• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾದಕ ವಸ್ತು ಜಾಲದಲ್ಲಿರುವ ಪ್ರಭಾವಿಗಳನ್ನು ಬಂಧಿಸಿ: ಕನ್ನಡ ವೇದಿಕೆ

By ರಾಮನಗರ ಪ್ರತಿನಿಧಿ
|

ರಾಮನಗರ, ಆಗಸ್ಟ್ 31: ರಾಜ್ಯವನ್ನೇ ಬೆಚ್ಚಿಬಿಳಿಸಿರುವ ಡ್ರಗ್ಸ್ ದಂಧೆಯಲ್ಲಿ ಇರುವ ಪ್ರಭಾವಿಗಳು ಸೇರಿದಂತೆ , ಡ್ರಗ್ಸ್ ಕೊಂಡುಕೊಳ್ಳುತ್ತಿದ್ದವರನ್ನು ಬಂಧಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಾಮನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

   ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

   ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ನಂತರ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

   ವಿಡಿಯೋ: ಡ್ರಗ್ಸ್ ವಿಚಾರದಲ್ಲಿ ಚಿರಂಜೀವಿ ಹೆಸರು ಕೇಳಿ ಬಂದಿದ್ದು ಬೇಸರ ತಂದಿದೆ: ನಟ ದರ್ಶನ್

   ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದ ಚಿತ್ರರಂಗದ ಕೆಲ ನಟ- ನಟಿಯರು ವಿದೇಶದಿಂದ ಆಮದಾಗುವ ಡ್ರಗ್ಸ್ ಅನ್ನು ಲಕ್ಷಾಂತರ ರೂ.ಗಳಿಗೆ ಕೊಂಡು ತಾವು ಸೇವಿಸುವುದಲ್ಲದೆ ಇತರರನ್ನು ಸೇವಿಸುವಂತೆ ಪ್ರಚೋದಿಸಿದ್ದು ಬೆಳಕಿಗೆ ಬಂದಿರುವುದು ದುರದೃಷ್ಟಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

   ಹಲವು ಪಾರ್ಟಿಗಳಲ್ಲಿ ಇಂಥಹ ಡ್ರಗ್ಸ್ ಸೇವನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಅಲ್ಲದೇ ಪ್ರತಿಷ್ಠಿತ ಕಾಲೇಜುಗಳಲ್ಲಿ ಮಾದಕ ವಸ್ತು ಜಾಲಗಳು ಸಕ್ರಿಯವಾಗಿದೆ. ಇದರಿಂದ ಯುವ ಸಮೂಹದ ಮೇಲೆ ಭಾರೀ ಪರಿಣಾಮ ಬೀರಲಿದೆ ಹಾಗಾಗಿ ಸಿಸಿಬಿ ಪೊಲೀಸರು ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿ ಇದಕ್ಕೆ ಸಹಕರಿಸಿದವರನ್ನು ಹೆಡೆಮುರಿ ಕಟ್ಟಬೇಕೆಂದು ಆಗ್ರಹಿಸಿದರು.

   English summary
   Kasturi Kannada Vedike activists appealed to the District Collector of Ramanagara to demand the government to arrest those who buy drugs, including those who are in the drug chain.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X