ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಕಷ್ಟದಲ್ಲಿದ್ದ ಜಾನಪದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 30: ರಾಮನಗರದ ಜಾನಪದ ಲೋಕವು ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ರಾಮನಗರ ಜಿಲ್ಲೆಯ ಜಾನಪದ ಕಲಾವಿದರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಕಲಾವಿದರ ನೆರವಿಗೆ ದಾವಿಸಿದೆ.

ಇಂದು ಜಾನಪದ ಲೋಕದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಸುಮಾರು 110 ಜನ ಜಾನಪದ ಕಲಾವಿದರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು. ರಾಜ್ಯದ ಬೇರೆ ಜಿಲ್ಲೆಗಳ ಜಾನಪದ ಕಲಾವಿದರಿಗೂ ದಿನಸಿ ಕಿಟ್ ವಿತರಣೆ ಮಾಡಲಾಗುವುದು ಎಂದು ಜಾನಪದ ಲೋಕ ಅಡಳಿತ ಮಂಡಳಿ ತಿಳಿಸಿದೆ.

ರಾಮನಗರದ 'ಹೆಲ್ತ್‌ ಸಿಟಿ' ಕಾರ್ಯ ಈ ವರ್ಷವೇ ಆರಂಭ: ಡಿಸಿಎಂ ಅಶ್ವತ್ಥನಾರಾಯಣರಾಮನಗರದ 'ಹೆಲ್ತ್‌ ಸಿಟಿ' ಕಾರ್ಯ ಈ ವರ್ಷವೇ ಆರಂಭ: ಡಿಸಿಎಂ ಅಶ್ವತ್ಥನಾರಾಯಣ

ಈ ಸಂದರ್ಭದಲ್ಲಿ ಮಾತನಾಡಿದ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅವರು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಂದ ನಮ್ಮ ಬಡ ಜಾನಪದ ಕಲಾವಿದರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ ಎಂದು ಹೇಳಿದರು.

Ramanagara: Distribute Of Groceries Kit To Folk Artists In Distress

ಲಾಕ್ ಡೌನ್ ಘೋಷಣೆಯಾದ ನಂತರ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಅವರನ್ನು ಸಂಪರ್ಕಿಸಿ ಜಾನಪದ ಕಲಾವಿದರಿಗೆ ಕನಿಷ್ಠ ಎರಡು ಸಾವಿರ ಸಹಾಯ ಧನ ನೀಡುವ ಮೂಲಕ ಸಹಾಯ ಹಸ್ತ ನೀಡಬೇಕು ವಿನಂತಿಸಿಕೊಂಡಿದ್ದೇವೆ ಎಂದರು.

ಅಲ್ಲದೇ ಟಿ.ಎಸ್ ನಾಗಾಭರಣ ಮತ್ತು ಕಪ್ಪಣ್ಣ ಹಾಗೂ ಇತರೆ ಪ್ರಮುಖರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಜಾನಪದ ಕಲಾವಿದರ ನೆರವಿಗೆ ದಾವಿಸುವಂತೆ ಒತ್ತಾಯಿಸಿದರು.

ಮುಖ್ಯಮಂತ್ರಿಗಳು ಕಲಾವಿದರ ನೆರವಿಗೆ ಎರಡು ಕೋಟಿ ರೂ. ಹಣ ಮುಂಜೂರು ಮಾಡಿದರು, ಅದರೆ ಮುಖ್ಯಮಂತ್ರಿಗಳ ಆದೇಶಕ್ಕೆ ಇನ್ನು ಹಣಕಾಸು ಇಲಾಖೆಯಿಂದ ಮುಕ್ತಿ ಸಿಕ್ಕಿಲ್ಲ. ಸದ್ಯದಲ್ಲೆ ಹಣ ಬಿಡುಗಡೆಯಾಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
Grocery Kits Were Distributed to About Folk Artists of Four Taluks in Ramanagara District Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X