ಬಾಣಂತಿ ಪತ್ನಿಗೆ ವಿಷವುಣಿಸಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ
ಚನ್ನಪಟ್ಟಣ, ಮಾ.19: ಬಾಣಂತಿ ಪತ್ನಿಗೆ ಬಲವಂತವಾಗಿ ವಿಷವುಣಿಸಿದ ಹತ್ಯೆ ಮಾಡಿದ ಪತಿ ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಕುಟುಂಬದಲ್ಲಿ ನಿತ್ಯ ಕಲಹದಿಂದ ಬೇಸತ್ತು ಮಾನಸಿಕವಾಗಿ ಕುಗ್ಗಿಹೋಗಿದ್ದ ಮಹದೇವ ಹೆಂಡತಿಗೆ ಬಲವಂತವಾಗಿ ವಿಷವುಣಿಸಿ ಕೊಲೆ ಮಾಡಿದ್ದಾನೆ. ದಂಪತಿಗೆ ಒಂದು ಗಂಟು ಮಗು ಹಾಗೂ ಒಂದೂವರೆ ತಿಂಗಳ ಹೆಣ್ಣು ಮಗುವಿದೆ.
ಗ್ರಾಮದ ನಿಂಗರಾಜು ಎಂಬುವವರ ಮಗಳಾದ ದಿವ್ಯಳನ್ನು ಎರಡು ವರ್ಷದ ಹಿಂದೆ ಅದೇ ಗ್ರಾಮದ ಪುಟ್ಟಮಾದಣ್ಣ ಎಂಬುವವರ ಮಗನಾದ ಮಹದೇವನಿಗೆ ಮದುವೆ ಮಾಡಿಕೊಡಲಾಗಿತ್ತು.

ಮಹದೇವ್ ಆಟೋ ಚಾಲಕನಾಗಿದ್ದಾನೆ, ಕೆಲ ದಿನಗಳಿಂದ ಕುಟುಂಬದಲ್ಲಿ ಜಮೀನಿನ ವಿಚಾರದಲ್ಲಿ ಸೋದರರಿಗೂ ಈತನಿಗೂ ಮನಸ್ತಾಪ ಉಂಟಾಗಿ ಜಮೀನು ಮಾರಾಟ ಮಾಡಲು ಸಹೋದರರು ಸಹಿ ಮಾಡಲಿಲ್ಲ ಎಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನೆಂದು ಹೇಳಲಾಗಿದೆ.
ಇದೇ ವಿಚಾರವಾಗಿ ಪತ್ನಿ ಜೊತೆ ಚರ್ಚೆ ನಡೆಸಿ ಒಂದೂವರೆ ತಿಂಗಳ ಬಾಣಂತಿ ಎಂಬುದನ್ನೂ ಮನಗಾಣದೆ ಆಕೆಗೆ ಬಲವಂತವಾಗಿ ವಿಷಕುಡಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇಬ್ಬರೂ ಸಾವು-ಬದುಕಿನ ಜತೆ ಹೋರಾಟ ನಡೆಸುವಾಗ ಸ್ಥಳೀಯರು ತಕ್ಷಣ ಇಬ್ಬರನ್ನೂ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಪತ್ನಿ ಸಾವನ್ನಪ್ಪಿದ್ದಾಳೆ.












Click it and Unblock the Notifications