ಕನಕಪುರ; ಕೊನೆಗೂ ದೇಗುಲ ಮಠಕ್ಕೆ ವಾಪಸಾದ ಮೂವರು ಮಕ್ಕಳು

ರಾಮನಗರ, ನವೆಂಬರ್‌, 14; ಕನಕಪುರದ ದೇಗುಲ ಮಠದಿಂದ ಮೂವರು ಬಾಲಕರು ನವೆಂಬರ್‌ 8ರ ರಾತ್ರಿ ಊಟ ಮಾಡಿ ನಂತರ ನಾಪತ್ತೆಯಾಗಿದ್ದರು. ಇದೀಗ ಮಕ್ಕಳು ಮಠಕ್ಕೆ ಮರಳಿದ ಹಿನ್ನೆಲೆ ಪ್ರಕರಣ ಸುಖಾಂತ್ಯ ಕಂಡಿದೆ‌. ಈ ಬಗ್ಗೆ ಸ್ವತಃ ಬಾಲಕರೇ ಪ್ರತಿಕ್ರಿಯಿಸಿದ್ದು, ಮಠಕ್ಕೆ ಮರಳಿ ಸ್ನೇಹಿತರ ಮನೆಗೆ ಹೋಗಿದ್ದೇವೆ ಎಂದು ತಿಳಿಸಿದ್ದಾರೆ.

ಮಠದಿಂದ ಕಾಣೆಯಾಗಿದ್ದರು ಎನ್ನಲಾದ ಶಿವಕುಮಾರ್, ಪ್ರತಾಪ್ ಹಾಗೂ ಕಾರ್ತಿಕ್‌ ಎನ್ನುವ ಬಾಲಕರು ಇದೀಗ ದೇಗುಲದ ಮಠಕ್ಕೆ ಮರಳಿದ್ದಾರೆ. ಮೂವರು ಸ್ನೇಹಿತರು ಒಟ್ಟಿಗೆ ಗೆಳೆಯನ ಮನೆಗೆ ಹೋಗಿದ್ದೆವು ಎಂದು ತಿಳಿಸಿದ್ದಾರೆ. ಅಲ್ಲದೇ ಬಾಲಕರು ನಾಪತ್ತೆಯಾದ ಬಗ್ಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಗಮನಿಸಿದ ಮಕ್ಕಳು ಸ್ವತಃ ಮಠಕ್ಕೆ ಮರಳಿ ಗೊಂದಲಗಳಿಗೆ ತಾರ್ಕಿಕ ಅಂತ್ಯ ಹಾಡಿದ್ದಾರೆ.

ಇನ್ನು ದೇಗುಲದ ಮಠದಲ್ಲಿ ಈ ಮೂವರು ವಿದ್ಯಾರ್ಥಿಗಳು 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಆನೇಕಲ್ ತಾಲೂಕು ಅತ್ತಿಬೆಲೆ ಗ್ರಾಮದ ಶಿವಕುಮಾರ್(15), ಆನೇಕಲ್ ತಾಲೂಕು ಕೊಡ್ಲಿಪುರ ಗ್ರಾಮದ ಪ್ರತಾಪ್(16) ಹಾಗೂ ಬೆಂಗಳೂರಿನ ಎಂ. ಎಸ್. ನಗರದ ಕಾರ್ತಿಕ್ (15) ಈ ಮೂವರು ಬಾಲಕರು ನವೆಂಬರ್‌ 8ರ ರಾತ್ರಿ ಹಾಸ್ಟೆಲ್​ನಲ್ಲಿ ಊಟ ಮುಗಿಸಿದ ನಂತರ ನಾಪತ್ತೆ ಆಗಿದ್ದರು.

Three missing boys of Kanakapura Mutt found

ಬಾಲಕರ ನಾಪತ್ತೆ ಸಂಬಂಧ ಮಠದ ಸಿಬ್ಬಂದಿ ಮಹದೇವಸ್ವಾಮಿ ನವೆಂಬರ್‌ 11ರಂದು ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂವರು ಬಾಲಕರಿಗಾಗಿ ಕನಕಪುರ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದರು. ಠಾಣೆಯಲ್ಲಿ ಪ್ರಕರಣ ದಾಖಲಾದ ಎರಡು ದಿನಗಳ ನಂತರ ಮಾಧ್ಯಮಗಳಲ್ಲಿ ಬಾಲಕರ ನಾಪತ್ತೆ ಸುದ್ದಿ ಬಿತ್ತರವಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ಬಳಿಕ ನವೆಂಬರ್‌ 13ರ ರಾತ್ರಿ ಬಾಲಕರು ಮಠಕ್ಕೆ ವಾಪಸ್‌ ಆಗಿದ್ದಾರೆ. ಮಕ್ಕಳು ಮಠಕ್ಕೆ ಮರಳಿದ ಹಿನ್ನೆಲೆ ಮಠದ ಸಿಬ್ಬಂದಿ ಹಾಗೂ ಬಾಲಕರ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬಾಲ ಮಂದಿರಗಳಿಂದ ಮಕ್ಕಳು ನಾಪತ್ತೆ; ರಾಜ್ಯದ ಸರ್ಕಾರಿ ಮಕ್ಕಳ ಬಾಲ ಮಂದಿರಗಳಿಂದ ಈವರೆಗೆ 484 ಮಕ್ಕಳು ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಆ ಪೈಕಿ ಇನ್ನೂ 119 ಮಕ್ಕಳು ಪತ್ತೆಯಾಗಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸರ್ಕಾರವೇ ತಿಳಿಸಿತ್ತು. ಕೋಲಾರದ ಕೆ. ಸಿ. ರಾಜಣ್ಣ ಸಲ್ಲಿಸಿದ್ದ ಪಿಐಎಲ್‌ ಹಂಗಾಮಿ ಸಿಜೆ ಅಲೋಕ್‌ ಅರಾಧೆ ಹಾಗೂ ನ್ಯಾ.ಎಸ್‌. ವಿಶ್ವಜಿತ್‌ಶೆಟ್ಟಿ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾಯಾಲಯದ ಹಿಂದಿನ ಆದೇಶದಂತೆ ನಾಪತ್ತೆ ಆಗಿರುವ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಿದ ಸರ್ಕಾರಿ ಪರ ವಕೀಲರು ಈ ವಿಷಯವನ್ನು ತಿಳಿಸಿದ್ದರು.

ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸಾವು; ಮಂಡ್ಯ ಜಿಲ್ಲೆ ಕೆ. ಆರ್​. ಪೇಟೆಯ ಅಕ್ಕಿ ಹೆಬ್ಬಾಳು ಬಳಿ ಪಾಂಡಿಚೇರಿಯ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಅಲ್ಹರ್ಷ್‌ ಎಂಬುವರು ಕೆರೆಗೆ ಬಿದ್ದು ಮೃತಪಟ್ಟಿದ್ದರು. ಬಹಿರ್ದೆಸೆಗೆ ಹೊರಗೆ ಹೋಗಿದ್ದಾಗ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ್ದರು. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದೇ ಘಟನೆಗೆ ಪ್ರಮುಖ ಕಾರಣ ಎಂದು ಕ್ರೀಡಾ ಆಯೋಜಕರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

Three missing boys of Kanakapura Mutt found

ಕೆ. ಆರ್. ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಸೈಕಲ್ ಪೋಲೊ ಕ್ರೀಡಾ ಕೂಟದ ನಡೆಯುತ್ತಿತ್ತು. ಕ್ರೀಡಾಕೂಟದಲ್ಲಿ ಭಾಗಿಯಾಗಲು ಅಲ್ಹರ್ಷ್‌ ಪಾಂಡಿಚೇರಿಯಿಂದ ಕೆ. ಆರ್. ಪೇಟೆಗೆ ಆಗಮಿಸಿದ್ದರು. ತಡರಾತ್ರಿ ಬಹಿರ್ದೆಸೆಗೆಂದು ಆಚೆ ಹೋದಾಗ ದುರ್ಘಟನೆ ಸಂಭವಿಸಿದೆ. ಕೆ. ಆರ್​. ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಇನ್ನು ಕೆ. ಆರ್​. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+