ರಾಮನಗರ: 13 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ಬರೆಯಲಿರುವ 9912 ವಿದ್ಯಾರ್ಥಿಗಳು

ರಾಮನಗರ, ಏಪ್ರಿಲ್ 22: ಹಿಜಾಬ್ ರಹಿತವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ಸಿಯಾಗಿ ನಡೆಸಿದ್ದ ಜಿಲ್ಲಾಡಳಿತ ನಾಳೆ ಹಿಜಾಬ್ ವಿವಾದ ನಡುವೆ ಪಿ.ಯು.ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಹಿಜಾಬ್ ಧರಿಸಲು ಅವಕಾಶ ಕೋರಿ ನ್ಯಾಯಾಲಯದ ಮೆಟ್ಟಲು ಎರಿದ್ದು ಪಿ.ಯು.ಸಿ ವಿಧ್ಯಾರ್ಥಿನಿಯರು ಹಾಗೂ ರಾಜ್ಯಾದ್ಯಂತ ಪೂರಕ ಪರೀಕ್ಷೆಯನ್ನು ಬಹಿಷ್ಕಾರಿಸಿ ಪ್ರತಿಭಟನೆ ಮಾಡಿದ್ದು ಪಿಯುಸಿ ವಿದ್ಯಾರ್ಥಿನಿಯರು ಹಾಗಾಗಿ ನಾಳಿನ ಪರೀಕ್ಷೆ ಕುತುಹಲ ಮೂಡಿಸಿದೆ.

ಏ. 22 ರಿಂದ ದ್ವಿತೀಯ ಪಿ.ಯು.ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈ ಬಾರಿ ಜಿಲ್ಲೆಯಿಂದ ಪುನರಾವರ್ತಿತ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 9912 ಮಂದಿ ಪರೀಕ್ಷೆ ಎದುರಿಸಲಿದ್ದಾರೆ.

ಒಟ್ಟು 9912 ಮಂದಿ ವಿದ್ಯಾರ್ಥಿಗಳಲ್ಲಿ ಇದೇ ಪ್ರಥಮ ಬಾರಿಗೆ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 8483 ಆಗಿದೆ. ಈ ಪೈಕಿ 3905 ಮಂದಿ ಗಂಡು ಮಕ್ಕಳು ಮತ್ತು 4578 ಮಂದಿ ಹೆಣ್ಣು ಮಕ್ಕಳಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 1091. ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ 338. ಒಟ್ಟು 9912 ಮಂದಿ ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ.

PUC Exams: 9912 Students to take Exam in Ramanagara

ಕಲಾ ವಿಭಾಗದಲ್ಲಿ 1316 ಗಂಡು ಮತ್ತು 1086 ಹೆಣ್ಣು ಒಟ್ಟು 2402 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1869 ಮಂದಿ ಗಂಡು, 2295 ಮಂದಿ ಹೆಣ್ಣು ಒಟ್ಟು 4164 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ವಿಜ್ಞಾನ ವಿಭಾಗದಲ್ಲಿ 720 ಗಂಡು, 1197 ಹೆಣ್ಣು ಒಟ್ಟು 1197 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಏಪ್ರಿಲ್ 22ರ ಶುಕ್ರವಾರದಿಂದ ಮೇ 18ರ ಮಂಗಳವಾರದವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸಮಯ ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ನಡಯಲಿದೆ.

ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರಗಳು

ಯಾವ ಗೊಂದಲಕ್ಕೂ ಅವಕಾಶವಾಗದಂತೆ ಪರೀಕ್ಷೆ ನಡೆಸಲು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಪಾಲಿಸಿರುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕು ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಕನಕಪುರ ನಗರದಲ್ಲಿ 02, ಹಾರೋಹಳ್ಳಿಯಲ್ಲಿ 01, ರಾಮನಗರದಲ್ಲಿ 4, ಬಿಡದಿಯಲ್ಲಿ 1, ಚನ್ನಪಟ್ಟಣದಲ್ಲಿ 3 ಮತ್ತು ಮಾಗಡಿ ತಾಲ್ಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳನ್ನು ಇಲಾಖೆ ಸ್ಥಾಪಿಸಿದೆ.

PUC Exams: 9912 Students to take Exam in Ramanagara

ಹಿಜಾಬ್‌ಗೆ ಅವಕಾಶವಿಲ್ಲ

ದ್ವಿತೀಯ ಪಿಯುಸಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳು ಹಿಜಾಬ್ ಸೇರಿದಂತೆ ಯಾವುದೇ ದಾರ್ಮಿಕ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಶಿಕ್ಷಣ ಸಚಿವರು ಈಗಾಗಲೆ ಸೂಚನೆ ಕೊಟ್ಟಿದ್ದಾರೆ. ಸಮವಸ್ತ್ರ ಪಾಲನೆ ಇದ್ದರೆ ಸಮವಸ್ತ್ರವನ್ನು ಧರಿಸಬಹುದು. ಕೆಲ ವಾರಗಳ ಹಿಂದೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ ವೇಳೆಯೂ ಹಿಜಾಬ್ ಧರಿಸಲು ಸರ್ಕಾರ ಅವಕಾಶ ಕೊಟ್ಟಿರಲಿಲ್ಲ. ಆಗ ಕೆಲವು ಕೇಂದ್ರಗಳ ಬಳಿ ಜನ ಜಮಾಯಿಸಿದ್ದರು. ಪರಿಸ್ಥಿತಿ ಹದಗೆಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಹಾಗೆಯೇ ಪಿ.ಯು.ಸಿ ಪರೀಕ್ಷೆ ವೇಳೆ ಪೊಲೀಸರ ಎಚ್ಚರವಹಿಸಲಿದ್ದಾರೆ. ಹಿಜಾಬ್ ಅಥವಾ ದಾರ್ಮಿಕ ವಸ್ತ್ರಗಳನ್ನು ಧರಿಸಿ ಬರುವ ವಿದ್ಯಾರ್ಥಿಗಳು ಅವುಗಳನ್ನು ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಿರುವ ಸ್ಥಳದಲ್ಲಿ ತೆಗೆದಿಟ್ಟು ನಂತರ ಪರೀಕ್ಷಾ ಕೊಠಡಿ ಪ್ರವೇಶಿಸಬೇಕಾಗಿದೆ.

ಪರೀಕ್ಷೆ ಸುಸೂತ್ರವಾಗಿ ನಡೆಯಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಸಿದ್ದತೆಗಳು ನಡೆದಿವೆ. ಅಲ್ಲದೇ ಶಿಕ್ಷಣ ಇಲಾಖೆ ಕೂಡ ಮುಖ್ಯ ಅಧೀಕ್ಷಕರನ್ನು ನೇಮಿಸಿದೆ. ರೂಟ್ ಕಮಿಟಿ ಅಸ್ತಿತ್ವದಲ್ಲಿದೆ‌ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಡಿಡಿಪಿಯು ಗೋವಿಂದರಾಜು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+