ಸಂಕ್ರಾಂತಿ ವಿಶೇಷ; ಹಬ್ಬದಲ್ಲಿ ಪಟ್ಲು ಕರಿಕಬ್ಬುಗೆ ವಿಶೇಷ ಸ್ಥಾನ
ರಾಮನಗರ, ಜನವರಿ 14; ವರ್ಷದ ಮೂದಲ ಹಬ್ಬ ಸಂಕ್ರಾಂತಿ. ಸಂಕ್ರಾಂತಿ ಹಬ್ಬದಂದು ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ಸಿಂಗಾರ ಮಾಡಿಕೊಂಡು ಮನೆ ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ ಹಾಗೂ ತುಂಡು ಕರಿ ಕಬ್ಬು ಹಂಚಿ 'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು' ಎನ್ನುವುದು ಹಬ್ಬದ ಸಂಪ್ರದಾಯ.
ಸಂಕ್ರಾಂತಿ ಹಬ್ಬದಲ್ಲಿ ಕರಿ ಕಬ್ಬಿಗೆ ವಿಶಿಷ್ಟ ಸ್ಥಾನ, ಕರಿ ಕಬ್ಬು ಇಲ್ಲದೇ ಹಬ್ಬ ಪೂರ್ತಿಯಾಗುವುದಿಲ್ಲ. ಹಬ್ಬದಲ್ಲಿ ಮಾರುಕಟ್ಟೆಯಲ್ಲಿ ಕರಿ ಕಬ್ಬಿಗೆ ಭಾರೀ ಬೇಡಿಕೆ ಇರುತ್ತದೆ. ರಾಜ್ಯದಲ್ಲಿ ಕರಿ ಕಬ್ಬು ಬೆಳೆಯವ ಪ್ರದೇಶ ಬಹಳ ಕಡಿಮೆ. ಸಂಕ್ರಾಂತಿ ಹಬ್ಬದಲ್ಲಿ ಗ್ರಾಹಕನ ಕರಿಕಬ್ಬು ಬೇಡಿಕೆಯನ್ನು ನೀಗಿಸುವುದೇ ಬೊಂಬೆನಾಡು ಚನ್ನಪಟ್ಟಣದ ಪಟ್ಲು ಗ್ರಾಮ.
ವಿಶ್ವದಲ್ಲೇ ಬೊಂಬೆನಾಡು ಚನ್ನಪಟ್ಟಣ ಖ್ಯಾತಿ ಪಡೆದಿದ್ದರೆ, ಸಂಕ್ರಾಂತಿ ಕರಿಕಬ್ಬು ಗ್ರಾಮ ಎಂದು ರಾಜ್ಯದಲ್ಲೇ ಹೆಸರುವಾಸಿಯಾಗಿರುವುದು ಪಟ್ಲು ಗ್ರಾಮ. ಪಟ್ಲು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆಯುವ ಪಟಾವಳಿ ಕರಿಕಬ್ಬು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ತಾಲೂಕಿನ ಪಟ್ಲು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು ಹಲವಾರು ವರ್ಷಗಳಿಂದ ಪ್ರಮುಖ ವಾಣಿಜ್ಯ ಬೆಳೆಯಾಗಿ ಈ ಕರಿಕಬ್ಬು ಬೆಳೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಈ ಕಬ್ಬು ಪಟ್ಲು ಪಟಾವಳಿ ಕಬ್ಬು ಎಂದೇ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ
ಪಟ್ಲು ಸೇರಿದಂತೆ ತಿಟ್ಟಮಾರನಹಳ್ಳಿ, ಅಬ್ಬೂರು, ಅಬ್ಬೂರುದೊಡ್ಡಿ, ಕಳ್ಳಿಹೊಸೂರು, ತೊರೆಹೊಸೂರು, ಚಿಕ್ಕನದೊಡ್ಡಿ, ಮೈಲನಾಯ್ಕನಹಳ್ಳಿ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಕರಿಕಬ್ಬು ಬೆಳೆಯುತ್ತಬರಲಾಗುತ್ತಿದೆ. ಈ ಹಿಂದೆ ಸುಮಾರು 300 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತಿತ್ತು. ಆದರೆ ಈ ಬೇಸಾಯಕ್ಕೆ ಸಾಕಷ್ಟು ಕಠಿಣ ಶ್ರಮ ಹಾಗೂ ಕಾರ್ಮಿಕರ ಅವಶ್ಯಕತೆ ಇರುವುದರಿಂದ ಇತ್ತೀಚೆಗೆ ಸ್ವಲ್ಪ
ಕಡಿಮೆಯಾಗಿದೆ.
ಪಟ್ಲು ಕರಿಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಜೊತೆಗೆ ಕೇರಳ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ ಈ ಕಬ್ಬು ಕಳಿಸಲಾಗುತ್ತದೆ.

100 ಎಕರೆಗೂ ಅಧಿಕ ಪ್ರದೇಶ
ಹೆಚ್ಚಿನ ಲಾಭ ತಂದುಕೊಡುವ ಕರಿಕಬ್ಬು ಬೆಳೆಯನ್ನು ಸಾಕಷ್ಟು ಮುತುವರ್ಜಿಯಿಂದ ಬೆಳೆಯುತ್ತಾ ಬಂದಿದ್ದಾರೆ ರೈತರು. ಬೆಳೆ ಬೆಳೆಯಲು ಒಂದು ವರ್ಷದ ಅವಧಿ ಬೇಕಾಗಿದ್ದು, ಸುಮಾರು 2 ರಿಂದ 7 ಮೀಟರ್ ತನಕ ಈ ಕಬ್ಬು ಬೆಳೆಯುತ್ತದೆ. ಪ್ರಸ್ತುತ ತಾಲ್ಲೂಕಿನಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕರಿ ಕಬ್ಬು ಬೆಳೆದಿದ್ದು, ಪ್ರತಿ ಎಕರೆ ಕರಿಕಬ್ಬು ಬೆಳೆಯಲು ಸುಮಾರು 2 ಲಕ್ಷ ಖರ್ಚು ಬರುತ್ತದೆ. ಕರಿಕಬ್ಬನ್ನು ಜನವರಿ, ಫೆಬ್ರವರಿ ತಿಂಗಳಿನಲ್ಲಿ ಬಿತ್ತನೆ ಮಾಡಿದರೆ, ಡಿಸೆಂಬರ್ ತಿಂಗಳಿನಲ್ಲಿ ಕಟಾವಿಗೆ ಸಿದ್ದವಾಗುತ್ತದೆ.

ಹೊಲದಿಂದ ಮಾರುಕಟ್ಟೆಗೆ
ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ನಿರಂತರವಾಗಿ ಕಬ್ಬಿನ ಕಟಾವು ನಡೆಯುತ್ತಿದೆ. ರೈತರು ಕೂಲಿ ಕಾರ್ಮಿಕರ ಜೊತೆಗೂಡಿ ಕಬ್ಬನ್ನು ಕಟಾವು ಮಾಡಿ ವಾಹನಗಳಿಗೆ ತುಂಬಿಕೊಂಡು ಮಾರುಕಟ್ಟೆಯತ್ತ ತೆರಳುತ್ತಿದ್ದಾರೆ. ಕೆಲ ರೈತರು ತಾವೇ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಇನ್ನು ಕೆಲ
ರೈತರ ಬಳಿ ವರ್ತಕರು ಎಕರೆ ಲೆಕ್ಕದಲ್ಲಿ ಕಬ್ಬು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಈ ಕರಿಕಬ್ಬುಗ್ರಾಹಕರ ಬಾಯಿ ಸಿಹಿ ಮಾಡುವ ಜೊತೆಗೆ ಬೆಳೆದ ರೈತರ ಬಾಳನ್ನು ಸಹ ಈ ವರ್ಷ ಸಿಹಿ ಮಾಡಿದೆ.

ರೈತರ ಬದುಕಿನ ಆಶಾಕಿರಣ
ಪಟ್ಲು ಗ್ರಾಮದ ಕಬ್ಬು ಬೆಳೆಗಾರ ರಾಜು ಮಾತನಾಡಿ, "ಈ ಕರಿಕಬ್ಬು ನಮ್ಮ ಬದುಕಿನ ಆಶಾಕಿರಣವಾಗಿದೆ. ಗ್ರಾಮದಲ್ಲಿ ಹತ್ತಾರು ಎಕರೆಯಲ್ಲಿ ಕರಿಕಬ್ಬು ಬೆಳೆಯಲಾಗಿದೆ. ಕೆಲ ವರ್ತಕರು ಈ ಬಾರಿ ಉತ್ತಮ ದರಕೊಟ್ಟು ಈಗಾಗಲೇ ಖರೀದಿ ಮಾಡಿದ್ದಾರೆ. ಈ ಬಾರಿ ಫಸಲು ಹಾಗೂ ಬೆಲೆ ಎರಡು ಉತ್ತಮವಾಗಿದೆ. ಉತ್ತಮ ಬೆಲೆಗೆ ಕಷ್ಟಪಟ್ಟು ಬೆಳೆದ ಬೆಳೆ ಖರೀದಿಯಾಗಿರುವುದು ಸಂತೋಷ ತಂದಿದೆ" ಎಂದು ಹೇಳಿದ್ದಾರೆ.
ತಿಟ್ಟಮಾರನಹಳ್ಳಿ ಗ್ರಾಮದ ರಘು ರಾಜಣ್ಣ ಮಾತನಾಡಿ, "ಗೇಣು ಚಿಕ್ಕದಾಗಿ ಬರುವ ಈ ಕರಿಕಬ್ಬು ಪಟಾವಳಿ ಕಬ್ಬು ಎಂದು ಪ್ರಸಿದ್ಧವಾಗಿದೆ. ಈ ಬೆಳೆ ಬೆಳೆಯಲು ಅಧಿಕ ಖರ್ಚು ಹಾಗೂ ಶ್ರಮದ ಅವಶ್ಯಕತೆ ಇದೆ. ನಮ್ಮ ಪ್ರದೇಶದ ವಾತಾವರಣ ಹಾಗೂ ಮಣ್ಣು ಈ ಬೆಳೆ ಬೆಳೆಯಲು ಅನುಕೂಲವಾಗಿರುವ ಕಾರಣ ನಮ್ಮ ಅಕ್ಕಪಕ್ಕದ ಗ್ರಾಮಗಳ ರೈತರು ಪ್ರಮುಖ ಬೆಳೆಯಾಗಿ ಇದನ್ನು ಬೆಳೆಯುತ್ತಾರೆ" ಎಂದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications