ಲಾಕ್‌ಡೌನ್ ನಡುವೆ ಸಾತನೂರು ಪೊಲೀಸರ ಸಮ್ಮುಖದಲ್ಲಿ ನಡೆಯಿತು ಮದುವೆ

ರಾಮನಗರ, ಏಪ್ರಿಲ್ 23: ಪೊಲೀಸರೇ ಮುಂದಾಳತ್ವ ವಹಿಸಿ ವಿಧವೆಯೊಬ್ಬರಿಗೆ ಇಂದು ಮರುಮದುವೆ ಮಾಡಿಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸಾತನೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

Recommended Video

      ಕೊರೊನಾದಿಂದ ಸರಳ ವಿವಾಹವಾಗಲು ಮುಂದಾದ ನಿಖಿಲ್ | Oneindia Kannada

      ಅಂತರ ಜಾತಿ ಕಾರಣದಿಂದ ಮೂರು ವರ್ಷಗಳ ಹಿಂದೆ ಬೇರೆಯಾಗಿದ್ದ ಪವನ್ ಮತ್ತು ಶ್ರುತಿ ಇಂದು ಮದುವೆಯಾಗಿದ್ದಾರೆ. ಸಾತನೂರು ಪೊಲೀಸರ ಮಧ್ಯಸ್ಥಿಕೆಯಲ್ಲಿ ಹಾರ ಬದಲಿಸಿಕೊಳ್ಳುವ ಮೂಲಕ ಮದುವೆ ನಡೆದಿದೆ.

      ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದ ತಾವರಗಟ್ಟೆ ಗ್ರಾಮದ ಪವನ್ ಮತ್ತು ಮೂಲೆಮನೆ ಗ್ರಾಮದ ಶ್ರುತಿ ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಪೋಷಕರ ವಿರೋಧದಿಂದ ಬೇರ್ಪಟ್ಟಿದ್ದರು. ಶ್ರುತಿಗೆ ಬೇರೆ ಯುವಕನೊಂದಿಗೆ ವಿವಾಹವಾಗಿತ್ತು. ಇತ್ತೀಚಿಗೆ ಶ್ರುತಿ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಈಕೆ ಕೈ ಹಿಡಿಯಲು ಪವನ್ ಮುಂದಾಗಿದ್ದರು.

      Widow Remarriage Happened At Satanuru Police Station Today

      ಪವನ್ ಶ್ರುತಿಯನ್ನು ಮದುವೆಯಾಗುವ ವಿಚಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪವನ್ ನ್ಯಾಯ ಕೇಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ವಿಚಾರಣೆ ನಡೆಸಿದ ಪೊಲೀಸರು ಠಾಣೆಯಲ್ಲೇ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ. ಲಾಕ್ ಡೌನ್ ನಡುವೆ ಇಬ್ಬರೂ ಸಾತನೂರು ಪಿಎಸ್ಐ ಮುರಳಿ ಸಮ್ಮುಖದಲ್ಲಿ‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಠಾಣೆಯಲ್ಲೇ ಮದುವೆಯಾದ ನವ ಜೋಡಿಗಳಿಗೆ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಶುಭಾಶಯ ಕೋರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+