ಕಾಂಗ್ರೆಸ್ ಪ್ರಣಾಳಿಕೆಯಿಂದ ಪ್ರತಿ ಮನೆಯಲ್ಲಿ ಅತ್ತೆ-ಸೊಸೆ ಜಗಳ; ಸಿಎಂ ಇಬ್ರಾಹಿಂ ವ್ಯಂಗ್ಯ

2023ರ ಕರ್ನಾಟಕ ವಿಧಾನಸಭಾ ಚುನಾವಣೆ ಒಂದು ವಾರ ಮಾತ್ರ ಬಾಕಿ ಇರುವಾಗ ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ತೊಡಗಿವೆ. ಇದೇ ವೇಳೆ ಮತದಾರರ ಮನ ಗೆಲ್ಲಲು ಎಲ್ಲ ಮೂರು ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರತಿ ಮನೆಯ ಯಜಮಾನಿಗೆ 2000 ರೂ. ಹಣ ನೀಡುವುದಾಗಿ ಭರವಸೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿ(ಎಸ್) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರತಿ ಮನೆಯಲ್ಲಿ ಅತ್ತೆ-ಸೊಸೆ ಜಗಳವಾಡುವ ಕೆಲಸ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Karnataka Election 2023: JD(S) President CM Ibrahim Reaction On Congress Manifesto

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶೇರು ಸರ್ಕಲ್ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿದರು. "2013ರಿಂದ 2018ರವರೆಗೆ ಅಧಿಕಾರದಲ್ಲಿದ್ದಾಗ ಬಜರಂಗದಳ ನೆನಪಾಗಲಿಲ್ಲವಾ?, ಸರ್ವಜನಾಂಗದ ಶಾಂತಿಯ ತೋಟ ಆಗಬೇಕೆಂದರೆ ಜೆಡಿಎಸ್‌ನಿಂದ ಮಾತ್ರ ಸಾಧ್ಯ," ಎಂದರು.

"ಜೆಡಿಎಸ್ ಪ್ರಣಾಳಿಕೆ ಅಂಶಗಳನ್ನು ಕಾಂಗ್ರೆಸ್ ಕಾಪಿ ಮಾಡಿದ್ದು, ಅವರು ನಮ್ಮನ್ನೇ ಅನುಕರಣೆ ಮಾಡಬೇಕು. ಅದನ್ನು ಬಿಟ್ರೆ ಅವರಿಗೆ ಹೇಳೋಕೆ ಏನಿದೆ?, ರೈತರಿಗೆ ಎಕರೆಗೆ 10 ಸಾವಿರ ರೂ. ಕೊಡುವುದಾಗಿ ನಾವು ಹೇಳಿದ್ದೇವೆ. ಒಂದು ಮನೆಗೆ 2 ಸಾವಿರ ರೂ. ಕೊಡ್ತೀವಿ ಅಂತ ಹೇಳಿ ಅತ್ತೆ-ಸೊಸೆಗೆ ಜಗಳ ತಂದಿಡ್ತಿದ್ದಾರೆ. ಅತ್ತೆಗೆ ಕೊಡ್ತಾರೋ, ಸೊಸೆಗೆ ಕೊಡ್ತಾರೋ ಗೊತ್ತಿಲ್ಲವೆಂದರು. ಈಗ ನಾವು 65 ವರ್ಷ ವಯಸ್ಸಾದ ಮೇಲೆ 5 ಸಾವಿರ ಕೊಡ್ತೀವಿ," ಎಂದು ಹೇಳಿದರು.

Karnataka Election 2023: JD(S) President CM Ibrahim Reaction On Congress Manifesto

ಜೆಡಿಎಸ್‍ಗೆ ಮತ ಹಾಕಿದರೆ, ಅದು ಕಾಂಗ್ರೆಸ್‌ಗೆ ಮತ ಹಾಕಿದ ಹಾಗೆ ಎಂಬ ನರೇಂದ್ರ ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, "ಬಿಜೆಪಿ-ಕಾಂಗ್ರೆಸ್ ಇಬ್ಬರೂ ದಾಯಾದಿಗಳು. ರಾಜ್ಯದ ಮತದಾರರಿಗೆ ಎಲ್ಲವೂ ಗೊತ್ತಾಗುತ್ತದೆ. ನಾವು ಬಿಜೆಪಿ-ಕಾಂಗ್ರೆಸ್ಸೂ ಅಲ್ಲ. ನಾವು ಕನ್ನಡ ನಾಡಿನ ಮಕ್ಕಳು. ಕನ್ನಡಿಗರ ಸ್ವಾಭಿಮಾನ ಉಳಿಯಬೇಕು," ಎಂದು ಗುಡುಗಿದರು.

"ಚನ್ನಪಟ್ಟಣಕ್ಕೆ ನೀರು ಕೊಟ್ಟಿದ್ದು ಯಾರು?, ಬೆಂಗಳೂರಿಗೆ ಕಾವೇರಿ ನೀರು ಕೊಟ್ಟಿದ್ದು ಯಾರು?, 92 ವರ್ಷ ವಯಸ್ಸಾದರೂ ದೇವೇಗೌಡರು ರಾಜ್ಯದ ಜನತೆಗೆ ಇಂದಿಗೂ ಹೋರಾಡುತ್ತಿದ್ದಾರೆ. ಚನ್ನಪಟ್ಟಣ ಕುಮಾರಸ್ವಾಮಿ ಕ್ಷೇತ್ರ. ಚನ್ನಪಟ್ಟಣ ಮತ್ತೊಮ್ಮೆ ಕರ್ನಾಟಕದ ಕಿರೀಟ ಆಗಬೇಕು. ದೇಶದ ಭೂಪಟದಲ್ಲಿ ಚನ್ನಪಟ್ಟಣ ರಾರಾಜಿಸಬೇಕು," ಎಂದು ಸಿಎಂ ಇಬ್ರಾಹಿಂ ಹೇಳಿದರು.

Karnataka Election 2023: JD(S) President CM Ibrahim Reaction On Congress Manifesto

"ಸಿ.ಪಿ. ಯೋಗೇಶ್ವರ್ ನೀನು ಯಾವ ಪಾರ್ಟಿಯಲ್ಲಾದರೂ ಇರು, ಆದರೆ ದೇವೇಗೌಡರಿಗೆ ಗೌರವ ಕೊಡುವುದನ್ನು ಕಲಿ. ಮೋದಿ ರೀತಿ ನಾವು ರೋಡ್ ಶೋ ಮಾಡಲು ಸಾಧ್ಯವಿಲ್ಲ. ಹಳ್ಳಿ ಹಳ್ಳಿಯಲ್ಲೂ ನಾನು ಕುಮಾರಸ್ವಾಮಿ ಸುತ್ತಾಡಿದ್ದೇವೆ. ಮುಸಲ್ಮಾನರು ಕಾಂಗ್ರೆಸ್‌ಗೆ ಮತ ಹಾಕಬೇಡಿ," ಎಂದು ಸಿಎಂ ಇಬ್ರಾಹಿಂ ಮನವಿ ಮಾಡಿದರು.

ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯನ್ನು ಬೆಂಬಲಿಸಿದರೆ ಅವರು ಮುಸ್ಲಿಂ ಪರ ನಿಲ್ಲುತ್ತಾರೆ. ಮುಸ್ಲಿಮರಿಗೆ ಶೇ.4 ಮೀಸಲಾತಿ ಕೊಟ್ಟಿದ್ದು, ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಬಗ್ಗೆ ಹರಿಸಿದ್ದು ಎಚ್.ಡಿ. ದೇವೇಗೌಡರು. ಮೀಸಲಾತಿ, ಹಿಜಾಬ್, ಹಲಾಲ್ ನಿಷೇಧ ಹೇರುವುದನ್ನು ವಿರೋಧಿಸಿದ್ದು ಎಚ್.ಡಿ. ಕುಮಾರಸ್ವಾಮಿ ಎಂದರು.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+