ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಾಲಿ ಫೋಗಟ್‌ನ ಸಾವಿಗೂ ಮುನ್ನ ಮದ್ಯ ಕುಡಿಸಿದ್ದ ಆರೋಪಿಗಳು- ಗೋವಾ ಪೊಲೀಸ್

|
Google Oneindia Kannada News

ರಾಂಚಿ, ಆಗಸ್ಟ್ 27: 'ಕೊಲೆ' ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಇಬ್ಬರು ಸಹಚರರು ಆಕೆಗೆ ಮದ್ಯ ಕುಡಿಸಿದ್ದಾರೆ ಎಂದು ಗೋವಾ ಪೊಲೀಸರು ಶಂಕಿಸಿದ್ದಾರೆ. ಇಬ್ಬರೂ ಆರೋಪಿಗಳು ಅಂಜುನಾದಲ್ಲಿನ ರೆಸ್ಟೋರೆಂಟ್‌ನಲ್ಲಿ ಪಾರ್ಟಿಯಲ್ಲಿ ಅವರಿಗೆ ನೀಡಲಾದ ದ್ರವದಲ್ಲಿ "ಕೆಲವು ರಾಸಾಯನಿಕ ಪದಾರ್ಥ" ವನ್ನು ಬೆರೆಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಓಂವಿರ್ ಸಿಂಗ್ ಬಿಷ್ಣೋಯ್ ಹೇಳಿದ್ದಾರೆ.

ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮುಗಿದ ನಂತರ, ಇಬ್ಬರನ್ನು ಮತ್ತೊಮ್ಮೆ ವಿಚಾರಣೆ ನಡೆಸಿ ಶುಕ್ರವಾರ ಸಂಜೆ ಅಥವಾ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಿಜೆಪಿ ನಾಯಕಿಯ ಇಬ್ಬರು ಸಹಚರರನ್ನು ಆರೋಪಿಗಳೆಂದು ದೃಢಪಡಿಸಲಾಗಿದೆ ಮತ್ತು ಬಂಧಿಸಲಾಗಿದೆ ಎಂದು ಗೋವಾ ಐಜಿಪಿ ತಿಳಿಸಿದ್ದಾರೆ. ಹೆಚ್ಚಿನ ಸಾಕ್ಷ್ಯ ಪಡೆಯಲು ಗೋವಾ ಐಜಿಪಿ ವಿವಿಧ ಸ್ಥಳಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

"ಆರೋಪಿಗಳಲ್ಲಿ ಒಬ್ಬರು ಆಕೆಗೆ ಬಲವಂತವಾಗಿ ವಸ್ತುವನ್ನು ಸೇವಿಸುವಂತೆ ಮಾಡಿದ್ದಾರೆ ಎಂದು ವಿಡಿಯೊ ಹೇಳುತ್ತದೆ. ಆರೋಪಿಗಳಾದ ಸುಖ್ವಿಂದರ್ ಸಿಂಗ್ ಮತ್ತು ಸುಧೀರ್ ಸಂಗ್ವಾನ್ ಅವರು ಉದ್ದೇಶಪೂರ್ವಕವಾಗಿ ದ್ರವಕ್ಕೆ ಅಪೇಕ್ಷಿತ ರಾಸಾಯನಿಕವನ್ನು ಬೆರೆಸಿ ಅದನ್ನು ಕುಡಿಯುವಂತೆ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ" ಎಂದು ಗೋವಾ ಐಜಿಪಿ ತಿಳಿಸಿದ್ದಾರೆ.

ಓಂವಿರ್ ಸಿಂಗ್ ಬಿಷ್ಣೋಯ್ ಹೇಳಿಕೆ

ಓಂವಿರ್ ಸಿಂಗ್ ಬಿಷ್ಣೋಯ್ ಹೇಳಿಕೆ

ಆಕೆಯ ಹತ್ಯೆಯ ಹಿಂದಿನ ಉದ್ದೇಶವು "ಆರ್ಥಿಕ ಹಿತಾಸಕ್ತಿ" ಆಗಿರಬಹುದು ಎಂದು ಹಿರಿಯ ಪೊಲೀಸರು ಶಂಕಿಸಿದ್ದಾರೆ. ಫೋಗಟ್ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ಸುಧೀರ್ ಸಗ್ವಾನ್ ಮತ್ತು ಸುಖವಿಂದರ್ ಸಿಂಗ್ ಆಕೆಯ ಸಹಚರರಾಗಿದ್ದು, ಆಗಸ್ಟ್ 22 ರಂದು ಆಕೆಯೊಂದಿಗೆ ಗೋವಾಕ್ಕೆ ಆಗಮಿಸಿದ್ದರು.

ಉತ್ತರ ಗೋವಾ ಜಿಲ್ಲೆಯ ಅಂಜುನಾದಲ್ಲಿರುವ ಕರ್ಲೀಸ್ ರೆಸ್ಟೋರೆಂಟ್‌ನಲ್ಲಿ ಆಗಸ್ಟ್ 22 ಮತ್ತು 23 ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಬಿಷ್ಣೋಯ್ ಹೇಳಿದ್ದಾರೆ. ಸಗ್ವಾನ್ ಮತ್ತು ಸಿಂಗ್ ಅವರು ಉದ್ದೇಶಪೂರ್ವಕವಾಗಿ ಆಕೆಯ ಪಾನೀಯಗಳಲ್ಲಿ ಪದಾರ್ಥವನ್ನು ಬೆರೆಸಿದ್ದಾರೆ ಎಂದು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಐಜಿಪಿ ಅವರು ಹೇಳಿದರು.

ಎರಡು ಗಂಟೆಗಳ ಕಾಲ ವಾಶ್‌ರೂಮ್‌ನಲ್ಲಿದ್ದ ಫೋಗಟ್

ಎರಡು ಗಂಟೆಗಳ ಕಾಲ ವಾಶ್‌ರೂಮ್‌ನಲ್ಲಿದ್ದ ಫೋಗಟ್

ಇಬ್ಬರು ವ್ಯಕ್ತಿಗಳು ಆಗಸ್ಟ್ 23 ರಂದು ಮುಂಜಾನೆ 4.30 ರ ಸುಮಾರಿಗೆ ಫೋಗಟ್ ಅನ್ನು ರೆಸ್ಟೋರೆಂಟ್‌ನ ವಾಶ್‌ರೂಮ್‌ಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅವರಲ್ಲಿ ಮೂವರು ಎರಡು ಗಂಟೆಗಳ ಕಾಲ ವಾಶ್‌ರೂಮ್‌ನಲ್ಲಿದ್ದರು ಎಂದು ಐಜಿಪಿ ಅವರು ಹೇಳಿದರು.

ಕಸ್ಟಡಿಯಲ್ ವಿಚಾರಣೆಯು ಆ ಎರಡು ಗಂಟೆಗಳಲ್ಲಿ ಏನಾಯಿತು ಎಂಬುದರ ಕುರಿತು ಬೆಳಕು ಚೆಲ್ಲುತ್ತದೆ ಎಂದು ಬಿಷ್ಣೋಯ್ ಹೇಳಿದರು. ಪಾರ್ಟಿಯಲ್ಲಿ ಆರೋಪಿಗಳ ಜೊತೆ ಇನ್ನಿಬ್ಬರು ಮಹಿಳೆಯರು ಕೂಡ ಇದ್ದು ಕೇಕ್ ಕತ್ತರಿಸುತ್ತಿರುವುದು ಕಂಡು ಬಂದಿದ್ದು, ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಫೋಗಟ್ ದೇಹದ ಮೇಲೆ ಗಾಯಗಳ ಗುರುತು

ಫೋಗಟ್ ದೇಹದ ಮೇಲೆ ಗಾಯಗಳ ಗುರುತು

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾದ ಆಕೆಯ ದೇಹದ ಮೇಲೆ ಗಾಯಗಳ ಬಗ್ಗೆ ಕೇಳಿದಾಗ, ಆರೋಪಿಗಳ ಪ್ರಕಾರ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಏನೋ ತಾಗಿ ಉಂಟಾಗಿರಬಹುದು ಎಂದು ಬಿಷ್ಣೋಯ್ ಹೇಳಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಯಾವುದೇ ಗಾಯಗಳಿರಲಿಲ್ಲ, ಹೀಗಾಗಿ ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಶಂಕಿಸಿದ್ದಾರೆ ಎಂದು ಐಜಿಪಿ ತಿಳಿಸಿದ್ದಾರೆ.

ಆದರೆ ಫೋಗಟ್ ಅವರು ರೆಸ್ಟೋರೆಂಟ್‌ನಲ್ಲಿ ತಿನ್ನಿಸಿದ ಪದಾರ್ಥದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ ಎಂದು ಅವರು ಹೇಳಿದರು. ಕರ್ಲೀಸ್ ರೆಸ್ಟೋರೆಂಟ್‌ನಿಂದ ಆಕೆ ತಂಗಿದ್ದ ರೂಮ್‌ ವರೆಗೆ ಮತ್ತು ಆಸ್ಪತ್ರೆಗೆ ಕರೆದೊಯ್ದ ಟ್ಯಾಕ್ಸಿ ಚಾಲಕರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ ಎಂದು ಬಿಷ್ಣೋಯ್ ಹೇಳಿದ್ದಾರೆ.

ಸಿಬ್ಬಂದಿ ವಿರುದ್ಧ ದೂರು

ಸಿಬ್ಬಂದಿ ವಿರುದ್ಧ ದೂರು

ನಟಿಯ ಸಹೋದರ ರಿಂಕು ಢಾಕಾ ನೀಡಿರುವ ದೂರಿನಲ್ಲಿ, ಆಗಸ್ಟ್ 23 ರಂದು ಸಾಯುವ ಕೆಲವು ಗಂಟೆಗಳ ಮೊದಲು ಫೋಗಟ್ ತನ್ನ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಮಾತನಾಡಿದ್ದರು ಎಂದು ಹೇಳಿದ್ದಾರೆ. ಸಂಭಾಷಣೆಯ ಸಮಯದಲ್ಲಿ ಸೋನಾಲಿ ತನ್ನ ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು ಎಂದು ಅವರು ಹೇಳಿದ್ದಾರೆ. "ಸಾಂಗ್ವಾನ್ ತನಗೆ ಕೆಲವು ಅಮಲು ಪದಾರ್ಥಗಳನ್ನು ಬೆರೆಸಿದ ಆಹಾರವನ್ನು ನೀಡಿದ್ದಾನೆ, ತನ್ನ ಮೇಲೆ ಅತ್ಯಾಚಾರ ಮತ್ತು ವಿಡಿಯೋವನ್ನು ಮಾಡಿದ್ದಾನೆ. ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಅವಳು (ಸೋನಾಲಿ) ಹೇಳಿದ್ದಾಳೆ" ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.

English summary
Goa Police suspects that two of BJP leader Sonali Phogat's associates, who have been named as accused in "murder" case, had spiked her drink.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X