ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಗೆಲುವು: ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಸ್ಫೋಟಕ ಭವಿಷ್ಯ
Nikhil Kumaraswamy: ಈಗಾಗಲೇ ಚನ್ನಪಟ್ಟಣ ಉಪಚುನಾವಣೆ ಮುಗಿದಿದ್ದು, ಫಲಿತಾಂಶ ಪ್ರಕಟವೊಂದೇ ಬಾಕಿಯಿದೆ. ಇದರ ನಡುವೆಯೇ ಇದೀಗ ಕ್ಷೇತ್ರದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದೆ. ಇನ್ನು ಈ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಗುರೂಜಿವೊಬ್ಬರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ನವೆಂಬರ್ 13ರಂದು ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ನವೆಂಬರ್ 23ಕ್ಕ ಫಲಿತಾಂಶ ಹೊರಬೀಳಲಿದೆ. ಇದಕ್ಕೂ ಮೊದಲೇ "ಎನ್‌ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಯೋಗ ಶುರು ಆಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಲಿದ್ದಾರೆ ಎಂದು ಡಾ. ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಸ್ಫೋಟ ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಗುರೂಜಿ ಅವರು, 2016ರಲ್ಲಿ ಎಚ್.ಡಿ.ದೇವೆಗೌಡ ಅವರು ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಮುಕಾಬಿಂಕಾ ದೇವಿ ಅಮ್ಮನ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸಿದ್ದರು. ಅದರ ಫಲ 2024ಕ್ಕೆ ಲಭಿಸಿದೆ. ಅಂದೇ ಮುಕಾಬಿಂಕಾ ದೇವಿ ನಿಖಿಲ್ ಕುಮಾರಸ್ವಾಮಿಯವರ ಭವಿಷ್ಯ ನುಡಿದಿತ್ತು ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ 2023ರಿಂದಲೇ ರಾಜಯೋಗ ಶುರುವಾಗಿದೆ. ನಿಖಿಲ್ ಕುಮಾರಸ್ವಾಮಿ ಮೇಲೆ ಭಗವತಿಯ ಸಂಪೂರ್ಣ ಆಶೀರ್ವಾದ ಆಗಿದೆ, ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಭವಿಷ್ಯ ನುಡಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಅಮ್ಮನ ಆಶೀರ್ವಾದ, ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನ ಅಮ್ಮನವರು ಮಾಡಿಕೊಟ್ಟಿದ್ದಾರೆ. ಈ ಬಾರಿ ಅಮ್ಮನವರ ಆಶಿರ್ವಾದ ಆಗಿರುವುದರಿಂದ ಗೆಲುವು ಖಚಿತವಾಗಿದೆ ಎಂದರು.
ನಿಖಿಲ್ ಕುಮಾರಸ್ವಾಮಿಯವರು ನಿರೀಕ್ಷೆಗೂ ಮೀರಿ ಗೆಲುವ ಸಾಧಿಸಲಿದ್ದಾರೆ. ಚಂಡಿಕಾಯಾಗದಲ್ಲಿ ಅಷ್ಟೊಂದು ರೀತಿಯಾದ ವಿಶೇಷತೆಗಳು ಇರುತ್ತದೆ. ಯಾರು ಅನುಷ್ಠಾನವನ್ನು ಮಾಡಿ ವಿಶೇಷವಾಗಿ ದೇವಿಗೆ ಪೂಜೆಯನ್ನು ಸಲ್ಲಿಸ್ತಾರೆಯೋ, ಅವರಿಗೆ ಸಂಪೂರ್ಣ ಆಶಿರ್ವಾದ ಸಿಕ್ಕಂತಾಗುತ್ತದೆ.
ಮಹಾಲಕ್ಷ್ಮಿ, ಮಹಾಕಾಳಿ, ಮಹಾ ಸರಸ್ಪತಿಯ ಸ್ವರೂಪಿಣಿ ಆಗಿರುವ ಅಮ್ಮನವರ ಆಶಿರ್ವಾದ ಆಗಿದೆ. ಅವರ ಕುಟುಂಬಕ್ಕೆ ಒಳ್ಳೆಯ ಅನುಗ್ರಹ ಆಗುತ್ತದೆ. ಹಳೆಯ ಎಲ್ಲಾ ನೋವುಗಳನ್ನು ಮರೆಸಿ ಮುಂದಿನ ಜೀವನ ಸುಖಮಯ ಆಗಿರುತ್ತದೆ. ಪ್ರತಿಯೊಂದು ಅಧಿಕಾರ ಸಿಗಬೇಕಾದರೆ, ರಾಜಯೋಗ ಇರಬೇಕು. ಇಲ್ಲದಿದ್ದರೆ, ಅಧಿಕಾರ ಸಿಗುವುದಕ್ಕೆ ಸಾಧ್ಯವಿಲ್ಲ. ಅಮ್ಮನವರ ಆಶಿರ್ವಾದದಿಂದ ಈಗ ನಿಖಿಲ್‌ಗೆ ರಾಜಯೋಗ ಸಿಕ್ಕಿದೆ. ಉನ್ನತ ಅಧಿಕಾರಗಳನ್ನು ಅನುಭವಿಸುವ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಭವಿಷ್ಯ ನುಡಿದರು.
ಈ ಹಿಂದೆ ನಿಖಿಲ್ ಕುಮಾರಸ್ವಾಮಿಗೆ ಎರಡು ಚುನಾವಣೆಯಲ್ಲೂ ನಿಮಗೆ ಹಿನ್ನಡೆಯಾಗುತ್ತದೆ ಅಮ್ಮನವರು ಹೇಳಿದ್ದರು. 2023ರ ನಂತರ ಒಳ್ಳೆಯದಾಗುತ್ತದೆ ಎಂದು ಸೂಚಿಸಿದ್ದರು. ಅದೇ ರೀತಿಯಾಗಿ ಈ ಒಂದು ಯೋಗ ಪ್ರಾರಂಭ ಆಗಿದೆ ಎಂದು ಹೇಳಿದರು. ಇನ್ನು ಈ ಬಾರಿ ಚನ್ನಪಟ್ಟಣ ವಿಧಾನಸಭೆಗೆ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ್ ಸ್ಪರ್ಧೆ ಮಾಡಿದ್ದಾರೆ.












Click it and Unblock the Notifications