ರಾಮನಗರ; ರೇಷ್ಮೆ ಬೆಲೆ ಕುಸಿತ, ರೈತರು ಕಂಗಾಲು
ರಾಮನಗರ, ಜೂನ್ 2: ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಎಂದು ಖ್ಯಾತಿ ಪಡೆದಿರುವ ರೇಷ್ಮೆ ನಗರಿ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಪ್ರತಿ ಕೆಜಿ ಗೂಡಿಗೆ 1043ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸುವ ಜೊತೆಗೆ ರೇಷ್ಮೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿತ್ತು.
ದಾಖಲೆ ಏರಿಕೆಯಾಗಿ ರೇಷ್ಮೆ ಸಚಿವರಿಂದಲೂ ಪ್ರಶಂಸೆ ಪಡೆದಿದ್ದ ಗೂಡಿನ ಬೆಲೆ ಇತ್ತೀಚೆಗೆ ಗಣನೀಯವಾಗಿ ಇಳಿಮುಖದತ್ತ ಸಾಗುತ್ತಿದೆ. ಪ್ರತಿ ಕೆಜಿಗೆ ರೇಷ್ಮೆ ಧಾರಣೆಯಲ್ಲಿ 100 ರಿಂದ 150ರ ತನಕ ವ್ಯತ್ಯಾಸ ಕಂಡು ಬಂದಿದ್ದು ರೇಷ್ಮೆ ಬೆಳೆಗಾರರ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ದೇಶೀಯ ರೇಷ್ಮೆ ಗೂಡಿನ ಮೌಲ್ಯವರ್ದನೆಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆ ಪ್ರಕಾರ ಚೀನಾ ರೇಷ್ಮೆ ಗೂಡು ಆಮದು ಪ್ರಮಾಣ ಕಡಿಮೆ ಮಾಡುವ ಸಂಬಂಧ, ಆಮದು ರೇಷ್ಮೆಗೂಡಿನ ಮೇಲೆ ಶೇ.5ರಷ್ಟು ಸುಂಕವನ್ನು ಹೆಚ್ಚಳ ಮಾಡಿತ್ತು. ಈ ಪರಿಣಾಮದಿಂದಾಗಿ ಕಳೆದ ಮೂರುನಾಲ್ಕು ತಿಂಗಳುಗಳು, ದ್ವಿತಳಿ ಹಾಗೂ ಮಿಶ್ರ ತಳಿ ಗೂಡು ಪ್ರತಿ 700ರಿಂದ 800, 900 ರೂ.ವರೆಗೆ ಮಾರಾಟವಾಗುತ್ತಿತ್ತು.
ಏಷ್ಯಾದಲ್ಲೇ ಅತಿದೊಡ್ಡ ಗೂಡು ಹರಾಜು ಮಾರುಕಟ್ಟೆ ಎಂಬ ಖ್ಯಾತಿ ಇಲ್ಲಿನ ಮಾರುಕಟ್ಟೆಯದ್ದಾಗಿತ್ತು. ಈ ಹಿಂದೆ ನಿತ್ಯ ಸರಾಸರಿ 40-50 ಟನ್‌ನಷ್ಟು ಗೂಡು ವಹಿವಾಟು ನಡೆಯುತ್ತಿತ್ತು. ಕೆಲವೊಮ್ಮೆ ಇದು 70-80 ಟನ್‌ಗೂ ತಲುಪಿದ್ದೂ ಉಂಟು. ಒಟ್ಟಾರೆ ಕಳೆದೊಂದು ವರ್ಷದಿಂದ ಉತ್ಪಾದನೆ ಪ್ರಮಾಣದಲ್ಲಿ ದಿಢೀರ್ ಕುಸಿತ ಕಂಡಿದೆ. ಇದರಿಂದಾಗಿ ಮಾರುಕಟ್ಟೆಗೆ ನಿತ್ಯ ಸರಾಸರಿ 15-20 ಟನ್ ಗೂಡು ಬಂದರೆ ಹೆಚ್ಚು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

ದಿಢೀರ್ ಕುಸಿತಕಂಡ ರೇಷ್ಮೆ
ಮಾರುಕಟ್ಟೆಯಲ್ಲಿ ರೇಷ್ಮೆ ವಹಿವಾಟು ಕುಸಿದ ಹಿನ್ನಲೆಯಲ್ಲಿ ರೇಷ್ಮೆಗೂಡಿಗೆ ದಾಖಲೆಯ ಬೆಲೆ ಸಿಕ್ಕಿತ್ತು. ಮಾರುಕಟ್ಟೆಯಲ್ಲಿ ದ್ವಿತಳಿ ಗೂಡು ಪ್ರತಿ ಕೆಜಿಗೆ 1100ರವರೆಗೂ ಮಾರಾಟ ಆಗುವ ಮೂಲಕ ದಾಖಲೆ ಸೃಷ್ಟಿಮಾಡಿತ್ತು. ರಾಮನಗರ ರೇಷ್ಮೆ ಮಾರುಕಟ್ಟೆಯಂತೆಯೇ ಶಿಡ್ಲಘಟ್ಟ ಮಾರುಕಟ್ಟೆಯಲ್ಲಿ ಇದೇ ತಳಿ ಗೂಡು 1199ಕ್ಕೆ ಮಾರಾಟ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಪ್ರಸ್ತುತ ಮಿಶ್ರ ತಳಿ ಗೂಡು ಪ್ರತಿ ಕೆಜಿಗೆ ಸರಾಸರಿ 400 ಹಾಗೂ ದ್ವಿತಳಿ ಗೂಡು ಕೆಜಿಗೆ 550ರ ದರದಲ್ಲಿ ಮಾರಾಟ ನಡೆದಿದೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಗೂಡು ಬರುತ್ತಿರುವ ಹಿನ್ನಲೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ನೀಡುತ್ತಾರೆ.

ಬೆಲೆ ಇನ್ನೂ ಹೆಚ್ಚಾಗಬಹುದೆಂಬ ನಿರೀಕ್ಷೆ
ಫೆ.2 ರಂದು ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ರೇಷ್ಮೆ ಗೂಡಿಗೆ 1043 ರೂ ಧಾರಣೆಗೆ ಮಾರಾಟವಾದ ಹಿನ್ನಲೆ ರೇಷ್ಮೆ ಖಾತೆ ಸಚಿವ ಡಾ.ನಾರಾಯಣ ಗೌಡ ಅವರು ಸಾಮಾಜಿಕ ಜಾಲ ತಾಣದಲ್ಲಿ ಮಾರುಕಟ್ಟೆಯ ಬಿಲ್ ಹರಿಬಿಟ್ಟು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ರೇಷ್ಮೆ ಮಾರುಕಟ್ಟೆಗಳಲ್ಲಿ ಆಗುತ್ತಿದ್ದ ಭ್ರಷ್ಟಾಚಾರ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿರುವ ಪರಿಣಾಮದಿಂದ ರೇಷ್ಮೆ ಗೂಡಿನ ಗುಣಮಟ್ಟಕ್ಕೆ ತಕ್ಕಂತೆ ನೈಜ ಬೆಲೆ ಸಿಗುತ್ತಿದೆ ಎಂದು ತಮ್ಮ ಬೆನ್ನು ತಟ್ಟಿಕೊಂಡಿದ್ದರು.
ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡ ಪರಿಣಾಮದಿಂದ ರೇಷ್ಮೆ ಗೂಡಿನ ದರವೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆಯಿತ್ತು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ರೇಷ್ಮೆ ಬೆಳೆಗಾರರ ಜೊತೆ ನಮ್ಮ ಸರ್ಕಾರ ಇದೆ. ರೇಷ್ಮೆ ಬೆಳೆಗಾರರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಹಾಗೂ ಗುಣಮಟ್ಟಕ್ಕೆ ತಕ್ಕಂತೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುವ ಭರವಸೆಯನ್ನು ರೇಷ್ಮೆ ಖಾತೆ ಸಚಿವ ಡಾ.ನಾರಾಯಣ ಗೌಡ ನೀಡಿದ್ದರು.

ಪ್ರತಿ ಕೆಜಿಗೆ 200 ರೂ ಕುಸಿತ
ರಾಮನಗರ ರೇಷ್ಮೆ ಮಾರುಕಟ್ಟೆಗೆ ಕಳೆದವಾರ ಭೇಟಿ ನೀಡಿದ್ದ ರೇಷ್ಮೆ ಖಾತೆ ಸಚಿವ ಡಾ.ನಾರಾಯಣ ಗೌಡ, ರೇಷ್ಮೆ ಬೆಲೆ ಕುಸಿಯದಂತೆ ನೋಡಿಕೊಳ್ಳಲಾಗುತ್ತದೆ. ರೈತರಿಗೆ ಹಾಗೂ ಬೆಳೆಗಾರರಿಗೆ ಅನುಕೂಲವಾಗುವಂತೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಭರವಸೆ ನೀಡಿದ್ದರು. ಆದರೆ ಸಚಿವರ ಭರವಸೆಯ ನಂತರದ ದಿನಗಳಲ್ಲಿ ಪ್ರತಿ ಕೆಜಿಗೆ 200 ರೂ. ರೇಷ್ಮೆ ಧಾರಣೆ ಕುಸಿತವಾಗುತ್ತಿದೆ, ಆದರೂ ರೈತರ ನೆರವಿಗೆ ಧಾವಿಸುತ್ತಿಲ್ಲ, ಅವರ ಕೊಟ್ಟು ಮಾತು ಹುಸಿಯಾಗಿದೆ ರೇಷ್ಮೆ ಬೆಳಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ರೇಷ್ಮೆ ಗೂಡಿನ ಪ್ರಮಾಣದಲ್ಲಿ ಏರಿಕೆ
ರೇಷ್ಮೆ ಧಾರಣೆ ಕುಸಿತಕ್ಕೆ ಪ್ರತಿಕ್ರಿಯೆ ನೀಡಿರುವ ರೇಷ್ಮೆ ಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಬಿರದರದಿನ್ನಿ, ರೇಷ್ಮೆಗೆ ದಾಖಲೆಯ ಬೆಲೆ ದೊರೆತ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಬರುವ ರೇಷ್ಮೆ ಗೂಡಿನ ಪ್ರಮಾಣ ಹೆಚ್ಚಾದ ಕಾರಣ ಕಳೆದ ಹಲವು ದಿನಗಳಿಂದಲೂ ರೇಷ್ಮೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಪ್ರತಿ ಕೆಜಿ ರೇಷ್ಮೆ ಗೂಡಿಗೆ 150 ರಿಂದ 200 ರೂ ಬೆಲೆ ಕಡಿಮೆಯಾಗಿದೆ ಎಂದಿದ್ದಾರೆ.
ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಇಂದು CB ರೇಷ್ಮೆ ಗೂಡು ಗರಿಷ್ಠ 615 ರೂ.ಗಳಿಗೆ. ಕನಿಷ್ಠ 400 ರೂಗಳಿಗೆ , ರಾಸರಿ 547 ರೂ.ಗೆ ಮಾರಾಟವಾಗಿದೆ. ಇನ್ನೂ Bv ತಳಿಯ ರೇಷ್ಮೆ ಗೂಡು ಕನಿಷ್ಠ 485 ರೂ ಮತ್ತು ಗರಿಷ್ಠ 806 ರೂಗಳಿಗೆ ಮಾರಾಟವಾದರೆ, ಸರಾಸರಿ 693 ರೂಗೆ ಮಾರಾಟವಾಗಿದೆ ಎಂದು ಮಾರುಕಟ್ಟೆಯ ಉಪ ನಿರ್ದೇಶಕ ತಿಳಿಸಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications