• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಜಾಬ್‌ ನಂತರ ಈಗ ಜಾರ್ಖಾಂಡ್‌ನಲ್ಲೂ ಬಡವರಿಗೆ ಉಚಿತ ವಿದ್ಯುತ್‌

|
Google Oneindia Kannada News

ರಾಂಚಿ,ಜುಲೈ,16: ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಗ್ರಾಹಕರಿಗೆ ತಿಂಗಳಿಗೆ 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾಪವನ್ನು ಜಾರ್ಖಂಡ್ ಸಚಿವ ಸಂಪುಟ ಅಂಗೀಕರಿಸಿದೆ.

ಒಟ್ಟು 55 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಸಂಪುಟ ಕೈಗೊಂಡಿದೆ. ಕೆಲವು ಷರತ್ತುಗಳೊಂದಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸಂಪುಟವು ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತು. ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ಮರಳಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಕರಡು ರೂಪಿಸಲು ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು.

ಪಂಜಾಬ್‌ನ ಪ್ರತಿ ಮನೆಗೂ 300 ಯೂನಿಟ್‌ ಉಚಿತ ವಿದ್ಯುತ್‌ಪಂಜಾಬ್‌ನ ಪ್ರತಿ ಮನೆಗೂ 300 ಯೂನಿಟ್‌ ಉಚಿತ ವಿದ್ಯುತ್‌

ಹಳೆಯ ಪಿಂಚಣಿ ಯೋಜನೆಗೆ ಪರಿವರ್ತನೆಗಾಗಿ ಅಭಿವೃದ್ಧಿ ಆಯುಕ್ತರು ಮತ್ತು ಹಣಕಾಸು ಮತ್ತು ಸಿಬ್ಬಂದಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಅನ್ನು ಹೊರತರುತ್ತಾರೆ ಮತ್ತು ಅದನ್ನು ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು ಎಂದು ಸಂಪುಟ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ವಂದನಾ ದಾಡೆಲ್ ಹೇಳಿದರು.

 ನರೇಗಾ ಕಾರ್ಮಿಕರಿಗೆ 27 ರೂ. ಹೆಚ್ಚುವರಿ ಮೊತ್ತ

ನರೇಗಾ ಕಾರ್ಮಿಕರಿಗೆ 27 ರೂ. ಹೆಚ್ಚುವರಿ ಮೊತ್ತ

ಜಾರ್ಖಂಡ್‌ನ ಸ್ಥಳೀಯ ನಿವಾಸಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿಗಾಗಿ ನಿಯಮಗಳು ಮತ್ತು ನಿಬಂಧನೆಗಳನ್ನು ಸಹ ಕ್ಯಾಬಿನೆಟ್ ಅನುಮೋದಿಸಿದೆ. ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ 75ರಷ್ಟು ಮೀಸಲಾತಿ ನೀಡಲು ರಾಜ್ಯ ಸಚಿವ ಸಂಪುಟ ಮೊದಲೇ ನಿರ್ಧರಿಸಿತ್ತು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (ನರೇಗಾ) ಅಡಿಯಲ್ಲಿ ಸೇರ್ಪಡೆಗೊಂಡ ಕಾರ್ಮಿಕರಿಗೆ ರಾಜ್ಯ ಸರ್ಕಾರವು 27 ರೂ ಹೆಚ್ಚುವರಿ ಮೊತ್ತವನ್ನು ನೀಡುತ್ತದೆ. ನರೇಗಾ ಅಡಿಯಲ್ಲಿ ನೋಂದಾಯಿಸಲಾದ ಕಾರ್ಮಿಕರ ಕನಿಷ್ಠ ಕೂಲಿಯನ್ನು ರೂ 237ಕ್ಕೆ ಹೆಚ್ಚಿಸಲಾಗುವುದು ಎಂದು ನಿರ್ಧರಿಸಲಾಯಿತು.

ರಾಂಚಿ ಗಲಭೆ; ಇಂಟರ್‌ನೆಟ್ ಸೇವೆ ಆರಂಭ, ಗಲಭೆ ಕುರಿತು ಎಸ್‌ಐಟಿ ತನಿಖೆರಾಂಚಿ ಗಲಭೆ; ಇಂಟರ್‌ನೆಟ್ ಸೇವೆ ಆರಂಭ, ಗಲಭೆ ಕುರಿತು ಎಸ್‌ಐಟಿ ತನಿಖೆ

 ಆಹಾರ ಧಾನ್ಯಗಳ ವಿತರಣೆ ನಿರ್ಧಾರ

ಆಹಾರ ಧಾನ್ಯಗಳ ವಿತರಣೆ ನಿರ್ಧಾರ

ಹೀಗಾಗಿ ಕಾಂಗ್ರೆಸ್ ನಾಯಕ ಅಲೋಕ್ ದುಬೆ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಅಲೋಕ್ ದುಬೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕ್ಯಾಬಿನೆಟ್ ತೆಗೆದುಕೊಂಡಿರುವ ಆಹಾರ ಧಾನ್ಯಗಳನ್ನು ವಿತರಿಸುವ ನಿರ್ಧಾರ ಐತಿಹಾಸಿಕವಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಉತ್ತಮವಾಗಿದೆ. ಇದು ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಬರುವವರಿಗೆ ಅನುಕೂಲವಾಗಲಿದೆ ಎಂದು ಅಲೋಕ್ ದುಬೆ ಹೇಳಿದರು.

 ಆಗಸ್ಟ್‌ 1ಕ್ಕೆ ಮೊದಲ ಪೂರಕ ಬಜೆಟ್

ಆಗಸ್ಟ್‌ 1ಕ್ಕೆ ಮೊದಲ ಪೂರಕ ಬಜೆಟ್

ಜುಲೈ 16 ರ ಶನಿವಾರದಂದು ಜಾರ್ಖಂಡ್ ಇತಿಹಾಸವನ್ನು ಬರೆಯಲಿದೆ ಮತ್ತು ಸುಮಾರು 10,000 ಉದ್ಯೋಗಗಳನ್ನು ಯುವಕರಿಗೆ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ಅಲೋಕ್ ದುಬೆ ಹೇಳಿದರು. ಏತನ್ಮಧ್ಯೆ, ಜಾರ್ಖಂಡ್ ವಿಧಾನಸಭೆಯ ಮುಂಗಾರು ಅಧಿವೇಶನವು ಜುಲೈ 29 ರಿಂದ ಪ್ರಾರಂಭವಾಗಲಿದೆ ಮತ್ತು ಆಗಸ್ಟ್ 5 ರಂದು ಕೊನೆಗೊಳ್ಳಲಿದೆ. ರಾಜ್ಯ ಸರ್ಕಾರವು ಆಗಸ್ಟ್ 1 ರಂದು ಪ್ರಸಕ್ತ ಹಣಕಾಸು ವರ್ಷಕ್ಕೆ ತನ್ನ ಮೊದಲ ಪೂರಕ ಬಜೆಟ್ ಅನ್ನು ಮಂಡಿಸಲಿದೆ.

 300 ಯೂನಿಟ್‌ ಉಚಿತ ವಿದ್ಯುತ್

300 ಯೂನಿಟ್‌ ಉಚಿತ ವಿದ್ಯುತ್

ತಮ್ಮ ಸರ್ಕಾರವು ಹೇಳಿದಂತೆ ರಾಜ್ಯದ ಜನರಿಗೆ ಮಾಡಿದ ಭರವಸೆಯನ್ನು ಪೂರೈಸುತ್ತಿದೆ. ಜುಲೈ 1 ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಎಎಪಿ ಸರ್ಕಾರ ಈ ಹಿಂದೆ ಘೋಷಿಸಿತ್ತು. ಅದರಂತೆ ಈಗ ಜುಲೈ 1ರಿಂದ ಪ್ರತಿ ಮನೆಗೆ ಪ್ರತಿ ತಿಂಗಳು 300 ಯೂನಿಟ್‌ ಉಚಿತ ವಿದ್ಯುತ್ ಸಿಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದರು. ಅದರಂತೆ ಈಗ ಜಾರ್ಖಂಡ್‌ನಲ್ಲೂಈಗ ಬಡವರಿಗೆ 100 ಯುನಿಟ್‌ ಉಚಿತ ವಿದ್ಯುತ್‌ ನೀಡಲು ಮುಂದಾಗಿದೆ.

English summary
Jharkhand cabinet has approved a proposal to provide free electricity up to 100 units per month to economically weaker section consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X