Get Updates
Get notified of breaking news, exclusive insights, and must-see stories!

''ಎಸ್ಸಿ, ಎಸ್ಟಿ, ಒಬಿಸಿಗೆ ಶೇ67ರಷ್ಟು ಮೀಸಲಾತಿ ಆಶ್ವಾಸನೆ"

ರಾಂಚಿ, ನವೆಂಬರ್ 27: ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಈ ಬಾರಿ ಚುನಾವಣೆಯಲ್ಲಿ ಮೀಸಲಾತಿ ದಾಳ ಎಸೆದಿದೆ. ಜೆಎಂಎಂ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದವರಿಗೆ ಶೇ 67ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡುವುದಾಗಿ ಘೋಷಿಸಿದೆ.

ಜೆಎಂಎಂ ಪಕ್ಷ ಶಿಬು ಶೊರೆನ್ ಹಾಗೂ ಅವರ ಪುತ್ರ ಹೇಮಂತ್ ಅವರು ತಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಮಾತನಾಡುತ್ತಾ, ನಿರುದ್ಯೋಗಿ ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು 5000 ರು ನಿಂದ 70000 ರು ಭತ್ಯೆ ನೀಡಲಾಗುವುದು, ಖಾಸಗಿ ವಲಯದಲ್ಲೂ ಶೇ 75ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್, ಆರ್ ಜೆಡಿ ಜೊತೆ ಕೈಜೋಡಿಸಿದರುವ ಜೆಎಂಎಂ, ಎಸ್ಟಿಗೆ ಶೇ 28,ಒಬಿಸಿಗೆ ಶೇ27ರಷ್ಟು ಹಾಗೂ ಶೇ 12ರಷ್ಟು ಎಸ್ಸಿಗಳಿಗೆ ಮೀಸಲಾತಿ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಬಡ ಕುಟುಂಬಕ್ಕೆ ವಾರ್ಷಿಕ 72000 ರು ಆದಾಯ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ವೃದ್ಧರು, ವಿಶೇಷ ಚೇತನರಿಗೆ ತಿಂಗಳಿಗೆ 2500 ರು ಪಿಂಚಣಿ ಒದಗಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

Jharkhand polls: JMM manifesto promises 67 pc reservation for ST, OBC, SC

ಇದಲ್ಲದೆ, ಮಹಿಳೆಯರಿಗೆ ಬ್ಯಾಂಕ್, ಅಡುಗೆ ಮನೆ ಖರ್ಚಿಗೆ 2000 ರು ನೀಡುವುದು, ಕಿಸಾನ್ ಬ್ಯಾಂಕ್ ಸ್ಥಾಪಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು, ಭತ್ತಕ್ಕೆ 2300 ರು ಬೆಂಬಲ ಬೆಲೆ ಎಂದು ನಿಗದಿಪಡಿಸಲಾಗಿದೆ.

ಜಾರ್ಖಂಡ್ ರಾಜ್ಯದಲ್ಲಿ ಐದು ಸುತ್ತಿನಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 30 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 23ರಂದು ಕೊನೆ ಹಂತದ ಮತದಾನ ನಿಗದಿಯಾಗಿದೆ.

ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವನೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳ್ಲಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+