ಸಂಬಂಧಿ ಕೊಂದು ಆತ್ಮಹತ್ಯೆಯ ಕಥೆ ಹೇಳಿದ್ದ ಸೋದರಮಾವ!

ರಾಮನಗರ, ಜನವರಿ 07: ವ್ಯಕ್ತಿಯನ್ನು ಸಂಬಂಧಿಯೇ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ. ಪ್ರಕರಣದ ತನಿಖೆ ಕೈಗೊಂಡ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೋಲೀಸರು ಮೃತಪಟ್ಟ ವ್ಯಕ್ತಿಯ ಸೋದರಮಾವ, ಸ್ನೇಹಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2020ರ ಅಕ್ಟೋಬರ್ 30ರಂದು ಮಹದೇವ್ ಎಂಬುವವರ ಶವ ಕೊಳೆತ ಸ್ಥಿತಿಯಲ್ಲಿ ಮರಳವಾಡಿ ಹೋಬಳಿಯ ಸುವರ್ಣಮುಖಿ ಹೊಳೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವ್ ಸೋದರಮಾವ ಚಿಕ್ಕತಿಮ್ಮಯ್ಯ ಹಾಗೂ ಸ್ನೇಹಿತ ರಮೇಶ್ ಎಂಬುವವರನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನಲೆ : ಕೊಲೆಯಾದ ಮಹದೇವ್ ಮೂಲತಃ ಆನೇಕಲ್ ತಾಲೂಕಿನವರು. ಅರಣ್ಯ ಇಲಾಖೆಯಲ್ಲಿ ವಾಚರ್ ಕೆಲಸ ಮಾಡುತ್ತಿದ್ದರು. ಹಾರೋಹಳ್ಳಿಯಲ್ಲಿ ಸೋದರಮಾವ ಚಿಕ್ಕತಿಮ್ಮಯ್ಯ ಮನೆಯಲ್ಲಿ ವಾಸವಾಗಿದ್ದ. ಚಿಕ್ಕತಿಮ್ಮಯ್ಯನ ಪತ್ನಿ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದ.

Man Murder Case Police Arrested Reative

ಮಹದೇವ್ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಚಾರ ಮಹದೇವ್‌ ಸ್ನೇಹಿತ ಫಾರೆಸ್ಟ್ ವಾಚರ್ ರಮೇಶ್ ತಿಳಿದಿತ್ತು. ಮಹದೇವ್‌ನನ್ನು ರಮೇಶ್ ಮೂಲಕ ಕರೆಸಿಕೊಂಡ ಚಿಕ್ಕತಿಮ್ಮಯ್ಯ ತೊಗರಿ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಬೆರೆಸಿದ ಮದ್ಯ ಕುಡಿಸಿದ್ದಾರೆ.

ಮದ್ಯ ಕಡಿದು ಪ್ರಜ್ಞೆ ತಪ್ಪಿದ ಮಹದೇವ್‌ನನ್ನು ಸೇತುವೆ ಮೇಲಿನಿಂದ ಸುವರ್ಣಮುಖಿ ನದಿಗೆ ತಳ್ಳಿ ಕೊಲೆ ಮಾಡಿದ್ದರು. ಆದರೆ, ಮಹದೇವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದರು. ಆತ್ಮಹತ್ಯೆ ಎಂದು ಮುಚ್ಚಿಹೋಗಿದ್ದ ಪ್ರಕರಣವನ್ನು ಎರಡು ತಿಂಗಳ ನಂತರ ಪೊಲೀಸರು ತಾರ್ಕಿಕ ಅಂತ್ಯಕ್ಕೆ ತಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+