ರೋಪ್‌ವೇ ದುರಂತ: 40 ಗಂಟೆಗಳ ನಂತರವೂ ಸಿಗದ 6 ಜನರ ಪತ್ತೆ ಕಾರ್ಯ

ರಾಂಚಿ ಏಪ್ರಿಲ್ 12: ಜಾರ್ಖಂಡ್‌ನ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‌ವೇ ಕೇಬಲ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು 40 ಗಂಟೆಗಳ ನಂತರವೂ ಎಂಟು ಜನರು ಮೂರು ಕಾರುಗಳಲ್ಲಿ ಸಿಲುಕಿಕೊಂಡಿದ್ದಾರೆ. ಸುಮಾರು 39 ಮಂದಿಯನ್ನು ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು ಮತ್ತು ಅಧಿಕಾರಿಗಳ ತಂಡ ಅಪಾಯಕಾರಿ ಕಾರ್ಯಾಚರಣೆ ಮೂಲಕ ರಕ್ಷಿಸಿದೆ.

ಭಾರತೀಯ ವಾಯುಪಡೆ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಂಯೋಜಿತ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ದಿಯೋಘರ್ ಡೆಪ್ಯುಟಿ ಕಮಿಷನರ್ ಮಂಜುನಾಥ ಭಜಂತ್ರಿ ಹೇಳಿದ್ದಾರೆ. ಡ್ರೋನ್‌ಗಳ ಸಹಾಯದಿಂದ ಸಿಕ್ಕಿಬಿದ್ದ ಜನರಿಗೆ ನೀರು ಮತ್ತು ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಸಂಜೆ ಹೆಲಿಕಾಪ್ಟರ್‌ನಿಂದ ವ್ಯಕ್ತಿಯೊಬ್ಬರನ್ನು ರಕ್ಷಿಸುವ ವೇಳೆ ಕೆಳಗೆ ಬಿದ್ದು ಅಪಘಾತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

Jharkhand Ropeway Accident: Over 40 Hours On, 6 Still Stuck In Jharkhand Cable Car Disaster

ನಿನ್ನೆ ಸಂಜೆ ಸೂರ್ಯಾಸ್ತದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು. ಏಕೆಂದರೆ ರೋಪ್‌ವೇ ಬೆಟ್ಟಗಳಿಂದ ಆವೃತವಾದ ಸುಂದರವಾದ ಮತ್ತು ದಟ್ಟವಾದ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತದೆ. ಗಾಳಿಯಿಂದಾಗಿ ಪ್ರವೇಶದಲ್ಲಿ ಕಾರ್ಯಚರಣೆ ಕಷ್ಟಕರವಾಗಿದಿದ್ದರಿಂದ ಕಾರ್ಯಚರಣೆ ನಿನ್ನೆ ರಾತ್ರಿ ಸ್ಥಗಿತಗೊಳಿಸಲಾಗಿತ್ತು.

ರೋಪ್‌ವೇ ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆದೇಶಿಸಿದ್ದಾರೆ. "ತ್ರಿಕುಟ್ ಪರ್ವತದ ಮೇಲಿನ ಘಟನೆ ಮತ್ತು ಅದರಲ್ಲಿನ ಸಾವುಗಳ ಬಗ್ಗೆ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿದೆ" ಎಂದು ಮುಖ್ಯಮಂತ್ರಿ ನಿನ್ನೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Jharkhand Ropeway Accident: Over 40 Hours On, 6 Still Stuck In Jharkhand Cable Car Disaster

ಜಾರ್ಖಂಡ್ ಪ್ರವಾಸೋದ್ಯಮ ಇಲಾಖೆಯ ಪ್ರಕಾರ ತ್ರಿಕುಟ್ ರೋಪ್‌ವೇ ಭಾರತದ ಅತಿ ಎತ್ತರದ ರೋಪ್‌ವೇ ಆಗಿದೆ. ಇದು ಸುಮಾರು 766 ಮೀಟರ್ ಉದ್ದವಿದೆ. ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ರೋಪ್‌ವೇ ಸುಮಾರು 766-ಮೀಟರ್ ಉದ್ದವಿದ್ದರೆ, ಬೆಟ್ಟವು 392-ಮೀಟರ್ ಎತ್ತರವಾಗಿದೆ. ರೋಪ್‌ವೇಯಲ್ಲಿ 25 ಕ್ಯಾಬಿನ್‌ಗಳಿವೆ. ಪ್ರತಿ ಕ್ಯಾಬಿನ್‌ನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದಾಗಿದೆ.

ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‌ವೇ ಕೇಬಲ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅಧಿಕಾರಿಗಳ ಪ್ರಕಾರ, ರೋಪ್‌ವೇಯಲ್ಲಿನ 12 ಕ್ಯಾಬಿನ್‌ಗಳಲ್ಲಿನ 48 ಜನರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ರಕ್ಷಣಾ ಮಾಡಿದೆ. ಇದರಲ್ಲಿ ಇನ್ನೂ 6 ಜನ ಸಿಲುಕಿಕೊಂಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಇವರ ರಕ್ಷಣೆ ಕಾರ್ಯ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+