ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದ ಮನೆಯಲ್ಲಿ ಬಂಧಿಯಾಗಿದ್ದ ಚಿರತೆ ರಕ್ಷಣೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 14: ಆಹಾರ ಅರಸಿ ನಾಡಿಗೆ ಬಂದು ದನದ ಕೊಟ್ಟಿಗೆಯಲ್ಲಿ ಬಂಧಿಯಾಗಿದ್ದ ಚಿರತೆಯನ್ನು ನಿನ್ನೆ ತಡರಾತ್ರಿ ಅರವಳಿಕೆ ಚುಚುಮದ್ದು ನೀಡಿ, ರಕ್ಷಣೆ ಮಾಡಿರುವ ಘಟನೆ ರಾಮನಗರ ತಾಲ್ಲೂಕಿನ ಕವಣಾಪುರ ಗ್ರಾಮದಲ್ಲಿ ನಡೆದಿದೆ.

ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ್ದ ಚಿರತೆಯು ಚಿಕ್ಕರಾಜು ಎಂಬುವವರ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆ ತಿನ್ನಲು ಮನೆಗೆ ನುಗ್ಗಿದೆ. ಚಿರತೆ ನುಗ್ಗಿದ್ದನ್ನು ಗಮನಿಸಿದ ಮನೆಯವರು ಬಾಗಿಲು ಬಂದ್ ಮಾಡಿ ಚಿರತೆಯನ್ನು ಮನೆಯಲ್ಲೇ ಕೂಡಿಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.

Leopard Protection In Ramanagara Home

ತಡರಾತ್ರಿ ಬನ್ನೇರುಘಟ್ಟ ದಿಂದ ಬಂದು ಅರವಳಿಕೆ ತಜ್ಞರು ಚಿರತೆಗೆ ಅರವಳಿಕೆ ಇಂಜೆಕ್ಷನ್ ಕೊಟ್ಟು, ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.‌ ಸುಮಾರು‌ ಎರಡು ವರ್ಷದ ಗಂಡು ಚಿರತೆ ಎಂದು ವೈದ್ಯರು ತಿಳಿಸಿದರು. ಇನ್ನು ಸೆರೆ ಹಿಡಿದ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಅರಣ್ಯ ವಲಯಕ್ಕೆ ರವಾನಿಸಿದ್ದಾಗಿ ರಾಮನಗರ ಅರಣ್ಯಾಧಿಕಾರಿಗಳು ತಿಳಿಸಿದರು.
English summary
Leopard Protection In Kavanapura Village, Ramanagara Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X