ರಾಮನಗರದಲ್ಲಿ 3 ಪಕ್ಷಗಳ ಜಿದ್ದಾಜಿದ್ದಿ... ಘಟಾನುಘಟಿಗಳ ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ!

ರಾಮನಗರ: ರಾಮನಗರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ ಪಕ್ಷಗಳು ಮೊದಲಿನಿಂದಲೂ ಮೇಲುಗೈ ಸಾಧಿಸುತ್ತಿವೆ. ಆದರೆ ಈ ಬಾರಿ ಬಿಜೆಪಿ ಕೂಡ ತನ್ನ ಗಟ್ಟಿ ಪೈಪೋಟಿ ನೀಡಲು ನಿರ್ಧರಿಸಿದ್ದು, ರಾಮನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿಯ ಪೈಪೋಟಿ ಮುಂದುವರೆದಿದೆ.

ಈ ಬಾರಿಯ ಚನ್ನಪಟ್ಟಣ, ಕನಕಪುರ, ರಾಮನಗರ ಕ್ಷೇತ್ರಗಳ ಫಲಿತಾಂಶವು ಸಾಕಷ್ಟು ಚರ್ಚೆಯಾಗಿದೆ. ಏಕೆಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಸಚಿವ ಆರ್‌.ಅಶೋಕ್‌, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಮಾಜಿ ಸಚಿವ ಸಿಪಿ ಯೋಗೇಶ್ವರ್‌, ನಿಖಿಲ್‌ ಕುಮಾರಸ್ವಾಮಿ ಕಣದಲ್ಲಿದ್ದಾರೆ.

 ramanagara Result

ಸದ್ಯ ಮೊದಲ ಸುತ್ತಿನ ಮತ ಎಣಿಕೆ ಬಳಿಕ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ (ಬಿಜೆಪಿ) ಮುನ್ನಡೆ, ಕನಕಪುರದಲ್ಲಿ ಡಿಕೆ ಶಿವಕುಮಾರ್ (ಕಾಂಗ್ರೆಸ್) ಮುನ್ನಡೆ, ಮಾಗಡಿಯಲ್ಲಿ ಮಂಜುನಾಥ್ (ಜೆಡಿಎಸ್)ಮುನ್ನಡೆ, ರಾಮನಗರ ನಿಖಿಲ್ ಕುಮಾರ ಸ್ವಾಮಿ (ಜೆಡಿಎಸ್)ಮುನ್ನಡೆ ಕಾಯ್ದುಕೊಂಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಒಟ್ಟಾರೆ ಈ ಬಾರಿ ಶೇ. 85.04ರಷ್ಟು ಮತದಾನವಾಗಿದೆ. ಚನ್ನಪಟ್ಟಣದಲ್ಲಿ ಶೇ.85.27, ಮಾಗಡಿ ಶೇ.86.18, ಕನಕಪುರದಲ್ಲಿ ಶೇ.84.52 ಹಾಗೂ ರಾಮನಗರದಲ್ಲಿ ಶೇ.84.09ರಷ್ಟು ಮತದಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+