• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಮಗಂಟು ರೋಗ; ರಾಮನಗರದಲ್ಲಿ ಒಂದು ತಿಂಗಳು ಜಾನವಾರು ಜಾತ್ರೆ ನಿಷೇಧ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್‌, 12; ರಾಜ್ಯಾದ್ಯಂತ ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುವುದು ಹೆಚ್ಚಾಗಿಬಿಟ್ಟಿದೆ. ಆದ್ದರಿಂದ ಜಿಲ್ಲೆಯಲ್ಲಿ ರೋಗವು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ಅಕ್ಟೋಬರ್ 11ರಿಂದ ನವೆಂಬರ್ 10ರವರೆಗೆ ಒಂದು ತಿಂಗಳ ಕಾಲ ಜಾನುವಾರುಗಳ ಜಾತ್ರೆ, ದನಗಳ ಸಂತೆ ಮತ್ತು ಜಾನುವಾರುಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

‌ಈಗಾಗಲೇ ರಾಜ್ಯಾದ್ಯಂತ ಮಾರಕ ಚರ್ಮಗಂಟು ರೋಗ ಉಲ್ಬಣಿಸಿ, ಹಲವಾರು ರಾಸುಗಳು ಈ ಮಾರಕ ಕಾಯಿಲೆಗೆ ಬಲಿಯಾಗುತ್ತಲೇ ಇವೆ. ಈ ಹಿನ್ನೆಲೆ ಮಾರಕ ಚರ್ಮಗಂಟು ರೋಗ ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ಮತ್ತು ಸಾಗಾಣಿಕೆಯನ್ನು ನಿಷೇಧಸಿ ಆದೇಶ ಮಾಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಮತ್ತೆ ಪುಂಡಾನೆಗಳ ಅಟ್ಟಹಾಸ; ಅನ್ನದಾತ ಕಂಗಾಲುರಾಮನಗರ ಜಿಲ್ಲೆಯಲ್ಲಿ ಮತ್ತೆ ಪುಂಡಾನೆಗಳ ಅಟ್ಟಹಾಸ; ಅನ್ನದಾತ ಕಂಗಾಲು

ಹೈನುಗಾರಿಕೆ ಉದ್ಯಮದಲ್ಲಿ ಜಿಲ್ಲೆ ಮುಂಚೂಣಿ

ಜಿಲ್ಲೆ ರೇಷ್ಮೆ ಉತ್ಪಾದನೆಯಲ್ಲಿ ಖ್ಯಾತಿ ಪಡೆದಿದ್ದು, ರೇಷ್ಮೆ ನಗರಿ ಎಂಬ ಹೆಸರು ಪಡೆದಿದೆ. ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ನಂಬಿರುವ ಸುಮಾರು 1,45,095 ಕುಟುಂಬಗಳು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ ಒಟ್ಟು 6,13,337 ಸಂಖ್ಯೆಯ ಜಾನುವಾರುಗಳಿವೆ. ಅಲ್ಲದೇ ಕೃತಕ ಗರ್ಭಧಾರಣೆ ಪ್ರಮಾಣ ಕೂಡ ಶೇಕಡಾ 68ರಷ್ಟಿದೆ.

ಕೊರೊನಾ ಸಂಕಷ್ಟದ ಕಾಲದಲ್ಲೂ ರೈತನ ಬದುಕು ಕಾಪಾಡಿದ್ದ ಹೈನು ಉದ್ಯಮ ಪ್ರಸ್ತುತ ಕಾಣಿಸಿಕೊಂಡಿರುವ ಚರ್ಮಗಂಟು ಕಾಯಿಲೆಗೆ ತತ್ತರಿಸಿದೆ. ಕೆಲ ತಿಂಗಳುಗಳ ಹಿಂದೆ ರಾಸುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡು ಹೈನುಗಾರಿಕೆಗೆ ಬಾರಿ ಪ್ರಮಾಣದ ಹೊಡೆತ ನೀಡಿತ್ತು. ಇದೀಗ ವಿಚಿತ್ರ ಕಾಯಿಲೆ ಚರ್ಮಗಂಟು ರೋಗದಿಂದ ಹಾಲು ಉತ್ಪಾದಕರು ಆತಂಕಕ್ಕೆ ಒಳಗಾಗಿದ್ದಾರೆ.

ಮಕ್ಕಳಿಲ್ಲದ ದಂಪತಿಗಳ ಆಶಾಕಿರಣ ಈ ನಾಟಿ ವೈದ್ಯೆ ಚನ್ನಪಟ್ಟಣದ ಲಕ್ಷ್ಮಮ್ಮಮಕ್ಕಳಿಲ್ಲದ ದಂಪತಿಗಳ ಆಶಾಕಿರಣ ಈ ನಾಟಿ ವೈದ್ಯೆ ಚನ್ನಪಟ್ಟಣದ ಲಕ್ಷ್ಮಮ್ಮ

ಹಳ್ಳಿಗರಿಗೆ ಜೀವನ ರೂಪಿಸಿದ್ದ ಹೈನುಗಾರಿಕೆ

ಪಟ್ಟಣದಲ್ಲಿ ವ್ಯಾಪಾರ, ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗ್ರಾಮೀಣ ಭಾಗದ ಜನರು ಕೊರೊನಾ ಮಹಾಮಾರಿ ಭೀತಿಯಿಂದ ಪಟ್ಟಣ ತೊರೆದು ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದರು. ಆಗ ಅವರ ಬದುಕಿಗೆ ನೆರವಾಗಿದ್ದು ಹೈನುಗಾರಿಕೆ. ಕೋವಿಡ್ ಸೋಂಕು ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಯತ್ತ ಮರಳಿದಾಗಲೂ ಎಷ್ಟೋ ಜನ ಪಟ್ಟಣಕ್ಕೆ ತೆರಳದೆ ಹೈನುಗಾರಿಕೆಯನ್ನೇ ನಂಬಿಕೊಂಡು ಹಳ್ಳಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಮತ್ತೆ ಇದೀಗ ರಾಸುಗಳಿಗೆ ಚರ್ಮಗಂಟು ರೋಗ ಉಲ್ಬಣಿತ್ತಲೇ ಇದ್ದು, ಜನರನ್ನು ಆತಂಕಕ್ಕೆ ತಳ್ಳಿದೆ.

English summary
Due to high prevalence of skin disease, cattle fair, cattle festival and cattle transport banned from October 11th to November 10th in Ramanagara district. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X