ದೇವಾಲಯದ ಕಾಣಿಕೆ ಡಬ್ಬ ಕದ್ದೊಯ್ದ ಕಳ್ಳರು: ಸಿಸಿ ಕ್ಯಾಮರಾದಲ್ಲಿ ಸೆರೆ

ರಾಮನಗರ, ಜನವರಿ 03: ದೇವಾಲಯಕ್ಕೆ ಕನ್ನ ಹಾಕಿದ ಖದೀಮ ದೇವಾಲಯದ ಕಾಣಿಕೆ ಹುಂಡಿಯ ಜೊತೆಗೆ ಸಿಸಿ ಕ್ಯಾಮರಾದ ಡಿವಿಆರ್ ಎಂದು ಮಾನಿಟರ್ ಕದ್ದೊಯ್ದ ಘಟನೆ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನಡೆದಿದೆ.

ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಲಿಕೆರೆಯಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯ, ವಿನಾಯಕ ಮತ್ತು ಮರಳಸಿದ್ದೇಶ್ವರ ದೇವಾಲಯಗಳಲ್ಲಿ ಸರಣಿ ಕಳ್ಳತನ ಮಾಡಿರುವ ಖತರ್ನಾಕ್ ಕಳ್ಳರು ಹುಂಡಿ‌ ಜೊತೆಗೆ ಬೆಳ್ಳಿ ತಟ್ಟೆ ಕದ್ದು ಹೋಗಿದ್ದಾರೆ.

ಇತ್ತೀಚಿಗಷ್ಟೆ ಹೋಮ‌ಹವನ ನಡೆಸಿದ್ದ ದೇವಾಲಯದಲ್ಲಿ, ಹೊಸ ವರ್ಷದ ಬಳಿಕ ಹುಂಡಿಯಲ್ಲಿ ಹೆಚ್ಚು ಹಣ ಇರುತ್ತದೆ ಎಂಬ ಕಾರಣಕ್ಕೆ ದೇವಾಲಯದಲ್ಲಿ‌ ಕಳವು ಮಾಡಲಾಗಿದೆ.

Temple Robbery By Thieves: Captured On CC Camera

ಏಣಿ‌ ಮೂಲಕ‌ ದೇವಾಲಯ ಪ್ರವೇಶಿಸಿರುವ ಇಬ್ಬರು ಕಳ್ಳರು ಅಪರಿಚಿತರಾಗಿದ್ದು ಸಿಸಿಟಿವಿಯಲ್ಲಿ ಕೃತ್ಯ ದಾಖಲಾಗುತ್ತಿದೆ ಎಂಬ ಕಾರಣಕ್ಕೆ ಮಾನಿಟರ್ ಕೂಡ‌ ಕದ್ದೋಯ್ದಿದ್ದಾರೆ. ಆದರೆ ಡಿವಿಆರ್ ದೇವಾಲಯದಲ್ಲೇ ಇದ್ದು ಕಳ್ಳರ‌ ಕೈಚಳಕ ದಾಖಲಾಗಿದೆ.

ಕಳ್ಳರು ಕಾಣಿಕೆ ಹುಂಡಿ, ಬೆಳ್ಳಿತಟ್ಟೆ ಕದ್ದಿರುವುದು ಗೊತ್ತಾಗಿದೆ. ಹುಂಡಿಯಲ್ಲಿ ಐದಾರು ಸಾವಿರದಷ್ಟು ಹಣ ಇತ್ತು ಏನ್ನಲಾಗಿದೆ. ದೇವಾಲಯದ ಆಡಳಿತ ಮಂಡಳಿ ಇತ್ತೀಚಿಗೆ ಹುಂಡಿಯಲ್ಲಿದ್ದ ಹಣ ಹೊರಗೆ ತೆಗೆದಿದ್ದರು. ಮೊದಲು‌ ಮರಳ ಸಿದ್ದೇಶ್ವರ ದೇವಾಲಯದಲ್ಲಿ ಕಳವು‌ ಮಾಡಿದ ಕಳ್ಳರು ಅದೇ ಗ್ರಾಮದಲ್ಲಿರುವ ಶಿವಲಿಂಗ ದೇವಾಲಯದಲ್ಲಿಯೂ ಕಳವು ಮಾಡಿದ್ದಾರೆ.

Temple Robbery By Thieves: Captured On CC Camera

ಒಂದೇ ಗ್ರಾಮದಲ್ಲಿ ಸರಣಿ‌ ಕಳ್ಳತನವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ‌ ಸಂಬಂಧ ರಾಮನಗರ ಗ್ರಾಮಾಂತರ ಪೋಲೀಸರಿಗೆ ಗ್ರಾಮಸ್ಥರು ದೂರು‌ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಆರೋಪಿಗಳ ಪತ್ತೆಗೆ ಬಲೆ‌ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+