ರಾಮನಗರ ಉಪ ಚುನಾವಣೆ ಫಲಿತಾಂಶ : ಅನಿತಾ ಭರ್ಜರಿ ಗೆಲುವು

ರಾಮನಗರ, ನವೆಂಬರ್ 06 : ಜಮಖಂಡಿ ವಿಧಾನಸಭೆ, ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿ ಲೋಕಸಭೆ ಚುನಾವಣೆಯಂತೆ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ನಿರೀಕ್ಷೆಯಂತೆ ಜಯಭೇರಿ ಬಾರಿಸಿದ್ದಾರೆ.

ಅನಿತಾ ಅವರಿಗೆ ಪ್ರಮುಖ ಸ್ಪರ್ಧಿಯಾಗಿದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್ ಚಂದ್ರಶೇಖರ್ ಅವರು, ಮತದಾನ ಇನ್ನೇನು ಎರಡೇ ದಿನಗಳಿರುವಾಗ ಭಾರತೀಯ ಜನತಾ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ, ರಾಮನಗರದಲ್ಲಿ ಕಾಟಾಚಾರಕ್ಕೆ ಮತದಾನ ನಡೆದಿತ್ತು.

ಚಂದ್ರಶೇಖರ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಅಧಿಕೃತ ಮಾಹಿತಿ ನೀಡದಿದ್ದ ಕಾರಣ ಅವರ ಹೆಸರು ಮತಪೆಟ್ಟಿಗೆಯಲ್ಲಿ ಹಾಗೆಯೇ ಇತ್ತು. ಹೀಗಾಗಿ ಅವರಿಗೆ ಒಂದಿಷ್ಟು ಮತಗಳು ಬಂದಿವೆ.

Ramanagara assembly by election results 2018

ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆಡಿರುವ ಆಟದಿಂದಾಗಿ ಮತ್ತು ಬಿಜೆಪಿ ನಾಯಕರ ಉದಾಸೀನದಿಂದಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ ಕಳೆದುಕೊಂಡಂತಾಗಿದೆ. ಮತದಾರರು ಅನಿತಾ ಬಗ್ಗೆ ಆಕ್ರೋಶಗೊಂಡಿದ್ದರೂ ಅವರನ್ನೇ ಗೆಲ್ಲಿಸಬೇಕಾದ ಪರಿಸ್ಥಿತಿ ಬಂದಿರುವುದು ವಿಚಿತ್ರ ಮತ್ತು ವಿಡಂಬನಾತ್ಮಕ.

Nov 06, 2018, 10:39 am IST

ಅನಿತಾ ಕುಮಾರಸ್ವಾಮಿ ಅವರು 62,238 ಮತಗಳನ್ನು ಗಳಿಸಿದ್ದಾರೆ. ಚಂದ್ರಶೇಖರ್ ಅವರು 8,524 ಮತಗಳನ್ನು ಗಳಿಸಿದ್ದಾರೆ. ಅನಿತಾ ಅವರು ಗೆಲುವಿನ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
Nov 06, 2018, 10:25 am IST

ಎರಡನೇ ಬಾರಿ ಅನಿತಾ ಕುಮಾರಸ್ವಾಮಿ ಅವರು ವಿಧಾನಸಭೆ ಪ್ರವೇಶಿಸಲಿದ್ದಾರೆ. 2008ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಅವರು ಮಧುಗಿರಿಯಿಂದ ಜಯಭೇರಿ ಬಾರಿಸಿದ್ದರು. 2013ರಲ್ಲಿ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿರುದ್ಧ ಸೋಲು ಅನುಭವಿಸಿದ್ದರು.
Nov 06, 2018, 10:15 am IST

ಭರ್ಜರಿ ಗೆಲುವಿನ ಸನಿಹದಲ್ಲಿ ಅನಿತಾ ಕುಮಾರಸ್ವಾಮಿ. ಬಿಜೆಪಿಯ ಚಂದ್ರಶೇಖರ ಅವರು ಹಿಂಜರಿದಿದ್ದರಿಂದ ಅವರಿಗೆ ಸ್ಪರ್ಧೆಯೇ ಇಲ್ಲದಂತಾಗಿತ್ತು. ಗೆದ್ದು, ಗಂಡ ಕುಮಾರಸ್ವಾಮಿ ಅವರ ಸಂಪುಟ ಸೇರಿದರೂ ಅಚ್ಚರಿಯಿಲ್ಲ.
Nov 06, 2018, 8:56 am IST

4ನೇ ಸುತ್ತಿನ ಮತ ಎಣಿಕೆಯ ನಂತರ ರಾಮನಗರದಲ್ಲಿ 20 ಸಾವಿರ ಮತಗಳ ಅಂತರ ಕಾಯ್ದುಕೊಂಡಿರುವ ಅನಿತಾ ಕುಮಾರಸ್ವಾಮಿ.
Nov 06, 2018, 8:31 am IST

ಮೊದಲ ಸುತ್ತಿನ ಮತ ಎಣಿಕೆಯ ನಂತರ ಅನಿತಾ ಕುಮಾರಸ್ವಾಮಿ ಅವರಿಗೆ 3,520 ಮತಗಳ ಮುನ್ನಡೆ.
Nov 06, 2018, 8:17 am IST

ಮೊದಲ ಸುತ್ತಿನ ಎಣಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಮುನ್ನಡೆ ಸಾಧಿಸಿದ್ದಾರೆ.
Nov 06, 2018, 8:16 am IST

ರಾಮನಗರದಲ್ಲಿ ಚಲಾವಣೆಯಾಗಿದ್ದು ಒಂದೇ ಒಂದು ಅಂಚೆ ಮತ, ಅದೂ ಅಸಿಂಧು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+