ತಮಿಳುನಾಡು ಪಾದರಕ್ಷೆ ಜಾಹೀರಾತಿನಲ್ಲಿ ಕರುನಾಡ ಬಾವುಟದ ಬಣ್ಣ ಬಳಕೆ: ಹೋರಾಟಗಾರ ಆಕ್ರೋಶ

ರಾಮನಗರ, ನವೆಂಬರ್‌ 02: ಕರ್ನಾಟಕದ ನಾಡ ಧ್ವಜ ಹೋಲುವಂತಹ ರೀತಿಯಲ್ಲಿ ತಮಿಳುನಾಡು ಮೂಲದ ಪಾದರಕ್ಷೆ ತಯಾರಿಕಾ ಕಂಪನಿ ತನ್ನ ಉತ್ಪನ್ನದ ಜಾಹೀರಾತು ಫಲಕ ಅಳವಡಿಸಿರುವುದು ಹೋರಾಟಗಾರು ತೀವ್ರವಾಗಿ ಖಂಡಿಸಿದ್ದಾರೆ.

ಕನ್ನಡಿಗರ ಜೀವ ನದಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಿರಂತರವಾಗಿ ತಮಿಳುನಾಡು ಖ್ಯಾತೆ ತೆಗೆಯುತ್ತಿದೆ. ಇದೀಗ ತಮಿಳುನಾಡು ಮೂಲದ ಪಾದರಕ್ಷೆ ತಯಾರಿಕಾ ಕಂಪನಿ ತನ್ನ ಕಂಪನಿಯ ಉತ್ಪನ್ನಗಳ ಜಾಹೀರಾತು ಬೋರ್ಡ್‌ನಲ್ಲಿ ಕನ್ನಡದ ಬಾವುಟ ಹಳದಿ ಮತ್ತಿ ಕೆಂಪು ಬಣ್ಣ ಬಳಸುವ ಮೂಲಕ‌ ಬಾವುಟದ ಪಾವಿತ್ರ್ಯತೆ ಕಡೆಗಣಿಸಿದೆ.

Karnataka Flag Color In Tamil Nadu Footwear Advertisement

ಕನ್ನಡ ರಾಜ್ಯೋತ್ಸವದ ದಿನದಂದೇ ಕಾಲಿಗೆ ಹಾಕುವ ಚಪ್ಪಲಿಗಳ ಜಾಹೀರಾತಿನ ಬೋರ್ಡ್‌ನಲ್ಲಿ ನಮ್ಮ ನಾಡಿನ ಕನ್ನಡ ಬಾವುಟದ ಬಣ್ಣವನ್ನು ಬಳಸು ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ತಮಿಳುನಾಡು ಮೂಲದ ಕಂಪನಿ ಕೆಣಕುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬೈರಾಪಟ್ಟಣ ಗ್ರಾಮದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದ ರೈತನ ಜಮೀನಿನಲ್ಲಿ ವಾಕರ್ ಶೂ ಮತ್ತು ಚಪ್ಪಲಿ ತಯಾರಿಕಾ ಸಂಸ್ಥೆ ವತಿಯಿಂದ ಹಾಕಲಾಗಿದ್ದು, ಚಪ್ಪಲಿ ಮತ್ತು ಶೂ ಗಳ ಜಾಹೀರಾರು ನಾಮಫಲಕದಲ್ಲಿ ಕನ್ನಡ ಬಾವುಟದ ಬಣ್ಣವನ್ನು ಬಳಕೆ ಮಾಡಿರುವುದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪತ್ರಿಭಟನೆ ನಡೆಸಿದರು.

Karnataka Flag Color In Tamil Nadu Footwear Advertisement

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳು ಜಾಹೀರಾತು ಫಲಕ ಹಾಕಿರುವ ಸಂಸ್ಥೆಯ ವಿರುದ್ಧ ಪ್ರತಿಭಟನೆ ಮಾಡಿ ನಾಮಫಲಕವನ್ನು ಹರಿದು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ಬೇವೂರು ಯೋಗೀಶ್‍ಗೌಡ ತಮಿಳುನಾಡಿನ ಚಪ್ಪಲಿ ಮಾರಾಟ ಸಂಸ್ಥೆಯಾಗಿರುವ ವಾಕರೊ ಕಂಪನಿಯು ರಾಜ್ಯೋತ್ಸವ ದಿನವೇ ರಾಜ್ಯದಲ್ಲಿನ ಹಲವಾರು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತನ್ನ ಸಂಸ್ಥೆಯ ಜಾಹೀರಾತು ನಾಮಫಲಕವನ್ನು ಹಾಕಿದ್ದು ಈ ಜಾಹಿರಾತಿನಲ್ಲಿ ಕನ್ನಡ ಬಾವುಟದ ಬಣ್ಣವನ್ನು ಬಳಕೆ ಮಾಡಿದೆ. ಇಂದು ರಾಜ್ಯೋತ್ಸದ ಸಂಭ್ರಮಾಚರಣೆ ಕಪ್ಪು ಚುಕ್ಕೆಯಾಗಿದೆ. ಈ ಬಗ್ಗೆ ಸರ್ಕಾರ ಮೌನವಾಗಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಜಗದೀಶ್ ಮಾತನಾಡಿ, "ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ವಾಕರ್ ಶೂ ಮತ್ತು ಚಪ್ಪಲಿ ಸಂಸ್ಥೆಯು ತನ್ನ ಜಾಹೀರಾತು ಫಲಕದಲ್ಲಿ ನಾಡಿನ ಬಾವುಟದ ಬಣ್ಣವನ್ನು ಬಳಕೆ ಮಾಡಿರುವುದು ಖಂಡಿನೀಯವಾಗಿದೆ.

ನಾಡಿನ ಭಾವುಟಕ್ಕೆ ತನ್ನದೇ ಆದ ಇತಿಹಾಸ ಇದ್ದು ಬಾವುಟದಲ್ಲಿರುವ ಹಳದಿ ಬಣ್ಣ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಕೆಂಪು ಬಣ್ಣವು ನಾಡಿನ ಉಳಿವಿಗೆ ತ್ಯಾಗ ಬಲಿದಾನ ಮಾಡಿರುವ ಹೋರಾಟಗಾರರ ರಕ್ತದ ಪ್ರತೀಕವಾಗಿದೆ. ಇಂಹ ಬಾವುಟದ ಬಣ್ಣವನ್ನು ಬಳಸಿ ಚಪ್ಪಲಿ ಹಾಕಿ ಜಾಹೀರಾತು ಮಾಡಿರುವ ಸಂಸ್ಥೆ ಮತ್ತು ಈ ಜಾಹೀರಾರು ಸಿದ್ಧ ಮಾಡಿರುವ ಹ್ಯಾಡ್ ಕಂಪನಿಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು" ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷರಾದ ರಾಜು ಮಾತನಾಡಿ, "ರಾಜ್ಯ ಸರ್ಕಾರಗಳು ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುವಂತೆ ಹೊರ ರಾಜ್ಯದಲ್ಲಿನ ಉತ್ಪನ್ನಗಳ ಕಂಪನಿಗಳು ಸಹ ಕನ್ನಡ ಭಾಷೆಯನ್ನು ತುಳಿಯುವ ಕೆಲಸ ಮಾಡುತ್ತಿದ್ದು, ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಕಾಲಿಗೆ ಹಾಕುವ ಚಪ್ಪಲಿ ಮಾರಾಟ ಕಂಪನಿಯೊಂದು ನಮ್ಮ ನಾಡಿನ ಬಾವುಟದ ಬಣ್ಣದ ಬಳಕೆ ಮಾಡಿ ಜಾಹೀರಾತು ಮಾಡಿ ರಾಜ್ಯಾದ್ಯಂತ ಹಾಕಿ ಅವಮಾನ ಮಾಡುತ್ತಿದ್ದರೂ ಈವರೆಗೆ ಸರ್ಕಾರದ ಗಮನಕ್ಕೆ ಇದು ಬಂದಿಲ್ಲ ಎಂದರೆ ಇದು ಸರ್ಕಾರದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ" ಎಂದು ಕಿಡಿಕಾರಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶಿವು ಮಾತನಾಡಿ, "ತಮಿಳುನಾಡು ರಾಜ್ಯದಲ್ಲಿ ಒಂದೊಂದೇ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದ್ದರೂ ಸಹ, ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ. ಕಾವೇರಿ ನೀರಿನ ವಿಚಾರದಲ್ಲಿ ಖ್ಯಾತೆ ತೆಗೆದಾಗಲೂ ಸಹ ನಮ್ಮ ಸರ್ಕಾರ ತಮಿಳುನಾಡಿನ ಪರವಾಗೆ ನಿಲ್ಲುತ್ತದೆ. ಇಂದು ರಾಜ್ಯೋತ್ಸವದ ದಿನವೇ ತಮಿಳುನಾಡಿನ ಕಂಪನಿ ಕನ್ನಡ ಬಾವುಟ ಬಣ್ಣ ಬಳಸಿ ಚಪ್ಪಲಿಯ ಜಾಹೀರಾತು ಹಾಕಿ ಉದ್ಧಟತನ ಮೆರೆದಿದೆ. ಮಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಮಳೂರು ಗ್ರಾಮ ಪಂಚಾಯ್ತಿಯ ಪಿಡಿಒ ಮತ್ತು ಅಧಿಕಾರಿಗಳು ಜಾಹೀರಾತನ್ನು ತೆರವು ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಸಂಜಯ್ ಮೋಹನ್, ಮನೋಜ್, ದಿನೇಶ್, ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+