Get Updates
Get notified of breaking news, exclusive insights, and must-see stories!

Maha Shivratri 2023: ಮಂಗಾಡಹಳ್ಳಿಯಲ್ಲಿ ಮಂಸದೂಟ ಸವಿದು ಶಿವನನ್ನು ಆರಾಧಿಸಿದ ಭಕ್ತರು, ವಿಶಿಷ್ಟ ಆಚರಣೆ

ದೇಶದ್ಯಾಂತ ಮಹಾಶಿವರಾತ್ರಿ ಸಂಭ್ರಮ ಜೋರಾಗಿ ನಡೆದಿದ್ದು, ಹಾಗೆಯೇ ಮಾಂಗಡಹಳ್ಳಿಯಲ್ಲಿ ಯಾವ ರೀತಿ ಹಬ್ಬವನ್ನು ಆಚರಿಸಲಾಗಿದೆ ಅನ್ನುವುದನ್ನು ಇಲ್ಲಿ ತಿಳಿಯಿರಿ.

ಚನ್ನಪಟ್ಟಣ, ಫೆಬ್ರವರಿ, 19: ಮಾಂಸಹಾರ ಸೇವನೆ ನಿಷಿದ್ಧವಾದ ಶಿವರಾತ್ರಿ ಹಬ್ಬ ಆಚರಣೆ ಮಾಡುವ ಪದ್ಧತಿಗೆ ವಿರುದ್ಧವಾಗಿ ಶಿವನ ಇನ್ನೂಂದು ಸ್ವರೂಪದ ಸಿದ್ದಪ್ಪಾಜಿ ದೇವರಿಗೆ ಭಕ್ತರು ಮಾಂಸದಡುಗೆ ನೈವೇದ್ಯ ಸಮರ್ಪಿಸಿದ್ದಾರೆ. ಹೀಗೆ ಭಕ್ತರು ಮಾಂಸಹಾರ ಸೇವಿಸಿ ಶಿವನ್ನು ಆರಾಧಿಸುತ್ತಾ ಶಿವರಾತ್ರಿಯ ಜಾಗರಣೆಯನ್ನು ಆಚರಿಸುವ ಪದ್ದತಿ ಬೊಂಬೆನಾಡಿನಲ್ಲಿ ಚಾಲ್ತಿಯಿದೆ.

ನಾಡಿನೆಲ್ಲಡೆ ಶಿವರಾತ್ರಿ ಹಬ್ಬವನ್ನು ಕಠಿಣ ವ್ರತಾಚರಣೆಯ ಮೂಲಕ ಸಂಭ್ರಮ, ಸಡಗರ, ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತೆ. ಇನ್ನೂ ಅನೇಕ ಭಕ್ತರು ಕಠಿಣ ಉಪವಾಸ ವ್ರತಾಚರಣೆ, ರಾತ್ರಿ ಇಡೀ ಜಾಗರಣೆ ಮಾಡಿ ಹಬ್ಬವನ್ನು ಭಕ್ತಿಯಿಂದ ಆಚರಿಸುತ್ತಾರೆ. ಅದರೆ ಇಲ್ಲೊಂದು ಗ್ರಾಮದಲ್ಲಿ ಶಿವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಗ್ರಾಮದಲ್ಲಿರುವ ದೇವಸ್ತಾನದ ಆವಣರದಲ್ಲಿ ಮಾಂಸದೂಟ ಮಾಡಿ, ಎಲ್ಲರೂ ಒಟ್ಟಿಗೆ ಕುಳಿತು ಮಾಂಸದೂಟ ಸವಿದು ನಂತರ ಇಡೀ ರಾತ್ರಿ ಶಿವನ್ನು ಆರಾಧಿಸುತ್ತಾರೆ.

ತಾಲೂಕಿ‌ನ ಮಂಗಾಡಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ಹಬ್ಬದ ದಿನದಂದೇ ದೇವಸ್ಥಾನದ ಭಕ್ತರೆಲ್ಲ ಸೇರಿ ಮಾಂಸದೂಟ ತಯಾರು ಮಾಡಿದ್ದರು. ನಂತರ ದೇವಸ್ಥಾನದ ಬಳಿಯೇ ಮಾಂಸದ ಪ್ರಸಾದವನ್ನ ಸವಿದಿದ್ದು, ನಂತರ ಇಡೀ ರಾತ್ರಿ ಹರ ನಾಮಸ್ಮರಣೆ ಮಾಡುತ್ತಾ ಶಿವರಾತ್ರಿಯನ್ನು ಆಚರಣೆ ಮಾಡಿದ್ದಾರೆ.

 ಶಿವರಾತ್ರಿಗೆ ಮಾಂಸದೂಟ ಪ್ರಸಾದ

ಶಿವರಾತ್ರಿಗೆ ಮಾಂಸದೂಟ ಪ್ರಸಾದ

ಸುಮಾರು 70 ಗ್ರಾಮಗಳ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ, ತಂದು ಬಲಿಕೊಟ್ಟು ದೇವಾಲಯದ ಬಳಿ ಪ್ರಸಾದವನ್ನು ತಯಾರು ಮಾಡಿದ್ದರು. ನಂತರ ದೇವರಿಗೆ ಕೋಳಿ ಸಾರು, ಕುರಿ-ಮೇಕೆ ಗೊಜ್ಜು, ಮುದ್ದೆ ನೈವೇದ್ಯ ಇಟ್ಟು ಪ್ರಸಾದ ಸಮರ್ಪಣೆ ಮಾಡಿದ್ದಾರೆ. ನಂತರ ದೇವಸ್ಥಾನದ ಮುಂಭಾಗದ ಸಾಮೂಹಿಕವಾಗಿ ಕುಳಿರು ಪ್ರಸಾದ ಸೇವಿಸಿದ್ದು ಗಮನ ಸೆಳೆದಿದೆ.

 ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಸಾವಿರಾರು ಭಕ್ತರು

ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಸಾವಿರಾರು ಭಕ್ತರು

ಕಳೆದ ಎರಡು ವರ್ಷ ಮಹಾಮಾರಿ ಕೊರೊನಾ ಭೀತಿಯ ನಡುವೆಯೂ ಹಬ್ಬವನ್ನು ಆಚರಿಸಲಾಗಿತ್ತು. ಈ ಬಾರಿ ಕೋವಿಡ್ ಭೀತಿ ಇಲ್ಲದ ಕಾರಣ ಅದ್ಧೂರಿಯಾಗಿ ಹಬ್ಬವನ್ನು ಆಚರಣೆ ಮಾಡಲಾಯಿತು. ಶಿವರಾತ್ರಿಯ ಮಾಂಸದೂಟಕ್ಕಾಗಿ ಭಕ್ತರು ಸುಮಾರು 300 ಕೋಳಿಗಳನ್ನು ಸಮರ್ಪಣೆ ಮಾಡಿದ್ದಾರೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರು ಒಟ್ಟಿಗೆ ಕುಳಿತು ಮಾಂಸದ ಪ್ರಸಾದವನ್ನು ಸೇವಿಸಿದರು.

 ಮಾಂಸಹಾರ ಸೇವಿಸಿ ಜಾಗರಣೆ ಮಾಡಿದ ಭಕ್ತರು

ಮಾಂಸಹಾರ ಸೇವಿಸಿ ಜಾಗರಣೆ ಮಾಡಿದ ಭಕ್ತರು

ಶಿವರಾತ್ರಿ ಹಬ್ಬಕ್ಕೆ ಮಾಂಸಹಾರ ಸೇವಿಸಿ ಇಡೀ ರಾತ್ರಿ ಶಿವನನ್ನು ಆರಾಧಿಸುವ ವಿಶಿಷ್ಟ ಆಚರಣೆಗೆ ಕೇವಲ ದೇವಾಲಯದ ಸುತ್ತಮುತ್ತಲಿನ ಜನರಷ್ಟೇ ಅಲ್ಲದೇ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ನೆಲಸಿರುವ ಭಕ್ತರು ಆಗಮಿಸಿದ್ದರು. ಹಾಗೆಯೇ ಹೊರ ರಾಜ್ಯಗಳಿಂದಲೂ ಭಕ್ತರು ಮಂಗಾಡಹಳ್ಳಿಯ ಸಿದ್ದಪ್ಪಾಜಿ ಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶಿಷ್ಟ ಮಾಂಸದೂಟದ ಮಾಡಿ ಜಾಗರಣೆ ಪದ್ಧತಿಯಲ್ಲಿ ಪಾಲ್ಗೊಂಡರು.

 ಮಂಗಾಡಹಳ್ಳಿಯಲ್ಲಿ ಹಬ್ಬ ಆಚರಿಸುವ ರೀತಿ

ಮಂಗಾಡಹಳ್ಳಿಯಲ್ಲಿ ಹಬ್ಬ ಆಚರಿಸುವ ರೀತಿ

ಶಿವರಾತ್ರಿಯ ದಿನದಂದು ಮಾಂಸದೂಟ ಸೇವಿಸಿ ಇಡೀ ರಾತ್ರಿ ಶಿವನನ್ನು ಅರಾಧಿಸುತ್ತಾ ಜಾಗರಣೆ ಮಾಡುವ ಪದ್ಧತಿ ಕಳೆದ ಎಂಟು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ದೂರವಾಗಲಿ ಎಂದು ದೇವಸ್ಥಾನಕ್ಕೆ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥಗಳು ನೆರೆವೇರಿದ ಬಳಿಕ ಶಿವರಾತ್ರಿ ದಿನದಂದು ಕೋಳಿ, ಕುರಿ ಬಲಿ ನೀಡುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ. ಇದು ಕೇವಲ ಶಿವರಾತ್ರಿ ದಿನದಂದು ಮಾತ್ರ ಅಲ್ಲ. ಗೌರಿ ಹಬ್ಬದ ದಿನದಂದು ಮಾಂಸದೂಟ ಮಾಡುತ್ತಾರೆ. ಅದರಲ್ಲೂ ಹಬ್ಬಗಳು ಸೋಮವಾರದಂದು ಬಂದರೂ ಕೂಡ ಅಂದು ಸಹ ಮಾಂಸದೂಟವನ್ನು ಮಾಡಲಾಗುತ್ತದೆ. ಈ ರೀತಿಯ ವಿಭಿನ್ನ ಆಚರಣೆಯಲ್ಲಿ ಕೇವಲ ಮಂಗಾಡಹಳ್ಳಿ ಗ್ರಾಮದ ಭಕ್ತರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದ ಭಕ್ತರು ಭಾಗಿಯಾಗುತ್ತಾರೆ.

 ದೇವಾಲಯದ ಅರ್ಚಕರು ಹೇಳುವುದೇನು?

ದೇವಾಲಯದ ಅರ್ಚಕರು ಹೇಳುವುದೇನು?

ಕಳೆದ 17 ವರ್ಷಗಳ ಹಿಂದೆ ಮಾಂಸದೂಟದ ಪದ್ಧತಿಯನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಚಿಂತನೆ ಮಾಡಿದ್ದರು. ಶಿವರಾತ್ರಿ ದಿನ ಸಿಹಿ ಊಟ ಮಾಡಿ ಶಿವರಾತ್ರಿಯ ಜಾಗರಣೆ ಪ್ರಾರಂಭಿಸಿದ್ದಾರೆ. ಆದರೆ ಮಧ್ಯರಾತ್ರಿ ಸುಮಾರಿಗೆ ಭಕ್ತರು ನೀಡಿದ್ದ ಹರಕೆಯ ಕೋಳಿಗಳು ದೇವಸ್ಥಾನದ ಗರ್ಭಗುಡಿ ಒಳಗೆ ನುಗ್ಗಿದ್ದವು. ಹೀಗಾಗಿ ಮತ್ತೆ ಆಚರಣೆ ಮುಂದುವರೆಸಿಕೊಂಡು ಬಂದಿದ್ದೇವೆ ಎಂದು ದೇವಾಲಯದ ಅರ್ಚಕ ಬೆಟ್ಟದ್ದಪ್ಪಸ್ವಾಮಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+