲ್ಲಿವೆ. ಶಿರಹಟ್ಟಿ ಮೀಸಲು ಕ್ಷೇತ್ರವಾದ ಬಳಿಕ ಜಾತಿ ಸಮೀಕರಣದ ಅಖಾಡವಾಗಿ ಕ್ಷೇತ್ರ ಬದಲಾಗಿದೆ. ಇಲ್ಲಿ ಎಸ್ಸಿ, ಎಸ್ಟಿ, ಲಂಬಾಣಿ ಮತಗಳು ದೊಡ್ಡ ಪ್ರಮಾಣದಲ್ಲಿದೆ. ಈ ದಲಿತ ಮತ ಬ್ಯಾಂಕ್ ವಿಭಜಿಸಿ ಕ್ಷೇತ್ರವನ್ನು ವಶ ಮಾಡಿಕೊಳ್ಳಲು ಲಿಂಗಾಯತ ನಾಯಕತ್ವ ಕಾರ್ಯಾಚರಣೆ ಮಾಡುತ್ತ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಅಹಿಂದ ವರ್ಗದಲ್ಲಿ ಒಗ್ಗಟ್ಟು, ರಾಜಕೀಯ ಪ್ರಜ್ಞೆ ಮೂಡಿಸುವ ನಾಯಕತ್ವದ ಕೊರತೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿದೆ. ಈಗ ಮೀಸಲು ಕ್ಷೇತ್ರವಾದ ಬಳಿಕ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ಕ್ಷೇತ್ರದಲ್ಲಿ ಒಟ್ಟು ಇರುವ 2,12,260 ಮತದಾರರಲ್ಲಿ ಒಳ ಪಂಗಡಗಳೆಲ್ಲ ಸೇರಿ ಲಿಂಗಾಯತರು 65 ಸಾವಿರ, ಎಸ್ಸಿ, ಎಸ್ಟಿ 38 ಸಾವಿರ, ಕುರುಬರು 30 ಸಾವಿರ, ಮುಸ್ಲಿಮರು 25 ಸಾವಿರ, ಬ್ರಾಹ್ಮಣರು 4 ಸಾವಿರ ಮತ್ತು ಇತರ ಒಬಿಸಿಗಳು 35 ಸಾವಿರ ಮತದಾರರಿದ್ದಾರೆ.
2008ರಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಮೇಲ್ವರ್ಗದ ನಾಯಕರ ಹಿಡಿತದ ತಂತ್ರಗಾರಿಕೆ ಸುಲಭವಾಗಿ ನಡೆಯಲಾರಂಭಿಸಿದೆ. ತಮ್ಮ ನಿಯಂತ್ರಣ ಮೀರದ ಶಾಸಕನನ್ನು ತರಲು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಲಿಂಗಾಯತ ನಾಯಕರುರು ಈಗಾಗಲೇ ತಂತ್ರ ಮಾಡುತ್ತಿದ್ದಾರೆ.
ಬಿಎಸ್ ಯಡಿಯೂರಪ್ಪನವರ ಬೆಂಬಲಿಗರು
ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿ ರಾಮಣ್ಣ ಲಮಾಣಿ ಇದ್ದಾರೆ. ಇವರು ಬಿಎಸ್ ಯಡಿಯೂರಪ್ಪನವರ ಬೆಂಬಲಿಗರು. ಹಾಲಿ ಶಾಸಕ ರಾಮಣ್ಣ ಲಮಾಣಿ ಬಗ್ಗೆ ಕ್ಷೇತ್ರದಲ್ಲಿ ಸದಭಿಪ್ರಾಯವಿಲ್ಲ. ಸಮಸ್ಯೆ ಹೇಳಿಕೊಂಡು ಬಂದವರಿಗೆ ಸಿಡಿಮಿಡಿ ಸ್ವಭಾವದ ಶಾಸಕರು ಸ್ಪಂದಿಸುವುದಿಲ್ಲ ಎಂಬ ಮಾತಿದೆ. ಎರಡು ಬಾರಿ ಎಮ್ಮೆಲ್ಲೆಯಾದರೂ ಕ್ಷೇತ್ರದ ನಾಡಿಮಿಡಿತ ಅರ್ಥಮಾಡಿಕೊಂಡು ಕೆಸಮಾಡಲು ವಿಫಲರಾಗಿದ್ದಾರೆ ಎಂದು ಕ್ಷೇತ್ರದಲ್ಲಿ ಬೇಸರವಿದೆ.
ರಾಮಣ್ಣ ಲಮಾಣಿಗೆ ಟಿಕೆಟ್ ಅನುಮಾನ
ಆದ್ದರಿಂದ ಈ ಬಾರಿ ರಾಮಣ್ಣ ಲಮಾಣಿಗೆ ಟಿಕೆಟ್ ಅನುಮಾನ ಎಂಬ ಮಾತುಗಳು ಬಿಜೆಪಿ ವಲಯದಿಂದ ಕೇಳಿಬರುತ್ತಿದೆ. ಸ್ಥಳೀಯ ಬಿಜೆಪಿಯ ಮೇಲೆ ಹಿಡಿತ ಹೊಂದಿರುವ ಮಾಜಿ ಶಾಸಕ ಮಹಾಂತಶೆಟ್ಟರ್ ನಿವೃತ್ತ ಸರ್ಕಾರಿ ವೈದ್ಯ ಡಾ.ಚಂದ್ರ ಲಮಾಣಿ ಬೆನ್ನಿಗೆ ನಿಂತಿದ್ದಾರೆ. ಕಳೆದ ಬಾರಿಯೆ ಟಿಕೆಟ್‌ಗೆ ಸಕಲ ಪ್ರಯತ್ನ ನಡೆಸಿದ್ದ ಹಳಿಯಾಳದ ಗುರುನಾಥ್ ದಾನಪ್ಪನವರ್‌ಗೆ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಕಾರ್ಯಕಾರಿ ಸದಸ್ಯ ಡಾ.ಭೀಮ್‌ಸಿಂಗ್ ರಾಠೋಡ್ ಮತ್ತು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಕೂಡ ಆಕಾಂಕ್ಷಿಗಳಾಗಿದ್ದಾರೆ.
ರಾಮಕೃಷ್ಣ ದೊಡ್ಮನಿ ಇಲ್ಲಿ ಪ್ರಬಲ ಆಕಾಂಕ್ಷಿ
ಕಾಂಗ್ರೆಸ್ ಟಿಕೆಟ್‌ಗೆ 14 ಜನರು ಲಾಭಿ ನಡೆಸಿದ್ದಾರೆ. ಮಾಜಿ ಶಾಸಕ ರಾಮಕೃಷ್ಣ ದೊಡ್ಮನಿ ಇಲ್ಲಿ ಪ್ರಬಲ ಆಕಾಂಕ್ಷಿ. ಆದರೆ ಸ್ಥಳೀಯ ಕಾಂಗ್ರೆಸ್ ಒಡೆಯನಂತಿರುವ ಮಾಜಿ ಶಾಸಕ ಗಡ್ಡದೇವರಮಠ್ ರಾಮಕೃಷ್ಣ ದೊಡ್ಮನಿಗೆ ವಿರೋಧವಾಗಿದ್ದಾರೆ ಎನ್ನಲಾಗಿದೆ. ಗಡ್ಡದೇವರಮಠ್ 2009ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಡಾ.ಬಿ.ತಿಪ್ಪೇಸ್ವಾಮಿಯನ್ನು ಬೆಂಬಲಿಸುತ್ತಿದ್ದಾರೆ. ಇದಲ್ಲದೆ ಡಾ.ತಿಪ್ಪೇಸ್ವಾಮಿ ಶಿರಹಟ್ಟಿಗೆ ವಲಸೆ ಬಂದು ಸಂಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಟಿಕೆಟ್‌ಗೆ ಸ್ಥಳೀಯ ಮುಖಂಡರ ಲಾಭಿ
ಇದಲ್ಲದೆ ತಿಪ್ಪೇಸ್ವಾಮಿ, ಸುಜಾತಾ ದೊಡ್ಮನಿ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದಾರೆ. ಒಟ್ಟಿನಲ್ಲಿ ಸದ್ಯದ ಸಮೀಕ್ಷೆಗಳು ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿಗೆ ಗೆಲ್ಲುವ ಸಮಾನ ಅವಕಾಶವಿದೆ.
ಶಿರಹಟ್ಟಿ
ವರ್ಷ - ಗೆದ್ದವರು - ಮತಗಳು - ಸೋತವರು - ಮತಗಳು
2018- ರಾಮಣ್ಣ ಲಮಾಣಿ (ಬಿಜೆಪಿ) -91,967 -ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ (ಕಾಂಗ್ರೆಸ್) 61,974
2013- ದೊಡ್ಡಮನಿ ರಾಮಕೃಷ್ಣ ಡಿ. ಲಿಂಗಪ್ಪ(ಕಾಂಗ್ರೆಸ್) - 44,738 - ರಾಮಣ್ಣ ಲಮಾಣಿ (ಬಿಜೆಪಿ)- 44,423
2008- ರಾಮಣ್ಣ ಲಮಾಣಿ (ಬಿಜೆಪಿ) - 39,859 - ಎಚ್.ಆರ್. ನಾಯಕ್ (ಕಾಂಗ್ರೆಸ್) - 29,358
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications