ರಾಮನಗರ; ಪಾದರಾಯನಪುರ ಕೈದಿಗಳ ಶಿಫ್ಟ್ ಗೆ ಅಡ್ಡಿಯಾದ ಮಳೆ

ರಾಮನಗರ, ಏಪ್ರಿಲ್ 24: ರಾಮನಗರ ಜೈಲಿಗೆ ಬೆಂಗಳೂರಿನಿಂದ ಕರೆತಂದಿದ್ದ ಪಾದರಾಯನಪುರದ ಪುಂಡರಲ್ಲಿ ಇಬ್ಬರು ಕೈದಿಗಳಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಸೋಂಕು ಇರುವ ಇಬ್ಬರು ಆರೋಪಿಗಳನ್ನು ಮಧ್ಯರಾತ್ರಿ ಸುಮಾರು 1 ಗಂಟೆಗೆ ಆಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಕುರಿತು ತುರ್ತು ಸಭೆ ನಡೆಸಿದ ಜಿಲ್ಲಾಡಳಿತ ಇಂದು ಉಳಿದ ಎಲ್ಲಾ ಆರೋಪಿಗಳನ್ನು ಹಜ್ ಭವನಕ್ಕೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಂಡಿತ್ತು. ಆದರೆ ಬೆಳ್ಳಂಬೆಳಿಗ್ಗೆ ಶುರುವಾದ ಮಳೆಯಿಂದಾಗಿ ಅವರ ಸ್ಥಳಾಂತರಕ್ಕೆ ಅಡ್ಡಿಯಾಗಿದೆ. ಪಾದರಾಯನಪುರದ ಆರೋಪಿಗಳನ್ನು ಶಿಫ್ಟ್ ಮಾಡಲು ಬಂದಿದ್ದ ಬಸ್ ಗಳು ವಾಪಸ್ ತೆರಳಿವೆ.

Problem To Shift Padarayanapura Prisoners From Ramanagar Jail

119 ಕೈದಿಗಳನ್ನು ಸ್ಥಳಾಂತರಿಸಲು ರಾಮನಗರ ಕೆಎಸ್ ಆರ್ ಟಿಸಿ ಘಟಕದಿಂದ 14 ಬಸ್ ಗಳನ್ನು ಕರೆತರಲಾಗಿದ್ದು, ಮಳೆಯಿಂದಾಗಿ ಶಿಫ್ಟಿಂಗ್ ಗೆ ಅಡ್ಡಿಯಾಗಿ ಸಾರಿಗೆ ಘಟಕಕ್ಕೆ ಮರಳಿವೆ. ಮಧ್ಯಾಹ್ನದ ಬಳಿಕ ವಾತಾವರಣ ಗಮನಿಸಿ ಸ್ಥಳಾಂತರ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+