ಬೈಎಲೆಕ್ಷನ್‌ ಬಿಸಿ! ಬಾಯಿಗೆ ಸೇರೋ ಮುನ್ನವೇ ಬಾಡೂಟ ಬಂದ್‌

ವೆದರ್‌ ಚೆನ್ನಾಗಿತ್ತು, ಬಾಯಿಗೆ ಬಿಸಿ ಬಿಸಿಯಾಗಿ ಬಾಡು ಬಿದ್ದಿದ್ರೆ ಚೆನ್ನಾಗಿರುತ್ತೆ ಅಂತ ಕನಸು ಕಂಡವರಿಗೆ ಕಣ್ಣೆದುರೇ ರುಚಿಯಾದ ಘಮ್‌ ಎನ್ನುತ್ತಿದ್ದ ಕೋಳಿ ಸಾರು ರೆಡಿಯಾಗಿದೆ. ಆದರೆ ಕೊನೇ ಕ್ಷಣದಲ್ಲಿ ಜನರ ಮೂಗಿಗೆ ಬಡಿದಿದ್ದ ಮಾಂಸದೂಟ, ಬಾಯಿಗೆ ಬರದಂತೆ ತಪ್ಪಿದೆ.

ಹೌದು, ಈ ದಿನದ ಚುಮು ಚುಮು ಚಳಿಯ ವಾತಾವರಣಕ್ಕೆ ಬಾಡು ತಿಂದು ತೇಗೋಣ ಎಂದು ತುದಿಗಾಲಲ್ಲಿ ನಿಂತವರಿಗೆ ಕೊನೇ ಕ್ಷಣದಲ್ಲಿ ಅದನ್ನು ನಿಲ್ಲರಾದ ದೌರ್ಭಾಗ್ಯ ಎದುರಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಇಂತಹ ಪ್ರಸಂಗ ನಡೆದಿದೆ.

Meat Meal Canceled Due To Election Code Of Conduct In Channapatna

ಚನ್ನಪಟ್ಟಣದಲ್ಲಿ ಉಪಚುನಾವಣೆ ದಿನಾಂಕ ನಿನ್ನೆ ಘೋಷಣೆಯಾಗಿದೆ. ಉಪಚುನಾವಣೆಯ ಮೈತ್ರಿ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರು ಇಂದು ಕೂಡ್ಲೂರು ರಸ್ತೆಯಲ್ಲಿರುವ ರೆಸಾರ್ಟ್‌ವೊಂದರಲ್ಲಿ ಸಭೆ ಆಯೋಜಿಸಿದ್ದರು. ಸಭೆಯ ನಂತರ ಅಲ್ಲಿದ್ದವರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.

ಸಭೆಗೆ ನೂರಾರು ಮಂದಿ ಬಂದಿದ್ದರಿಂದ ಅವರಿಗೆಲ್ಲ ರುಚಿಯಾದ ಬಾಡೂಟ ಕೂಡ ಸಿದ್ಧವಾಗಿತ್ತು. ಬಾಡೂಟದ ಘಮಲಿಗೆ ಮನಸೋತಿದ್ದವರು, ಚೆನ್ನಾಗಿ ಬಾರಿಸೋಣ ಎಂದು ರೆಡಿಯಾಗಿದ್ದರು. ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.

Meat Meal Canceled Due To Election Code Of Conduct In Channapatna

ಹಾಗಾಗಿ ಬಾಡೂಟ ಬಾಯಿಗೆ ಬರುವುದು ಮಿಸ್‌ ಆಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಬಾಡೂಟ ಬಂದ್‌ ಮಾಡಿಸಿದ್ದಾರೆ ಎಂದು ವರದಿಯಾಗಿದೆ. ಸಭೆಗೆ ಬಂದವರಿಗೆ ಬಾಡೂಟ ಸಿದ್ಧವಾಗುತ್ತಿದ್ದ ಮಾಹಿತಿ ಮೇರೆಗೆ ಚುನಾವಣಾಧಿಕಾರಿ ಬಿನೋಯ್ ನೇತೃತ್ವದಲ್ಲಿ ಪೊಲೀಸರು ದಿಢೀರ್‌ ಎಂಟ್ರಿ ಕೊಟ್ಟಿದ್ದಾರೆ.

ದಾಳಿ ನಡೆಸಿದ್ದೇ ಸೀದಾ ಬಂದು ಬಾಡೂಟ ತಯಾರಾಗುತ್ತಿದ್ದ ಕಿಚನ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಲ್ಲಿ ಕೋಳಿ ಮಾಂಸದೂಟ ಘಮ್‌ ಎನ್ನುತ್ತಿದ್ದನ್ನು ಕಂಡು ಕೂಡಲೇ ಅಡುಗೆ ಮನೆ ಬಂದ್‌ ಮಾಡಿ, ಎಲ್ಲವನ್ನೂ ವಶಕ್ಕೆ ಪಡೆದು ಹೋಗಿದ್ದಾರೆ ಎನ್ನಲಾಗಿದೆ.

Meat Meal Canceled Due To Election Code Of Conduct In Channapatna

ಈ ವೇಳೆ ಕೆಲವರು ಅಡುಗೆ ಮನೆಗೆ ನುಗ್ಗಿ ಬಾಡೂಟ ಸವಿಯೋಣ ಎಂದು ಪ್ರಯತ್ನಿಸಿದ್ದಾರೆ. ಪೊಲೀಸರು ಅವರನ್ನು ತಡೆದು ಒಂದೂ ತುಂಡು ಸಿಗದಂತೆ ಮಾಡಿದ್ದಾರೆ. ಕೊನೆಗೆ ಬಾಡೂಟವಿಲ್ಲದೆ ಹೊಟ್ಟೆಗೆ ತಣ್ಣೀರ್‌ ಬಟ್ಟೆ ಎನ್ನುತ್ತಾ ನಿರಾಸೆಯಿಂದ ವಾಪಸ್‌ ಆಗಿದ್ದಾರೆ ಎನ್ನಲಾಗಿದೆ.

ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬಾಡೂಟ ಕ್ಯಾನ್ಸಲ್‌ ಆಗಿದೆ ಎಂದು ಅಧಿಕಾರಿಗಳು ಅಲ್ಲಿದ್ದವರನ್ನು ವಾಪಸ್‌ ಕಳಿಸಿದ್ದಾರೆ. ಆದರೆ, ಹೊಟ್ಟೆ ಹಸಿದುಕೊಂಡಿದ್ದೇವೆ. ದಯವಿಟ್ಟು ಒಂದು ತುತ್ತಾದರೂ ಬಾಡೂಟದ ರುಚಿ ಮಾಡಿ ಹೋಗ್ತೀವಿ, ನಮ್‌ ಹೊಟ್ಟೆ ಮೇಲೆ ಹೊಡಿಬೇಡಿ ಎಂದು ಕೆಲವರು ಮನವಿ ಕೂಡ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಇದ್ಯಾವುದಕ್ಕೂ ಜಗ್ಗಿಲ್ಲ. ಕೊನೆಗೆ ಕಾರ್ಯಕರ್ತರು ಹಾಗೂ ಇತರ ನಾಯಕರು ಬಾಡೂಟವಿಲ್ಲದೆ ಸಪ್ಪಗಾಗಿ ವಾಪಸ್‌ ಆದರು ಎನ್ನಲಾಗಿದೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾದ ಕಾರಣ ಚನ್ನಪಟ್ಟಣ ಶಾಸಕ ಸ್ಥಾನ ತೆರವಾಗಿತ್ತು. ಹಾಗಾಗಿ ನಿನ್ನೆ ಚನ್ನಪಟ್ಟಣ ಚುನಾವಣೆ ಸಂಬಂಧ ಭಾರತೀಯ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಚನ್ನಪಟ್ಟಣ ಉಪಚುನಾವಣೆ ನವೆಂಬರ್ 13ರಂದು ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+