ಪತ್ನಿ-ಮಗುವಿನೊಂದಿಗೆ ರೇಷ್ಮೆ ವ್ಯಾಪಾರಿ ಆತ್ಮಹತ್ಯೆ

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಫೆಬ್ರವರಿ 13: ಸಾಲಗಾರರ ಕಾಟದಿಂದ ಬೇಸತ್ತು ವ್ಯಕ್ತಿಯೊಬ್ಬ ಹೆಂಡತಿ ಮಗನೊಂದಿಗೆ ನೇಣಿಗೆ ಶರಣಾದ ಘಟನೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಫೆ.13 ರ ಸಂಜೆ ನಡೆದಿದೆ.

ರೇಷ್ಮೆಗೂಡು ವ್ಯಾಪಾರ ಮಾಡುತ್ತಿದ್ದ ಲಕ್ಷ್ಮೀಪುರ ಗ್ರಾಮದ ನಿವಾಸಿ ಸೋಮಶೇಖರ್ (36), ಪತ್ನಿ ಸುಧಾ(27), ಮಗ ಪ್ರೀತಮ್ (01) ನೇಣಿಗೆ ಶರಣಾದ ದುರ್ದೈವಿಗಳು. ಮಗಳು ಮೂರು ವರ್ಷದ ಪ್ರೇರಣ ಶಾಲೆಗೆ ಹೋಗಿದ್ದರಿಂದ ಸಾವಿನ ಕುಣಿಕೆಯಿಂದ ಪಾರಾಗಿದ್ದಾಳೆ!

ಮೃತ ಸೋಮಶೇಖರ್ ರೇಷ್ಮೆಗೂಡಿನ ವ್ಯಾಪಾರ ಮಾಡುತ್ತಿದ್ದು, ವ್ಯಾಪಾರದಲ್ಲಿ ನಷ್ಟ ಹೊಂದಿದ್ದರಿಂದ ಲಕ್ಷಾಂತರ ರೂ. ಸಾಲವಾಗಿತ್ತು. ಈ ನಡುವೆ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದೇ ವಿಚಾರಕ್ಕೆ ಮನೆಯಲ್ಲಿಯೂ ಜಗಳ ನಡೆಯುತ್ತಿತ್ತು.

Kanakapur: 3 members of a family commit suicide

ಸೋಮವಾರವೂ ಅದು ಪುನರಾವರ್ತನೆಯಾಗಿದ್ದು, ಸೋಮಶೇಖರ್ ಸ್ನಾನಗೃಹದಲ್ಲಿ ನೇಣಿಗೆ ಶರಣಾಗಿದ್ದರೆ, ಪತ್ನಿ ಸುಧಾ ಮತ್ತು ಪ್ರೀತಂ ಮನೆಯ ಹಾಲ್ ನಲ್ಲಿ ನೇಣಿಗೆ ಶರಣಾಗಿದ್ದಾರೆ!

ಮಗಳು ಪ್ರೇರಣ ಸೆಂಟರೀಟಾ ಶಾಲೆಗೆ ಹೋಗುತ್ತಿದ್ದು, ಆಕೆ ಸಂಜೆ ಮನೆಗೆ ಬಂದಾಗ ಬೀಗ ಹಾಕಿರುವುದನ್ನು ಗಮನಿಸಿ ಕಿಟಕಿಯಿಂದ ಇಣುಕಿ ನೋಡಿದಾಗ ತಾಯಿ ಸುಧಾ ಮತ್ತು ಸಹೋದರ ಪ್ರೀತಮ್ ನೇತಾಡುತ್ತಿರುವುದನ್ನು ನೋಡಿ, ಹೌಹಾರಿ ಅಜ್ಜಿಗೆ ವಿಷಯ ತಿಳಿಸಿದ್ದಾಳೆ.

ನಂತರ ಅಕ್ಕಪಕ್ಕದವರು ಬಂದು ಬಾಗಿಲು ಒಡೆದು ಒಳನುಗ್ಗಿದಾಗ ತಾಯಿ ಮಗು ಮನೆಯ ಹಾಲ್‍ನಲ್ಲಿ, ಸೋಮಶೇಖರ್ ಸ್ನಾನಗೃಹದಲ್ಲಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.

ಘಟನಾ ಸ್ಥಳಕ್ಕೆ ಪೊಲಿಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man along with his wife and son commits suicide due to financial burden in Kanakapura, in Ramanagar. The incident took place on Feb 12th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ