ತಪ್ಪು ಮಾಡಿಲ್ಲ ಎಂದ ಮೇಲೆ ಹೆದರೋ ಅಗತ್ಯ ಇಲ್ಲ; ಅನಿತಾ ಕುಮಾರಸ್ವಾಮಿ

Recommended Video

      Phone Tapping : ಫೋನ್ ಟ್ಯಾಪಿಂಗ್ ಪ್ರಕರಣದ ಹಿನ್ನೆಲೆ ಎಚ್ ಡಿ ಕೆ ಬಗ್ಗೆ ಪತ್ನಿ ಅನಿತಾ ಕುಮಾರಸ್ವಾಮಿ ಹೇಳಿದ್ದೇನು?

      ರಾಮನಗರ, ಆಗಸ್ಟ್ 19: "ಫೋನ್ ಕದ್ದಾಲಿಕೆ ವಿಚಾರದಲ್ಲಿ ಕುಮಾರಸ್ವಾಮಿಯವರ ಹೆಸರು ತಳಕು ಹಾಕಿಕೊಂಡಿದೆ. ಆದರೆ ಇಂಥ ಸುಳ್ಳು ಆಪಾದನೆಗಳಿಗೆ ಅವರು ಹೆದರುವ ಅವಶ್ಯಕತೆ ಇಲ್ಲ" ಎಂದು ರಾಮನಗರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

      ಫೋನ್ ಕದ್ದಾಲಿಕೆಯ ಕುರಿತು ಸಿಬಿಐ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಕುಮಾರಸ್ವಾಮಿಯವರು ಹೋರಾಟದ ಮೂಲಕ ರಾಜಕಾರಣಕ್ಕೆ ಬಂದಿರುವುದು. ಯಾವುದೇ ರೀತಿಯ ತಪ್ಪು ಮಾಡಿಲ್ಲ. ಸಿಬಿಐ ತನಿಖೆ ಪಾರದರ್ಶಕವಾಗಿ ನಡೆಯಲಿ. ಇದಕ್ಕೆಲ್ಲ ಕುಮಾರಸ್ವಾಮಿಯವರು ಹೆದರುವಂತಹವರಲ್ಲ. ತಪ್ಪು ಮಾಡಿಲ್ಲ ಎಂದ ಮೇಲೆ ಹೆದರುವ ಅಗತ್ಯವೂ ಇಲ್ಲ" ಎಂದು ಹೇಳಿದ್ದಾರೆ.

      Kumaraswamy Wont Afraid Of This Said Anita Kumaraswamy In Ramanagar

      "ಬಿಜೆಪಿಯವರಿಂದ ವಿರೋಧ ಪಕ್ಷದವರನ್ನು ಹೆದರಿಸಿಡುವ ವಾತಾವರಣ ಸೃಷ್ಟಿಯಾಗಿದೆ. ಎಚ್ಡಿಕೆಯವರ ವ್ಯಕ್ತಿತ್ವಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ" ಎಂದಿದ್ದಾರೆ.

      "ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನ ತೊಂದರೆಯಲ್ಲಿದ್ದಾರೆ. ಇನ್ನೂ ಸ್ಪಷ್ಟವಾಗಿ ಅನುದಾನ ಘೋಷಣೆ ಮಾಡಿಲ್ಲ. ಸಿಎಂ ಕೂಡಾ ಹೇಳ್ತಿಲ್ಲ. ಪ್ರಧಾನಿ ಮೋದಿಯವರೇ ಹೇಳಬಹುದಿತ್ತಲ್ವಾ? ಕೇಂದ್ರದಿಂದ ಪರಿಹಾರದ ಬಗ್ಗೆ ಮಾತುಗಳೇ ಬರ್ತಿಲ್ಲ. ಇದು ನಮ್ಮ ರಾಜ್ಯದೆಡೆಗೆ ನಿರ್ಲಕ್ಷ್ಯ ತೋರುತ್ತಿರುವುದು ಕಾಣುತ್ತಿದೆ" ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+