ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; ಸರ್ಕಾರಿ ಅಧಿಕಾರಿಗಳಿಂದ 25 ಕೋಟಿ ರೂ. ಮೌಲ್ಯದ ಭೂಮಿ ಗುಳುಂ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 6: ಬೆಂಗಳೂರಿಗೆ ಹತ್ತಿರವಿರುವ ರಾಮನಗರ ಜಿಲ್ಲೆಯಲ್ಲಿ ಭೂ ಮಾಫಿಯಾ ಸಕ್ರಿಯವಾಗಿದೆ. ಜಿಲ್ಲೆ ಬೆಳೆದಂತೆ ಭೂಮಿಗೆ ಚಿನ್ನದ ಬೆಲೆ ಬರುತ್ತಿದ್ದ, ಇದನ್ನೇ ಬಂಡವಾಳ ಮಾಡಿಕೊಂಡ ಭೂ ಕಳ್ಳರು ಚನ್ನಪಟ್ಟಣ ತಾಲ್ಲೂಕಿನ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಸಹಕಾರದಿಂದ 25 ಕೋಟಿ ಮೌಲ್ಯದ ಸರ್ಕಾರಿ ಗೋಮಾಳವನ್ನು ಗುಳುಂ ಮಾಡಿದ್ದಾರೆ.

ಚನ್ನಪಟ್ಟಣ ತಹಶೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕನಾದ ಬಿ. ಕೆ. ಹರೀಶ್‌ ಕುಮಾರ್, ಮತ್ತೊಬ್ಬ ಸಹಾಯಕ ನಾಗರಾಜು ಹಾಗೂ ಚನ್ನಪಟ್ಟಣ ನಗರಸಭಾ ಸದಸ್ಯ ಬೋರಲಿಂಗಯ್ಯ, ಜಿಲ್ಲಾಧಿಕಾರಿಗಳ ಕಚೇರಿ ದ್ವಿತೀಯ ದರ್ಜೆ ಕ್ಲರ್ಕ್ ಚಿಕ್ಕಸಿದ್ದಯ್ಯ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಲೋಕೇಶ್ ವಿರುದ್ಧ ಸರ್ಕಾರಿ ಗೋಮಾಳ ಕಬಳಿಸಿದ ಪ್ರಕರಣ ದಾಖಲಾಗಿದೆ.

ಜೀವನಾಧರಕ್ಕಾಗಿ ಕಾಯುತ್ತಿರುವ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣಜೀವನಾಧರಕ್ಕಾಗಿ ಕಾಯುತ್ತಿರುವ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ವೆ ನಂಬರ್ 118 ರಲ್ಲಿ 192 ಎಕರೆ ಸರ್ಕಾರಿ ಗೋಮಾಳ ಜಮೀನು ಇದೆ. ಈ ಗೋಮಾಳದಲ್ಲಿ ಸುಮಾರು 23 ಎಕರೆ ಜಾಗವನ್ನು ಈ ಮೇಲಿನ ಅಧಿಕಾರಿಗಳು ಹಣದ ಆಸೆಗೆ ಬಿದ್ದು ಕಡತಗಳನ್ನ ಬದಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರಿಗೆ ನೆರವಾಗಿದ್ದಾರೆ.

Rs 25 crore land encroachment by Government officials in Ramanagara

ಚನ್ನಪಟ್ಟಣ ತಾಲ್ಲೂಕು ಕಛೇರಿಯ ಉಪ ತಹಶೀಲ್ದಾರ್ ಲಕ್ಷ್ಮೀದೇವಮ್ಮ ಅವರು ಕಡತಗಳ ಪರಿಶೀಲನೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಮೇಲಿನ ಅಧಿಕಾರಿಗಳು ಸೇರಿ ಗೋಮಾಳ ಜಮೀನಿಗೆ ಸೇರಿದ ಕಡತವನ್ನು ಮನೆಗೆ ತೆಗೆದುಕೊಂಡು ಹೋಗಿ ಪುಟ ಸಂಖ್ಯೆ 6 ರಿಂದ 55 ವರೆಗಿನ ಮೂಲತಃ ಪುಟಗಳನ್ನು ತೆಗೆದು ಆ ಜಾಗಕ್ಕೆ ನಕಲು ಸೃಷ್ಟಿಸಿದ ಕಡತದ ಪುಟಗಳನ್ನ ಸೇರಿಸಿದ್ದಾರೆ.

ರಸ್ತೆ ಕಾಮಗಾರಿ ನಡೆಸದೇ ಸಂಪೂರ್ಣ ಬಿಲ್ ಗುಳುಂ- ಶಾಸಕ ಶಿವನಗೌಡ ವಿರುದ್ಧ ಆರೋಪರಸ್ತೆ ಕಾಮಗಾರಿ ನಡೆಸದೇ ಸಂಪೂರ್ಣ ಬಿಲ್ ಗುಳುಂ- ಶಾಸಕ ಶಿವನಗೌಡ ವಿರುದ್ಧ ಆರೋಪ

ಅಲ್ಲದೇ ಈ ನಕಲಿ ಪುಟದಲ್ಲಿ ಈ ಹಿಂದಿನ ಹಲವು ರಾಮನಗರ ಜಿಲ್ಲಾಧಿಕಾರಿಗಳು, ಅಪಾರ ಜಿಲ್ಲಾಧಿಕಾರಿಗಳು ಹಾಗೂ ಚನ್ನಪಟ್ಟಣ ತಹಶೀಲ್ದಾರ್‌ಗಳ ಸಹಿಯನ್ನು ನಕಲು ಮಾಡಿದ್ದಾರೆ. ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಉಪ ತಹಶೀಲ್ದಾರ್ ಲಕ್ಷ್ಮಿ ದೇವಮ್ಮ ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Rs 25 crore land encroachment by Government officials in Ramanagara

ಪೋಲಿಸ್ ತನಿಖೆಯಲ್ಲಿ ಅಕ್ರಮ ಸಾಬೀತು; ಈಗಾಗಲೇ ಕೋಟ್ಯಾಂತರ ಮೌಲ್ಯದ ಜಮೀನು ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ತಾಲ್ಲೂಕು ಕಛೇರಿಯ ಸಹಾಯಕ ಗುಮಾಸ್ತ ಹರೀಶ್ ಕುಮಾರ್, ಮತ್ತೊಬ್ಬ ಸಹಾಯಕ ನಾಗರಾಜ್ ಹಾಗೂ ಚನ್ನಪಟ್ಟಣ ನಗರಸಭೆಯ ಮಾಜಿ ಸದಸ್ಯ ಬೋರಲಿಂಗಯ್ಯನನ್ನು ಪೋಲಿಸರು ಬಂದಿಸಿದ್ದಾರೆ. ಇನ್ನೂ ಜಿಲ್ಲಾಧಿಕಾರಿಗಳ ಕಚೇರಿ ದ್ವಿತೀಯ ದರ್ಜೆ ಕ್ಲರ್ಕ್ ಚಿಕ್ಕಸಿದ್ದಯ್ಯ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಲೋಕೇಶ್ ಇಬ್ಬರನ್ನು ಬಂಧಿಸಬೇಕಿದೆ.

Rs 25 crore land encroachment by Government officials in Ramanagara

Recommended Video

ಅಂದು ಗಂಭೀರ್ ಬಗ್ಗೆ ಟೀಕೆ ಮಾಡಿದವ್ರು ಇಂದು ಶಹಬ್ಬಾಸ್ ಹೇಳುತ್ತಿರೋದು ಯಾಕೆ? | OneIndia Kannada

ಪ್ರಕರಣದಲ್ಲಿ ಪೋಲಿಸ್ ತನಿಖೆಯಲ್ಲಿ ಮೇಲುನೋಟಕ್ಕೆ ಅಕ್ರಮ ನಡೆದಿದೆ. ಇನ್ನಷ್ಟು ತನಿಖೆ ನಡೆಸಿ ಭೂ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಆರೋಪಿಗಳು ಎಷ್ಟು ಡಿಸಿ ಮತ್ತು ಎಡಿಸಿ, ಎಷ್ಟು ಎಸಿಗಳು ಹಾಗೂ ಎಷ್ಟು ತಹಶೀಲ್ದಾರ್‌ಗಳ ಸಹಿಗಳನ್ನು ನಕಲಿ ಮಾಡಿದ್ದಾರೆ ಮತ್ತು ಈ ಹಗರಣದಲ್ಲಿ ಎಷ್ಟು ಹಣದ ವ್ಯವಹಾರ ನಡೆದಿದೆ ಎಂಬುದು ತನಿಖೆಯಲ್ಲಿ ತಿಳಿಯಲಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ತಿಳಿಸಿದ್ದಾರೆ.

English summary
25 crore value land encroachment by local politicians and government officials in kolur, Ramanagara district. Three people arreste in connection with the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X