ನನ್ನ ಆಸ್ತಿ ಯೋಗೇಶ್ವರ್‌ ಗೆ ಉಡುಗೊರೆ ನೀಡುವೆ ಎಂದು ಡಿಕೆಶಿ ಹೇಳಿದ್ದೇಕೆ?

Posted By: ನಮ್ಮ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್, 01: 'ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್‌ಗೆ ನಾಲ್ಕು ವರ್ಷಗಳಿಂದ ಉಸಿರು, ಮೀಟ್ರು, ಮೋಟ್ರೂ ಎಲ್ಲ ನಿಂತು ಹೋಗಿತ್ತು. ಅವರು ಏನ್ ದಾಖಲೆಗಳು ಬೇಕಾದ್ರೂ ಇಟ್ಕೊಳ್ಳಲಿ ಪಾವಗಡದ ಸೋಲಾರ್ ಉತ್ಪಾದನಾ ಕೇಂದ್ರದಲ್ಲಿ ಬೇನಾಮಿ ಆಸ್ತಿ ಮಾಡಿದ್ರೆ ಅವರ ಹೆಸರಿಗೆ ರಿಜಿಸ್ಟರ್ ಮಾಡಿ ಗಿಫ್ಟ್ ಕೊಟ್ಟು ಬಿಡೋಣಾ' ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ರಾಮನಗರದಲ್ಲಿ ಇಂದು ತಿಳಿಸಿದರು.

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 62ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಡಿ ಕೆ ಶಿವಕುಮಾರ್ ರಾಷ್ಟ್ರಧ್ವಜಾರೋಹಣ ನಡೆಸಿ ಪಥಸಂಚಲನ ಕಾರ್ಯಕ್ಕೆ ಚಾಲನೆ ನೀಡಿದರು. ಆಕರ್ಷಕ ಪಥಸಂಚನದ ಜೊತೆಗೆ ಶಾಲಾಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೊಡುಗರ ಮನ ಸೆಳೆದವು.

I will gift my assets if allegations are proved : DK Shivakumar challenges CP Yogeshwar

ಪಾವಗಡದ ಸೋಲಾರ್ ಕೇಂದ್ರದಲ್ಲಿ ಕಾರ್ಯಕರ್ತರ ಹೆಸರಿನಲ್ಲಿ ಡಿಕೆಶಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ಆರೋಪಕ್ಕೆ ಯೋಗೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದ್ರು. ಬೇನಾಮಿ ಆಸ್ತಿಯಿದ್ರೆ, ಅದನ್ನ ರಿಜಿಸ್ಟರ್ ಮಾಡಿ ಗಿಫ್ಟ್ ಆಗಿ ಯೋಗೇಶ್ವರ್‌ಗೆ ಕೊಡೋಣಾ ಪೇಟ-ಗೀಟ ರೆಡಿ ಮಾಡಿಕೊಳ್ಳಲಿ ಎಂದು ಚೇಡಿಸಿದರು.

ಇನ್ನೂ ಇದೇ ವೇಳೆ ಸಿಎಂ ಸಿದ್ದರಾಮಯ್ಯವರು ನಾಡಧ್ವಜಾರೋಹಣ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಸಂವಿಧಾನದಲ್ಲಿ ನಾಡಧ್ವಜ ಇಟ್ಕೋಬಾರದು ಅಂತ ಹೇಳಿಲ್ಲ. ನಾಡಧ್ವಜಕ್ಕೆ ಯಾವ ರೀತಿ ಗೌರವ ನೀಡಬೇಕೆಂಬುದರ ಪ್ರಾರಂಭವಿದು ಇದರ ತೀರ್ಮಾನವನ್ನ ಸಿಎಂರವರೇ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಏನ್ ಬೇಕಾದ್ರೂ ವಿರೋಧ ಮಾಡಲಿ ನಮ್ಮ ಹಕ್ಕನ್ನು ನಾವು ಪ್ರತಿಪಾದನೆ ಮಾಡ್ತೇವೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Power Minister Dk Shivakumar denied all allegations made by CP Yogeshwar on Pavagada Solar park scam. Minister Shivakumar if he is proved guilty, then he will gift his assets to CP Yogeshwar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ