ಬಿಜೆಪಿಯ 8 ರಿಂದ 10 ಎಂಪಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದಾರೆ: ಡಿ.ಕೆ. ಶಿವಕುಮಾರ್‌ ಹೀಗೆ ಹೇಳಿದ್ದೇಕೆ?

ಕೇಂದ್ರದ ವರ್ತನೆಯಿಂದ ಅವಮಾನ ಸಹಿಸದ 8 ರಿಂದ 10 ಜನ ಸಂಸದರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೊಸ ಬಾಂಬ್‌ ಸಿಡಿಸಿದ್ದಾರೆ.

ರಾಮನಗರ, ಫೆಬ್ರವರಿ, 06: ಡಬ್ಬಲ್ ಇಂಜಿನ್ ಸರ್ಕಾರ ಕೃಷ್ಣ ಬೇಸಿನ್ ಸೇರಿದಂತೆ ಯಾವುದೇ ನೀರಾವರಿ ಯೋಜನೆ ಅನುಷ್ಠಾನ ಮಾಡುವುದಿಲ್ಲ. ಕೇಂದ್ರದ ವರ್ತನೆಯಿಂದ ಅವಮಾನ ಸಹಿಸದ 8 ರಿಂದ 10 ಜನ ಸಂಸದರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಮನಗರದಲ್ಲಿ ಹೊಸ ಬಾಂಬ್ ಸಿಡಿಸಿದರು.

ಅವರು ಕನಕಪುರದ ಆರ್.ಇ.ಎಸ್ ಕಾಲೇಜಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಪಾಲ್ಗೊಂಡು ತಮ್ಮ ಪತ್ನಿ ಉಷಾ ಅವರೊಂದಿಗೆ ಮತ ಚಲಾವಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಿಜೆಪಿ ಸಂಸದರು ನಮಗೆ ಧ್ವನಿ ಇಲ್ಲದೇ ಅವಮಾವವಾಗಿದೆ. ‌ಹಾಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ‌ ಎನ್ನುತ್ತಿದ್ದಾರೆ. ಬೇಕಿದ್ದರೆ ಹೆಸರು ಹೇಳುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.

Karnataka Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
ಬಿಜೆಪಿ ಸಂಸದರು ತಮ್ಮ ಮನಸ್ಸಿನ ಇಂಗಿತವನ್ನು ನನ್ನ ಬಳಿ ಹೇಳಿದ್ದಕ್ಕೆ ನಾನು ನಿಮ್ಮ ಮುಂದೆ ಹೇಳುತ್ತಿದ್ದೇನೆ. ಸದ್ಯಕ್ಕೆ ಇಷ್ಟು ಹೇಳಿದ್ದೇನೆ, ಬೇಕಿದ್ದರೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ರಾಜ್ಯದಿಂದ ಆಯ್ಕೆಯಾದ ಬಿಜೆಪಿ‌ ಸಂಸದರು ರಾಜ್ಯದ ಪರ ಧ್ವನಿ ಎತ್ತುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

 ಹೆಚ್ಚುವರಿ ನೀರನ್ನ ನಾವು ಬಳಸಿಕೊಳ್ಳಬೇಕು

ಹೆಚ್ಚುವರಿ ನೀರನ್ನ ನಾವು ಬಳಸಿಕೊಳ್ಳಬೇಕು

ತಮಿಳುನಾಡು ಸರ್ಕಾರ ಸಮುದ್ರದ ಪಾಲಾಗುತ್ತಿರುವ ನೀರನ್ನು ಕೆಲವೊಂದು ಯೋಜನೆಗಳ ಮೂಲಕ ಶೇಖರಿಸಿಕೊಳ್ಳಲು ಮುಂದಾಗಿದೆ. ನಮ್ಮ ಸರ್ಕಾರ ಇದೀಗ ಜಾಗೃತರಾಗಬೇಕು. ಕಾನೂನಾತ್ಮಕವಾಗಿ ಹೆಚ್ಚುವರಿ ನೀರನ್ನು ನಾವು ಬಳಸಿಕೊಳ್ಳಬೇಕು. ಸರ್ಕಾರ ರೈತರಿಗೆ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಕಾರ್ಯಕ್ರಮ ರೂಪಿಸಬೇಕಿದೆ. ಕಾವೇರಿ ಹೋರಾಟ ಮುಗಿದ ಅಧ್ಯಾಯವಲ್ಲ, ಹೊಸ ಹೋರಾಟ ಆರಂಭ ಮಾಡಬೇಕು. ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಬಳಸಿಕೊಳ್ಳಲಿ, ನಾವು ಹೋರಾಟ ಮಾಡಬೇಕಿದೆ.
ಕಾವೇರಿಯ ಹೆಚ್ಚುವರಿ ನೀರನ್ನು ತುಂಬಾ ಜಾಗೃತವಾಗಿ ಬಳಸಬೇಕಿದೆ. ಹೆಚ್ಚುವರಿ ನೀರನ್ನು ಕಾನೂನು ರೀತಿಯಲ್ಲಿ ನಾವು ಪಡೆದುಕೊಳ್ಳಬೇಕಿದೆ ಎಂದರು.

 ಸುಮಾರು 400 ಟಿಎಂಸಿಯಷ್ಟು ನೀರು ವ್ಯರ್ಥ

ಸುಮಾರು 400 ಟಿಎಂಸಿಯಷ್ಟು ನೀರು ವ್ಯರ್ಥ

ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರ ಭಾಗಗಳಿಗೆ ಈ ನೀರನ್ನು ಬಳಸಿಕೊಳ್ಳಬೇಕಿದೆ. ಈಗಾಗಲೇ‌‌ ಸುಮಾರು 400 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಸಮುದ್ರದ ಪಾಲಾಗುತ್ತಿದೆ. ಈ ಹಿಂದೆ ನನ್ನ ಜೊತೆ ಕೆಲಸ ಮಾಡಿದ್ದ ಅಧಿಕಾರಿಗಳನ್ನು ಕರೆದು ಸಭೆ ಮಾಡಿದ್ದೇನೆ. ವ್ಯರ್ಥವಾಗಿ ಹರಿದು ಸಮುದ್ರದ ಪಾಲಾಗುತ್ತಿರುವ ನೀರನ್ನು ನಾವು ಬಳಸಿಕೊಳ್ಳಲು ಅವಕಾಶ ಇದೆ. ನಮ್ಮ ಪ್ರಣಾಳಿಕೆಯಲ್ಲೂ ಕೂಡ ಇದೇ ವಿಚಾರವನ್ನು ಇಡುತ್ತೇವೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆ ಮಾಡಿ ತಿಳಿಸುತ್ತಿದ್ದೇನೆ ಎಂದು ತಿಳಿಸಿದರು.

 ಪಾದಯಾತ್ರೆ ಬಳಿಕ 1 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ

ಪಾದಯಾತ್ರೆ ಬಳಿಕ 1 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ

ಕಾಂಗ್ರೆಸ್ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ನಡೆಸಿದ ನಂತರ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರ ಮನವಿ ಮಾಡಿ ಕ್ಲಿಯರೆನ್ಸ್ ಮಾಡಿಸಬಹುದಿತ್ತು. ಯಾರದೇ ಕಂಡಿಷನ್ ಇರಲಿಲ್ಲ. ಆದರೆ ಅನುದಾನದಲ್ಲಿ ಇದುವರೆಗೂ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡದಿದ್ದರೂ ಸರ್ಕಾರ ಭೂ ಸ್ವಾಧೀನದಂತ ಕ್ರಮ ಕೈಗೊಳ್ಳಬಹುದಿತ್ತು. ಬೆಂಗಳೂರಿನ ಜನರಿಗೆ ಪ್ರತಿದಿನ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ರಾತ್ರಿ ವೇಳೆ ಟ್ಯಾಂಕರ್‌ನಲ್ಲಿ ನೀರು ಹೊಡೆಯುತ್ತಿದ್ದಾರೆ. ನೀರು ಬಹಳ ದುಬಾರಿಯಾಗುತ್ತಿದ್ದರೆ ಮೇಕೆದಾಟು ಯೋಜನೆ ಆಗಲೇಬೇಕು. ನಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ವಿಚಾರ ಕೂಡ ಇರುತ್ತದೆ ಎಂದರು.

 HDK ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ

HDK ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ

ರಾಜ್ಯದಲ್ಲಿ ಮುಂದೆ ಬಿಜೆಪಿ ಸರ್ಕಾರ ಬಂದರೆ ಬ್ರಾಹ್ಮಣರು ಸಿಎಂ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ನನಗೆ ಅವರ ಭವಿಷ್ಯ ಗೊತ್ತಿಲ್ಲ, ನಮ್ಮ ಕಾಂಗ್ರೆಸ್‌ ಪಕ್ಷದ್ದೂ ಮಾತ್ರ ಗೊತ್ತಿರೋದು. ನಾವು ಸಾಮೂಹಿಕವಾಗಿ ಚುನಾವಣೆ ನಡೆಸುತ್ತೇವೆ. ನಮ್ಮ ಕಾಲಿನ ಮೇಲೆ ನಾವು ನಿಲ್ಲುತ್ತೇವೆ. ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎಂದರು. ಹಾಗೆಯೇ ‌ಪ್ರಜಾಧ್ವನಿ ಬಸ್ ಪಂಕ್ಚರ್ ಆಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾವು ಎರಡು ಕಡೆ ಪ್ರಜಾಧ್ವನಿ ಯಾತ್ರೆ ಆರಂಭ ಮಾಡಿದ್ದೇವೆ. ಬೀದರ್- ಕೋಲಾರ ಭಾಗದಲ್ಲಿ ಸೇರಿದ್ದ ಜನರನ್ನು ನೀವೆ ನೋಡಿದ್ದೀರಾ. ನಾನು ಏನು ಹೇಳುವುದಿಲ್ಲ, ನಿಮ್ಮ ಕ್ಯಾಮೆರಾಗಳನ್ನು "ಆ" ಜನರನ್ನು ತೋರಿಸಿವೆ ಎಂದು ಬಿಎಸ್‌ವೈ ಹೇಳಿಕೆಗೆ ಟಾಂಗ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+