ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

44 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ರಾಮನಗರ ಪೊಲೀಸರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 20: ಕಳೆದ 15 ದಿನಗಳ‌ ಅವಧಿಯಲ್ಲಿ ಅಕ್ರಮ ಗಾಂಜಾ ದಂಧೆಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿ ಸುಮಾರು 44 ಲಕ್ಷ ರುಪಾಯಿ ಮೌಲ್ಯದ ಅಕ್ರಮ ಗಾಂಜಾ ಸೊಪ್ಪುನ್ನು ವಶಪಡಿಸಿಕೊಂಡಿರುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ತಿಳಿಸಿದರು.

ಈ ಸಂಬಂಧ ಜಿಲ್ಲಾ ಪೊಲೀಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಬಹಿರಂಗಪಡಿಸಿದ ಎಸ್ಪಿ ಎಸ್.ಗಿರೀಶ್, ಸೆ.4 ರಿಂದ ಸೆ.17ರ ನಡುವಿನ ಅವಧಿಯಲ್ಲಿ 11 ಕಡೆ ದಾಳಿ ನಡೆಸಿ 22 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, 15 ಮಂದಿಯನ್ನು ಬಂಧಿಸಿ ಅವರಿಂದ 133 ಕೆ.ಜಿ 740 ಗ್ರಾಂ ತೂಕದ 43.91.000 ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿರುವುದಾಗಿ ವಿವರಿಸಿದರು.

15 ದಿನಗಳ ಅವಧಿಯಲ್ಲಿ 100 ಕೆ.ಜಿ ಗಾಂಜಾ ವಶ: ರಾಮನಗರ ಎಸ್‌ಪಿ15 ದಿನಗಳ ಅವಧಿಯಲ್ಲಿ 100 ಕೆ.ಜಿ ಗಾಂಜಾ ವಶ: ರಾಮನಗರ ಎಸ್‌ಪಿ

ಇನ್ನು ಪ್ರಮುಖವಾಗಿ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣ, ಮಾಗಡಿ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ ಹಾಗೂ ಚನ್ನಪಟ್ಟಣದ ಪೂರ್ವ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದೆ. ಅಲ್ಲದೇ ಹೊರ ಜಿಲ್ಲೆಗಳಲ್ಲೂ ದಾಳಿ ಮಾಡಿ ಅಕ್ರಮ ಗಾಂಜಾ ಬೆಳೆಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಮಾಹಿತಿ ನೀಡಿದರು.

Rs 44 Lakhs Worth Marijuana Seized By Ramanagara Police

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಡ್ರಗ್ಸ್ ಪ್ರಕರಣ ಬಹಿರಂಗವಾದ ಬೆನ್ನಲೇ ಎಚ್ಚೆತ್ತ ಪೊಲೀಸ್ ಇಲಾಖೆ, ಮಾದಕ ಜಾಲದ ವಿರುದ್ಧ ಸಮರ ಸಾರಿ ಸರಣಿ ದಾಳಿಗಳನ್ನು ಮಾಡುವ ಮೂಲಕ ಮಾದಕ ಜಾಲದ ಹೆಡೆಮುರಿ ಕಟ್ಟಿದ್ದಾರೆ.

Rs 44 Lakhs Worth Marijuana Seized By Ramanagara Police

Recommended Video

Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada

ರಾಮನಗರ ಜಿಲ್ಲೆಯಲ್ಲಿ ಕಳೆದ ಐದು ವರ್ಷ ಅವಧಿಯಲ್ಲಿ 99 ಕೆ.ಜಿ ಗಾಂಜಾ ವಶಪಡಿಸಿಕೊಂಡರೆ, ಕೇವಲ 15 ದಿನ ಅವಧಿಯಲ್ಲಿ 133 ಕೆ.ಜಿ ಗಾಂಜಾ ವಶಪಡಿಸಿಕೊಂಡಿರುವುದೇ ಮಾದಕ ಜಾಲದ ವಿರುದ್ಧ ಸಮರಕ್ಕೆ ಸಾಕ್ಷಿಯಾಗಿದೆ.

English summary
Ramanagar District SP S.Girish said that in the last 15 days, a series of raids on illegal marijuana, have seized about Rs 44 lakh worth of marijuana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X