ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಜಾಬ್- ಕೇಸರಿ ವಿವಾದವನ್ನು ಧರ್ಮಯುದ್ಧದ ರೀತಿ ಬಿಂಬಿಸಲಾಗಿದೆ; ಅನಿತಾ ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 16: ಹಿಜಾಬ್ ಮತ್ತು ಕೇಸರಿ ಶಾಲು ವಿವಾದವನ್ನು ಧರ್ಮಯುಧ್ಧದ ರೀತಿಯಲ್ಲಿ ಬಿಂಬಿಸಿ, ಮಕ್ಕಳನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಕರಿಕಲ್ ದೊಡ್ಡಿಯಲ್ಲಿ ಹಾಲು ಉತ್ಪಾದಕ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮತ್ತು ಹಾಲು ಉತ್ಪಾದಕರಿಗೆ ಕ್ಯಾನ್ ವಿತರಿಸಿ ಮಾತನಾಡಿದರು.

ರಾಮನಗರಕ್ಕೂ ವ್ಯಾಪಿಸಿದ ಹಿಜಾಬ್ ಕಿಚ್ಚು; ತರಗತಿ ಬಹಿಷ್ಕಾರ ಮಾಡಿದ 40 ವಿದ್ಯಾರ್ಥಿನಿಯರುರಾಮನಗರಕ್ಕೂ ವ್ಯಾಪಿಸಿದ ಹಿಜಾಬ್ ಕಿಚ್ಚು; ತರಗತಿ ಬಹಿಷ್ಕಾರ ಮಾಡಿದ 40 ವಿದ್ಯಾರ್ಥಿನಿಯರು

ಪ್ರತಿಯೊಬ್ಬರಿಗೂ ಅವರ ಧರ್ಮ ಅವರಿಗೆ ದೊಡ್ಡದು. ಆದರೆ ವಿದ್ಯೆ ಕಲಿಯುವ ವಯಸ್ಸಿನಲ್ಲಿ ಅವುಗಳನ್ನೆಲ್ಲಾ ಮನಸ್ಸಿಗೆ ಅಂಟಿಸಿಕೊಳ್ಳಬಾರದು. ಮೊದಲಿನಿಂದಲೂ ಇದನ್ನೇ ಹೇಳುತ್ತಿದ್ದೇನೆ, ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದರು.

The Hijab- Saffron Controversy is Portrayed As a Religious War Says Anitha Kumaraswamy

ಇತ್ತೀಚೆಗೆ ಕೋವಿಡ್ ಆತಂಕದಿಂದ ಸರಿಯಾಗಿ ಶಾಲಾ- ಕಾಲೇಜು ನಡೆಯದೆ, ವಿದ್ಯಾರ್ಥಿಗಳಲ್ಲಿನ ವ್ಯಾಸಂಗ ಮಟ್ಟ ಕುಸಿದಿದೆ. ಅಲ್ಲದೇ ಪರೀಕ್ಷೆಗಳು ಸಮೀಪಿಸಿವೆ. ಇಂತಹ ಸಮಯದಲ್ಲಿ ಬೇಡದ ವಿವಾದಗಳಿಗೆ ಮುಂದಾಗಿ ತಮ್ಮ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬಾರದು. ಈ ಬಗ್ಗೆ ಹೈಕೋರ್ಟ್ ಕೂಡ ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ರಾಜಕೀಯದಲ್ಲಿ ವ್ಯಕ್ತಿಗತ ಟೀಕೆ ಒಳ್ಳೆಯದಲ್ಲ
ಇನ್ನು ಮಾಜಿ ಶಾಸಕ ಕೆ. ರಾಜು ಹಾಗೂ ಕುಮಾರಸ್ವಾಮಿಯವರ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ, ರಾಜಕೀಯ ಜೀವನದಲ್ಲಿ ಯಾರೂ ಕೂಡ ಯಾರ ಬಗ್ಗೆಯೂ ವ್ಯಕ್ತಿಗತವಾಗಿ ಟೀಕೆ ಮಾಡಬಾರದು. ಅವರು ಯಾವುದೇ ಪಕ್ಷದಲ್ಲಿರಲಿ ಅದನ್ನು ಎಲ್ಲಾ ರಾಜಕಾರಣಿಗಳು ಕಲಿಯಬೇಕು ಎಂದರು.

The Hijab- Saffron Controversy is Portrayed As a Religious War Says Anitha Kumaraswamy

ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು
ಇನ್ನು ರಾಮನಗರ ಜಿಲ್ಲೆಯಲ್ಲಿ ಜನರು ಸಿಲ್ಕ್, ಮಿಲ್ಕ್ ಅತಿ ಹೆಚ್ಚಾಗಿ ನಂಬಿಕೊಂಡು ಜೀವನ ನಡೆಸುತ್ತಿದ್ದು, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಹಿಂದೆ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದರು ಎಂದು ತಿಳಿಸಿದರು.

ಪ್ರಸ್ತುತ ಕೋವಿಡ್ ಹಿನ್ನಲೆಯಲ್ಲಿ ಹಾಲು ಉತ್ಪಾದಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸರ್ಕಾರ ಇತರ ವರ್ಗದ ಜನರಿಗೆ ನೀಡಿದ ರೀತಿ ಹಾಲು ಉತ್ಪಾದಕರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು ಹಾಲಿನ ಖರೀದಿ ದರ ಹೆಚ್ಚಿಸಿ ರೈತನ ನೆರವಿಗೆ ಧಾವಿಸಬೇಕು ಎಂದು ಸರ್ಕಾರಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಒತ್ತಾಯಿಸಿದರು.

The Hijab- Saffron Controversy is Portrayed As a Religious War Says Anitha Kumaraswamy

ಹಾಲು ಉತ್ಪಾದಕರ ತೊಂದರೆಗಳನ್ನು ನಾವು ಹತ್ತಿರದಿಂದ ನೋಡಿದ್ದೇವೆ. ನಾವೂ ಕೂಡ ಬಿಡದಿಯ ಕೇತುಗಾನಹಳ್ಳಿಯಲ್ಲಿರುವ ನಮ್ಮ ತೋಟದ ಮನೆಯಲ್ಲಿ ಹೈನುಗಾರಿಕೆ ಮಾಡುತ್ತಿದ್ದೇವೆ, ನಮ್ಮ ಮನೆಯಲ್ಲೂ ಹಸುಗಳಿವೆ. ಹಾಗಾಗಿ ಹೈನುಗಾರಿಕೆಯ ಬಗ್ಗೆ ನಮಗೆ ತಿಳಿದಿದೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರಿಕಲ್‌ದೊಡ್ಡಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಕೆಂಚಪ್ಪ, ಉಪಾಧ್ಯಕ್ಷ ಪ್ರಕಾಶ್, ನಿರ್ದೇಶಕರಾದ ಶ್ರೀನಿವಾಸ್, ಕೃಷ್ಣಯ್ಯ, ಚಂದ್ರಶೇಖರ್, ಮೂರ್ತಿ, ಸತೀಶ್, ಆನಂದ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Recommended Video

ಅಯ್ಯೋ...! ರೇಣುಕಾಚಾರ್ಯ ಬುದ್ದಿ ಕಲಿಯೋದು ಯಾವಾಗ | Oneindia Kannada

English summary
Ramanagara MLA Anitha Kumaraswamy Reacted on Hijab- Saffron Controversy in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X