ರಾಮನಗರದಲ್ಲಿ ಜುಲೈ 23, 24ಕ್ಕೆ ಚಾಮುಂಡೇಶ್ವರಿ ಕರಗ; ಲಕ್ಷಕ್ಕೂ ಹೆಚ್ಚು ಜನ ಭಾಗಿ ನಿರೀಕ್ಷೆ

ರಾಮನಗರ, ಜುಲೈ 22: ರಾಮನಗರದ ಅದಿದೇವತೆ ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಮಂಗಳವಾರ ಹಾಗೂ ಬುಧವಾರ ನಡೆಯಲಿದ್ದು, ನಗರದಲ್ಲಿ ಸಂಭ್ರಮದ ವಾತಾವರಣ ಇದೆ. ಚಲನಚಿತ್ರ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ರಸ ಸಂಜೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.

ಮಂಗಳವಾರ ರಾತ್ರಿ ಚಾಮುಂಡಿ ದೇವಿಯ ಕರಗವು ದೇವಾಲಯದಿಂದ ಹೊರಟು, ಇಡೀ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಭಕ್ತಾದಿಗಳಿಂದ ಪೂಜೆ ನಡೆದು, ಬುಧವಾರ ಬೆಳಗ್ಗೆ ಕೊಂಡ ತುಳಿದು, ದೇವಾಲಯ ಪ್ರವೇಶಿಸುತ್ತದೆ.

ಸಪ್ತ ದೇವತೆಗಳಾದ ಚಾಮುಂಡೇಶ್ವರಿ, ಆದಿಶಕ್ತಿ, ಮುತ್ತುಮಾರಮ್ಮ, ಬಿಸಿಲುಮಾರಮ್ಮ, ಭಂಡಾರದಮ್ಮ, ಕೊಲ್ಲಾಪುರದಮ್ಮ, ಮಗ್ಗದಕೇರಿ ಮಾರಮ್ಮ ಕರಗ ಮಹೋತ್ಸವ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯಲಿದ್ದು, ಈ ಪೈಕಿ ನಾಲ್ಕು ಕರಗಗಳು ಮಾತ್ರ ಅಗ್ನಿಕೊಂಡ ಪ್ರವೇಶ ಮಾಡಲಿವೆ.

Ramanagara Chamundehwari Karaga on July 23rd and 24th

ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ತೋರಣ
ಚಾಮುಂಡೇಶ್ವರಿ ದೇವಿ ಕರಗಕ್ಕಾಗಿ ಪ್ರಮುಖ ರಸ್ತೆಗಳಲ್ಲಿರುವ ಕಟ್ಟಡಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ತೋರಣಗಳು ಗಮನ ಸೆಳೆಯುತ್ತಿವೆ. ಮಂಗಳವಾರ ಸಂಜೆ ಜಿಲ್ಲಾ ಕ್ರೀಡಾಂಗಣ ಮತ್ತು ಶ್ರೀ ರಾಮ ಚಿತ್ರ ಮಂದಿರದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದ್ಕಕಾಗಿ ಬೃಹತ್ ವೇದಿಕೆಗಳು ಸಿದ್ಧವಾಗುತ್ತಿವೆ.

ರಾಮನಗರದ ಬಹುತೇಕ ಬಡಾವಣೆಯಲ್ಲಿ ಈ ನವ ದೇವತೆಗಳ ದೇವಾಲಯಗಳು ಇವೆ. ಬಿ. ಎಂ. ರಸ್ತೆ, ರಸ್ತೆಯ ಪಕ್ಕದಲ್ಲಿರುವ ಬೃಹತ್ ಕಟ್ಟಡಗಳು, ನಗರದ ಸರಕಾರಿ ಜ್ಯೂನಿಯರ್ ಕಾಲೇಜು ಆವರಣ ಮತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ಅಳವಡಿಸಿರುವ ವಿಶೇಷ ದೀಪಾಲಂಕಾರ ನೋಡುಗರ ಮನ ಸೆಳೆಯುತ್ತಿದೆ.

Ramanagara Chamundehwari Karaga on July 23rd and 24th

ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜೂನಿಯರ್ ಕಾಲೇಜು ಮೈದಾನ ಸಿದ್ಧವಾಗಿದೆ. ಎಚ್. ಡಿ. ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಗರಸಭೆ ವತಿಯಿಂದ ಹಲವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸಿಸಿಟಿವಿ ಕ್ಯಾಮೆರಾ ಕಣ್ಗಾವಲು
ಚಾಮುಂಡೇಶ್ವರಿ ದೇವಾಲಯದ ಬಳಿ, ಕಾಮಣ್ಣನಗುಡಿ ವೃತ್ತ, ಎಂ. ಜಿ. ರಸ್ತೆ, ಶ್ರೀರಾಮ ಚಿತ್ರಮಂದಿರದ ಬಳಿ, ವಾಟರ್ ಟ್ಯಾಂಕ್ ಸರ್ಕಲ್, ರೈಲ್ವೆ ಅಂಡರ್‌ಪಾಸ್, ಜ್ಯೂನಿಯರ್ ಕಾಲೇಜು ಮೈದಾನ ಪ್ರವೇಶ ಮಾಡುವ ನಾಲ್ಕು ಕಡೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ.

Ramanagara Chamundehwari Karaga on July 23rd and 24th

ನಗರದಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹೊರ ಜಿಲ್ಲೆಗಳ ಭದ್ರತಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಮದ್ಯ ಮಾರಾಟ ನಿಷೇಧ: ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವದ ಅಂಗವಾಗಿ ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಆದೇಶ ಹೊರಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+