• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಪಾಕಿಸ್ತಾನ ಪ್ರಜೆಗಳಿಗೆ ಕಾಂಗ್ರೆಸ್ ಭಾರತೀಯ ಪೌರತ್ವ ನೀಡುತ್ತಾ'?

|

ರಾಂಚಿ, ಡಿಸೆಂಬರ್ 17: "ಕಾಂಗ್ರೆಸ್ ಗೆ ದೈರ್ಯವಿದ್ದರೆ ಪಾಕಿಸ್ತಾನ ಪ್ರಜೆಗಳಿಗೆ ಪೌರತ್ವ ನೀಡುತ್ತೇವೆ ಎಂದು ಹೇಳಲಿ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸವಾಲು ಹಾಕಿದ್ದಾರೆ.

ಝಾರ್ಖಂಡನಲ್ಲಿ ನಡೆಯುತ್ತಿರುವ 5 ನೇ ಹಂತದ ವಿಧಾನಸಭೆ ಚುನಾವಣೆಯ ಪ್ರಚಾರ ಭಾಷಣದ ವೇಳೆ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತ ಮಾಡುವುದಲ್ಲದೇ, ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವ ನೀಡುತ್ತಿದೆ ಎಂದು ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ದೇಶದ ಮುಸ್ಲೀಂರಲ್ಲಿ ಪೌರತ್ವ ಕಾಯ್ದೆ ತೋರಿಸಿ ಭಯ ಹರಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಜನರಿಗೆ ಸುಳ್ಳು ಹೇಳುತ್ತಿದೆ' ಎಂದು ಅವರು ಆರೋಪಿಸಿದ್ದಾರೆ. ಹಾಗೂ ಅದರ ನಾಯಕರಿಗೆ ಧೈರ್ಯವಿದ್ದರೆ, ಪಾಕಿಸ್ತಾನದ ಪ್ರಜೆಗಳಿಗೆ ನಾವು ಭಾರತೀಯ ಪೌರತ್ವ ನೀಡುತ್ತೇವೆ ಎಂದು ಹೇಳಲಿ. ರದ್ದು ಮಾಡಿರುವ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ' ಎಂದು ಹೇಳಲಿ ನೋಡೋಣ ಎಂದು ಕೆಣಕಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿ ಹೋರಾಟದ ಬಗ್ಗೆ 'ನಮೋ' ಮಾತು

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಸಂಸತ್ ಅನುಮೋದನೆ ಪಡೆದುಕೊಂಡು ಕಾಯ್ದೆ ಆಗಿದೆ. ಇದರ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳು ಈಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಯ್ದೆ ರದ್ದು ಮಾಡಬೇಕು ಎಂದು ವಿರೋಧ ಪಕ್ಷಗಳು ಹಾಗೂ ಹಲವು ಸಂಘಟನೆಗಳು ಸುಪ್ರೀಂಕೋರ್ಟನಲ್ಲಿ ಸಲ್ಲಿಸಿರುವ ಅರ್ಜಿ ಡಿ.೧೮ ಕ್ಕೆ ವಿಚಾರಣೆಗೆ ಬರಲಿದೆ.

English summary
If Congress Dares They Give Citizenship For Pak Citizens PM Narendra Modi Said In Ranchi, Jharkhand Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X