ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಥಹಳ್ಳಿ ನಂದಿತಾ ಸಾವು, ಸಿಐಡಿ ಪೊಲೀಸರು ಹೇಳಿದ್ದಿಷ್ಟು

|
Google Oneindia Kannada News

ಬೆಂಗಳೂರು, ಡಿ.10 : '7 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಬಳಿಕ ಎಂಟನೇ ತರಗತಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಗಿತ್ತು. ಈ ಬದಲಾವಣೆಯಿಂದ ಖಿನ್ನತೆಗೊಳದಾದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ'. ತೀರ್ಥಹಳ್ಳಿಯ ನಂದಿತಾ ಸಾವಿನ ತನಿಖೆ ನಡೆಸಿದ ಸಿಐಡಿ ಪೊಲೀಸರು ನೀಡಿರುವ ವರದಿ ಇದು.

ಹಲವಾರು ಗೊಂದಲಗಳಿಗೆ ಕಾರಣವಾಗಿದ್ದ ತೀರ್ಥಹಳ್ಳಿಯ 8ನೇ ವಿದ್ಯಾರ್ಥಿನಿ ನಂದಿತಾ ನಿಗೂಢ ಸಾವಿನ ರಹಸ್ಯ ಬಯಲಾಗಿದೆ. ನಂದಿತಾಳದ್ದು ಕೊಲೆ ಅಲ್ಲ, ಆತ್ಮಹತ್ಯೆ ಎಂಬ ಅಂಶವನ್ನು ಸಿಐಡಿ ಪೊಲೀಸರು ತನಿಖೆಯಿಂದ ಹೊರಹಾಕಿದ್ದಾರೆ.

Thirthahalli

ಮಂಗಳವಾರ ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ಅವರು ಪತ್ರಿಕಾಗೋಷ್ಠಿ ನಡೆಸಿ, ಇದುವರೆಗೂ ಶೇ.70ರಷ್ಟು ತನಿಖೆ ಪೂರ್ಣಗೊಂಡಿದೆ. ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದೇವೆ. ಶಾಲಾ ವಿದ್ಯಾರ್ಥಿನಿ ನಂದಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಖಚಿತಗೊಂಡಿದೆ ಎಂದು ಹೇಳಿದರು. [ತೀರ್ಥಹಳ್ಳಿಯ ನಂದಿತಾಳದ್ದು ಆತ್ಮಹತ್ಯೆ]

ಇಂಗ್ಲಿಶ್ ಕಾರಣ : ನಂದಿತಾ ಮೊದಲು ಸೇಂಟ್ ಮೇರಿಸ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಳು. 8 ತರಗತಿ ಓದಲು ಆಕೆಯನ್ನು ತೀರ್ಥಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಯಿತು.[ಡೆತ್‌ ನೋಟ್‌ ಪತ್ತೆ]

ಏಳನೇ ತರಗತಿವರೆಗೆ ಉತ್ತಮ ಅಂಕ ಗಳಿಸಿ ಶಾಲೆಗೆ ಪ್ರಥಮ ವಿದ್ಯಾರ್ಥಿ ಎನಿಸಿದ್ದ ನಂದಿತಾ, 8ನೇ ತರಗತಿಯಲ್ಲಿ ಎ ಶ್ರೇಣಿಯಿಂದ ಸಿ-ಡಿ ಶ್ರೇಣಿಗಿಳಿದಿದ್ದಳು. ತನ್ನ ಶೈಕ್ಷಣಿಕ ಪ್ರಗತಿ ಕುಂಠಿವಾಗಿದ್ದರಿಂದ ಮನನೊಂದ ಆಕೆ, ಪೋಷಕರು ಆಂಗ್ಲ ಮಾಧ್ಯಮಕ್ಕೆ ಬಲವಂತವಾಗಿ ಸೇರಿಸಿದ್ದ ಬಗ್ಗೆ ಸಹಪಾಠಿಗಳ ಜತೆ ಹೇಳಿಕೊಂಡಿದ್ದಳು. [ನಂದಿತಾ ಪ್ರಕರಣದ ವಿವರ ಇಲ್ಲಿದೆ]

ಇದರಿಂದಲೇ ಖಿನ್ನತೆಗೊಳಗಾದ ಆಕೆ, ಅ.31 ರಂದು ಆನಂದಗಿರಿ ಬೆಟ್ಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದುವರೆಗಿನ ತನಿಖೆಯಲ್ಲಿ ಬಯಲಾಗಿದೆ ಎಂದು ಬಿಪಿನ್ ಗೋಪಾಲಕೃಷ್ಣ ಅವರು ಮಾಹಿತಿ ನೀಡಿದರು.

ದೌರ್ಜನ್ಯ ನಡೆದಿಲ್ಲ : ನಂದಿತಾ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಅಲ್ಲದೇ ನಂದಿತಾ ಡೆತ್‌ನೋಟ್ ಅನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿತ್ತು. ಎಫ್‌ಎಸ್‌ಎಲ್ ತಜ್ಞರು ಡೆತ್‌ನೋಟ್‌ನಲ್ಲಿರುವ ಬರಹ ನಂದಿತಾಳದ್ದು ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ವಿವರಣೆ ನೀಡಿದರು.

English summary
The Criminal Investigation Department (CID) claimed that it had conclusive evidence that 14-year-old Nanditha, a girl from Thirthahalli, Shivamogga district, had committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X