ವ್ಯಾಪಾರ ವೃದ್ಧಿಗಾಗಿ ಅಂಗಡಿಗಳಿಗೆ ಬೆಂಕಿ ಇಟ್ಟ ರಾಜಸ್ಥಾನ ಮೂಲದ ವ್ಯಾಪಾರಿ ಬಂಧನ

ರಾಮನಗರ, ಡಿಸೆಂಬರ್ 22: ರಾಜಸ್ಥಾನ ಮೂಲದ ವ್ಯಾಪಾರಿಯೊಬ್ಬ ತನ್ನ ಇಬ್ಬರು ಪ್ರತಿಸ್ಪರ್ಧಿ ವ್ಯಾಪಾರಿಗಳ ಅಂಗಡಿಗೆ ಬೆಂಕಿಯಿಟ್ಟು, ಇದೀಗ ಪೊಲೀಸರ ಅಥಿತಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಆರೋಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಆರೋಹಳ್ಳಿ ಪಟ್ಟಣದ ಮಹದೇವ್ ಆಟೋಮೊಬೈಲ್ ಮಳಿಗೆ ಹೊಂದಿರುವ ರಾಜಸ್ತಾನ ಮೂಲದ ಮುಕೇಶ್ ಕುಮಾರ್ ಎಂಬಾತ, ಪಟ್ಟಣದಲ್ಲಿನ ಕೃಷ್ಣಾ ಆಟೋಮೊಬೈಲ್ ಮತ್ತು ಮಹಾಲಕ್ಷ್ಮಿ ಆಟೋಮೊಬೈಲ್ ಎರಡು ಅಂಗಡಿಗಳಿಗೆ ಬೆಂಕಿಯಿಟ್ಟು ಸುಮಾರು 43 ಲಕ್ಷ ರೊಪಾಯಿ ನಷ್ಟ ಮಾಡಿರುವ ಆರೋಪದ ಮೇಲೆ ಆರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇದೇ ತಿಂಗಳ ಡಿ.10 ರಂದು ಕೃಷ್ಣಾ ಆಟೋಮೊಬೈಲ್ ಅಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋದ ಘಟನೆಯ ಹಿನ್ನಲೆಯಲ್ಲಿ ಮಾಲೀಕ ರಘುವೀರ್ ಸಿಂಗ್ ದೂರು ನೀಡಿದ್ದಾರೆ.

 Ramanagara: Rajasthan-Based Merchant Arrested For Setting Fire To Shops

ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಮಹದೇವ್ ಆಟೋಮೊಬೈಲ್ ಅಂಗಡಿ ಮಾಲೀಕ ಮುಕೇಶ್ ಎಂಬಾತನ್ನು ವಿಚಾರಣೆ ನಡೆಸಿದ್ದಾಗ, ಪಟ್ಟಣದ ಕೃಷ್ಣಾ ಮತ್ತು ಕಳೆದ ವರ್ಷ ಮಹಾಲಕ್ಷ್ಮಿ ಆಟೋಮೊಬೈಲ್ ಅಂಗಡಿಗೆ ಬೆಂಕಿ ಹಚ್ಚಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.

 Ramanagara: Rajasthan-Based Merchant Arrested For Setting Fire To Shops

ಮುಕೇಶ ಕುಮಾರ್ ನು ಕೃಷ್ಣಾ ಆಟೋಮೊಬೈಲ್ ಅಂಗಡಿಯಿಂದ ನನ್ನ ವ್ಯಾಪಾರ ಕಡಿಮೆಯಾಗಿದೆ ಎಂಬ ದ್ವೇಷದಿಂದಾಗಿ, ರಾಜಸ್ಥಾನ ಮೂಲದ ಗೆಳೆಯ ಝಾಕೀರ್, ಬಲವೀರ್ ಸಿಂಗ್ ಹಾಗೂ ಸ್ನೇಹಿತರಿಗೆ ಹಣ ನೀಡಿ ಎರಡು ಅಂಗಡಿಗಳಿಗೆ ಬೆಂಕಿ ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳಾದ ಮುಕೇಶ್ ಕುಮಾರ್, ಝಾಕೀರ್ ಮತ್ತು ಬಲವೀರ್ ಸಿಂಗ್ ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Recommended Video

      Londonನಿಂದ ಬಂದರೂ Quarantine ಆಗಲಿಲ್ಲ ಈ ನಟಿ! ಮನೆಯಿಂದ ಆಚೆ ಬರಬೇಡಿ ಅಂತಿದ್ದಾರೆ ಅಭಿಮಾನಿಗಳು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+