Manchanabele Dam: "ಕೃತಿಕಾ" ಆರ್ಭಟಕ್ಕೆ ಅಂತೂ.. ಇಂತೂ.. ತುಂಬಿದ ಡ್ಯಾಂ.!-10,000 ಕ್ಯೂಸೆಕ್ ನೀರು ಬಿಡುಗಡೆ-ಮಾಹಿತಿ
Manchanabele Dam: ಕಳೆದ ಮೂರು ವಾರಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲು ಮಳೆರಾಯ ಅಬ್ಬರಿಸುತ್ತಿರುವ ಹಿನ್ನೆಲೆ ಇಷ್ಟು ದಿನ ಬಿಸಿಲಿನ ಬೇಗೆ ಬೆಂದು ಹೋಗಿದ್ದ ಪ್ರಮುಖ ಜಲಾಶಯಗಳಿಗೆ ಜೀವಕಳೆ ಬಂದಂತಾಗಿದೆ.
ಹಾಗೆಯೇ ಮಾಗಡಿ ತಾಲೂಕಿನಲ್ಲಿರುವ ಜಲಾಶಯವೊಂದು ತುಂಬಿ ಹರಿದಿದ್ದು, ಹೆಚ್ಚಾದ ನೀರನ್ನು ಹೊರಗಡೆ ಬಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಆ ಡ್ಯಾಂ ಯಾವುದು ಹಾಗೂ ಎಷ್ಟು ಕ್ಯೂಸೆಕ್ ನೀರನ್ನು ಹೊರಗಡೆ ಬಿಡಲಾಗಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಗಮನಿಸಿ.

ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಗಳ್ಳಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ನೀರು ಬರುತ್ತಿರುವುದರಿಂದ ಜಲಾಶಯದಿಂದ ಪ್ರತಿದಿನ 10,000 ಕ್ಯೂಸೆಕ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಚನಬೆಲೆ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳ ಆಗಿದೆ. ಇದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ತಲುಪಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರು ಹೊರಡೆ ಬಿಡಲಾಗುತ್ತಿದೆ ಎಂದು ಮಂಚನಬೆಲೆ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.
ಇನ್ನು ಜಲಾಶಯದ ಅಕ್ಕಪಕ್ಕದ ನದಿ ಪಾತ್ರದ ಗ್ರಾಮಗಳ ಜನರು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಬಿಡಬಾರದು ಎಂದು ಸಾರ್ವಜನಿಕರಿಗೆ ಸೂಚನೆ ನೀಡಿದೆ. ಕೆಳದ ಬಾರಿ ಮಂಚನಬೆಲೆ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟ ಪರಿಣಾಮ ಜಲಾಶಯದ ಪಕ್ಕದ ಮುಖ್ಯ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಇದೀಗ ತಾತ್ಕಾಲಿಕ ಸೇತುವೆಯಲ್ಲಿ ಸಾರ್ವಜನಿಕರು ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಕಾವೇರಿ ನೀರಾವರಿ ನಿಗಮದಿಂದ ನೂತನವಾಗಿ ಸೇತುವೆ ನಿರ್ಮಾಣ ಮಾಡುವ ಟೆಂಡರ್ ಪ್ರಕ್ರಿಯೆ ಪೂರ್ಣ ಆಗಿದ್ದು, ಶೀಘ್ರ ಹೊಸ ಸೇತುವೆ ಕಾಮಗಾರಿ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಕಡೆ ಜಲಾಶಯ ತುಂಬಿದ್ದು ರೈತರಿಗೆ ಸಂತಸದ ವಿಚಾರವಾದರೆ, ಮತ್ತೊಂದೆಡೆ ನದಿಪಾತ್ರದ ಜನರಿಗೆ ಇದೀಗ ಆತಂಕ ಶುರುವಾಗಿದೆ.
ಜೋಗ ಜಲಪಾತಕ್ಕೆ ಜೀವಕಳೆ: ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆರಾಯ ಆರ್ಭಟ ಮುಂದುರೆಸಿದ ಹಿನ್ನೆಲೆ ಇಲ್ಲಿನ ವಿಶ್ವಪ್ರಸಿದ್ಧ ತಾಣವಾದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ. ಈ ಹಿನ್ನೆಲೆ ಪ್ರವಾಸಿಗರಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಹಾಗಾದರೆ ಆ ಪ್ರಮುಖ ಮಾಹಿತಿ ಇಲ್ಲಿದೆ ಗಮನಿಸಿ.
ಭಾರೀ ಹಿನ್ನೆಲೆ ಇಷ್ಟು ಬಿಸಿಲಿನ ಬೇಗೆಯಿಂದ ಬೆಂದು ಹೋಗಿದ್ದ ಜೋಗಜಲಪಾತಕ್ಕೆ ಇದೀಗ ಕಳೆ ಬಂದಂತಾಗಿದೆ. ಅದರಲ್ಲೂ ಶರಾವತಿ ಕೊಳ್ಳದ ಪ್ರದೇಶದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಇದರಿಂದ ಲಿಂನಮಕ್ಕಿ ಜಲಾನಯನ ಪ್ರದೇಶದ ಕೆಳದಂಡೆ ಭಾಗದಲ್ಲಿ ಮಳೆ ನೀರು ರಭಸದಿಂದ ಹರಿದುಬರುತ್ತಿದೆ. ಈ ಹಿನ್ನೆಲೆ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದ್ದು, ರಾಜ, ರಾಣಿ, ರೋರರ್ ರಾಕೆಟ್ ಜಲಧಾರೆ ಧುಮ್ಮುಕ್ಕುತ್ತದೆ. ಈ ಮೂಲಕ ಇದು ಪ್ರವಾಸಿಗರನ್ನ ತನ್ನತ್ತ ಕೈಬಿಸಿ ಕರೆಯುತ್ತಿದೆ.
2023ರಲ್ಲಿ ರಾಜ್ಯದಲ್ಲಿ ಮಳೆಯಿಲ್ಲದೆ, ಭರದ ವಾತಾವರಣ ನಿರ್ಮಾಣವಾಗಿ, ಹಲವು ಜಲಮೂಲಗಳು ಬತ್ತಿಹೋಗಿದ್ದವು. ಅಷ್ಟೇ ಅಲ್ಲದೆ ವಿಶ್ವಪ್ರಸಿದ್ದ ಜೋಗ ಜಲಪಾತದ ಸೌಂದರ್ಯದ ಕಳೆಯೂ ಮಾಯವಾಗಿತ್ತು. ಇದೀಗ 2024ರ ಮೇನಲ್ಲಿ ಸುರಿಯುತ್ತಿರುವ ಮಳೆಯಿಂದ ಜೋಗದ ಸೌಂದರ್ಯದ ಕಳೆ ಮರುಕಳಿಸಿದಂತಾಗಿದೆ. ಇನ್ನು ಈ ನೀರನ್ನು ಆಶ್ರಯಿಸಿದ್ದ ಜೀವಸಂಕುಲಗಳು, ಸರೀಸೃಪಗಳು ಹಾಗೂ ಜಲಚರಗಳಲ್ಲೂ ಹೊಸ ಚೈತನ್ಯ ಮೂಡಿದಂತಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.












Click it and Unblock the Notifications