ನಾವು ಏಳೂ ಶಾಸಕರ ಮತ ಕಾಂಗ್ರೆಸ್ ಗೆ, ದೇವೇಗೌಡರಿಗೆ ಈಗ ನಮ್ಮ ನೆನಪು

ರಾಮನಗರ, ಮಾರ್ಚ್ 14: ರಾಜ್ಯಸಭಾ ಚುನಾವಣೆಯಲ್ಲಿ ನಾವು ಏಳೂ ಶಾಸಕರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತೇವೆ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ (ಮಾಗಡಿ ವಿಧಾನಸಭಾ ಕ್ಷೇತ್ರ) ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಖಾಸಗಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ತೊಂದರೆ ಇಲ್ಲದೆ ಜಯ ಗಳಿಸುತ್ತದೆ. ನಾವು ಏಳೂ ಶಾಸಕರ ಮತಗಳಿವೆ. ಜತೆಗೆ ಪಕ್ಷೇತರರು ಮತ್ತು ಕಾಂಗ್ರೆಸ್ ಹೆಚ್ಚುವರಿ ಮೂವತ್ತು ಶಾಸಕರ ಮತಗಳಿವೆ ಎಂದು ಹೇಳಿದರು.
ನಾವು ಈಗಾಗಲೇ ಕಾಂಗ್ರೆಸ್ ಪಕ್ಷದೂಂದಿಗೆ ಗುರುತಿಸಿಕೊಂಡಿದ್ದೇವೆ. ಮತ್ತು ಕಾಂಗ್ರೆಸ್ ನಲ್ಲೇ ಇದ್ದೇವೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುತ್ತೇವೆ, ಪಕ್ಷದ ಅಭ್ಯರ್ಥಿ ಜಯ ಗಳಿಸುತ್ತಾರೆ ಎಂದು ತಿಳಿಸಿದರು
ಇನ್ನು ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ವತಿಯಿಂದ ಶಾಸಕರಿಗೆ ವಿಪ್ ಜಾರಿಗೊಳಿಸುವ ಬಗ್ಗೆ ಮಾತನಾಡಿದ ಅವರು, ನಮ್ಮ ಮಾಜಿ ನಾಯಕರಾದ ದೇವೇಗೌಡರಿಗೆ ನಾವು ಈಗ ನೆನಪಾಗಿದ್ದೇವೆ, ಏನು ಮಾಡುವುದು ಎಂದು ವ್ಯಂಗ್ಯವಾಡಿದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !