ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಲೈವ್ ಮಾನಿಟರಿಂಗ್: ರಾಜ್ಯದಲ್ಲೇ ಮೊದಲು
ರಾಮನಗರ, ಆಗಸ್ಟ್ 27: ರಾಜ್ಯದಲ್ಲೇ ಮೊದಲ ಇಂಡಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ರಾಮನಗರ ಜಿಲ್ಲೆಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರಂಭಗೊಳ್ಳಲಿದೆ.
ಈ ಪ್ರದೇಶದಲ್ಲಿ ರಸ್ತೆಗಳು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಜತೆಗೆ ಲೈವ್ ಮಾನಿಟರಿಂಗ್ ವ್ಯವಸ್ಥೆ ಮಾಡಲಾಗಿದೆ. ಸೇಫ್ ಸಿಟಿ ಯೋಜನೆಯಡಿ ಇದನ್ನು ನಿರ್ಮಿಸಲಾಗಿದೆ.ಈ ಠಾಣೆಗೆ ಕಮಿಷನರ್ ಕಚೇರಿಯಲ್ಲಿರುವ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸ್ವಕ್ಷೇತ್ರ ಕುಪ್ಪಂನಲ್ಲಿ ಮಾತ್ರ ಜಾರಿಯಲ್ಲಿರುವ ಈ ಯೋಜನೆ ಇದೀಗ ಕರ್ನಾಟಕದಲ್ಲೂ ಆರಂಭವಾಗಿದೆ. ಶೀಘ್ರದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಉದ್ಘಾಟನೆ ಮಾಡಲಿದ್ದಾರೆ. ಬ್ಯಾಂಕ್ ಗಳ ಹೊರ ಆವರಣ, ಮಹಿಳೆಯರ ಪಿಜಿಗಳು , ಕಾಲೇಜು ಆವರಣದ ಚಲನವಲನಗಳ ಮೇಲೆ ಕ್ಯಾಮರಾಗಳು ಕಣ್ಣಿಡಲಿವೆ.

ಡ್ರಗ್ಸ್ ಸೇವನೆ, ಮಾರಾಟ, ಮಹಿಳೆಯರ ಸುರಕ್ಷತೆ, ಸರಗಳ್ಳತನದಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. 300 ಮೀಟರ್‌ವರೆಗೆ ಜೂಮ್ ಮಾಡಿ ನೋಡುವ ಈ ಕ್ಯಾಮರಾಗಳು ರಾತ್ರಿಯ ಮಬ್ಬುಗತ್ತಲಿನಲ್ಲೂ, ಎಲ್ಲವನ್ನೂ ಚಿತ್ರೀಕರಿಸಲಿದೆ. ಪೊಲೀಸ್ ಠಾಣೆ ವ್ಯಾಪ್ತಿಯ 47ಜಂಕ್ಷನ್ ನಲ್ಲಿ 195 ಹೈ ರೆಸಲ್ಯೂಷನ್ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 32 ಜಂಕ್ಷನ್‌ಗಳಲ್ಲಿ ಪೂರ್ಣಗೊಂಡಿದೆ.












Click it and Unblock the Notifications