ರಾಮನಗರದಲ್ಲಿ ಅಬ್ಬರಿಸುತ್ತಿರುವ ವರುಣ, ಸಾರ್ವಜನಿಕರಿಗೆ ಮತ್ತೆ ಜಲಾಘಾತದ ಭೀತಿ

ರಾಮನಗರ, ಸೆಪ್ಟೆಂಬರ್ 5: ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಭಾನುವಾರದಿಂದ ಬುಧವಾರದವರೆಗೆ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಭಾನುವಾರ ಸಾಧಾರಣ ಮಳೆಯಾಗಿದ್ದರೆ, ಇನ್ನೂ ಸೋಮವಾರ ಸಂಜೆ ಭಾರಿ ಮಳೆಯಾಗಿದ್ದು, ಸಂಜೆ ವೇಳೆ ಶುರುವಾದ ಜೋರು ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಸೋಮವಾರ ಸಂಜೆ ವೇಳೆ ಪ್ರಾರಂಭವಾದ ಮಳೆಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದರು. ಹೆದ್ದಾರಿಯ ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾದ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಸ್ ತಂಗುದಾಣಗಳು ಹಾಗೂ ಅಂಗಡಿಗಳ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದರು.

ಬದುಕಿದೆಯಾ ಬಿಬಿಎಂಪಿ?: ಬೆಂಗಳೂರಿನಲ್ಲಿ 3000 ಜನರ ಬದುಕು ಹೀಗಾಗಿದೆ ನೋಡಿ!
ಬಾರಿ ಮಳೆಗೆ ಮೈಸೂರು ಹಾಗೂ ಬೆಂಗಳೂರು ತೆರಳುವ ಪ್ರಯಾಣಿಕರಿಗೆ ಕಳೆದ ವಾರದಷ್ಟೇನು ಬಿಸಿ ತಟ್ಟಿಲ್ಲ. ಆದರೆ ಹೆದ್ದಾರಿಯ ಅಂಡರ್ ಪಾಸ್‌ಗಳು ಜಲಾವೃತವಾದ ಹಿನ್ನಲೆಯಲ್ಲಿ ಸ್ಥಳೀಯ ಪ್ರಯಾಣಿಕರು ಹೈರಾಣಾದರು. ಮಳೆ ಪರಿಣಾಮ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರಿತಪಿಸಿದರು.

Heavy Rain start again in Ramanagara, People Fear to Flood

ಮಂಚನಬೆಲೆ ಜಲಾಶಯದಿಂದ 12 ಸಾವಿರ ಕ್ಯೂಸೆಕ್ಸ್ ನೀರು

ಭಾನುವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಇದೀಗ ಸೋಮವಾರ ವರುಣನ ಆರ್ಭಟ ಜೋರಾಗಿದ್ದು ಜನರಲ್ಲಿ ಮತ್ತೆ ನೆರೆ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಮನೆ ಮಾಡಿದೆ. ಭಾರೀ ಮಳೆ ಹಿನ್ನೆಲೆ ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಗೆ ಸುಮಾರು 5 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದಾರೆ.

ಇನ್ನೂ ಮಳೆ ಹೆಚ್ಚಾಗುವ ಸಂಭವವಿರುವ ಕಾರಣ ಇಂದು ರಾತ್ರಿ ಮಂಚನಬೆಲೆ ಒಳ ಹರಿವು ಹೆಚ್ಚಾದಲ್ಲಿ ಅರ್ಕಾವತಿ ನದಿಗೆ 12 ಸಾವಿರ ಕ್ಯೂಸೆಕ್ಸ್ ನೀರನ್ನು ನದಿ ಪಾತ್ರಕ್ಕೆ ಹರಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಅರ್ಕಾವತಿ ನದಿ ರಾಮನಗರ ನಗರದ ಮಧ್ಯದಲ್ಲಿ ಹಾದು ಹೋಗಿರುವ ಕಾರಣ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನಗರಸಭೆಯ ಸಿಬ್ಬಂದಿಗಳು ಅರ್ಕಾವತಿ ನದಿ ಪಾತ್ರದ ಜನ ವಸತಿ ಪ್ರದೇಶಗಳಲ್ಲಿ ಆಟೋಗಳ ಮೂಲಕ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಕಳೆದ ವಾರ ನಗರದ ಭಕ್ಷಿ ಕೆರೆ ಒಡೆದ ಪರಿಣಾಮ ಏಳು ವಾರ್ಡ್ ಗಳಿಗೆ ಮಳೆ ನೀರು ನುಗ್ಗಿ ಜನರ ಜೀವನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಜೀವ ಮಾತ್ರ ಉಳಿದಿದೆ.

Heavy Rain start again in Ramanagara, People Fear to Flood

ಕಣ್ವ ಜಲಾಶಯದಿಂದ ನೀರು ಹೊರಕ್ಕೆ

ಭಾನುವಾರ ಹಾಗೂ ಸೋಮವಾರ ಸಂಜೆಯಿಂದ ಬೀಳುತ್ತಿರುವ ಜೋರು ಮಳೆಗೆ ಕಣ್ವ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಕಣ್ವ ಜಲಾಶಯದಿಂದ ಕಣ್ವ ನದಿ ಪಾತ್ರಕ್ಕೆ 4 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದ್ದಾರೆ. ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಕಣ್ವ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಣ್ವ ಜಲಾಶಯದಿಂದ ನೀರು ಹೊರಬಿಟ್ಟ ಕಾರಣ ಈಗಾಗಲೇ ಅಬ್ಬೂರು ಸೇತುವ ಮುಳುಗಡೆ‌ಯಾಗಿ, ಅಬ್ಬೂರು, ರಾಮನಗರ, ಕುಣಿಗಲ್, ಮಾಕಳಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಅಧಿಕಾರಿಗಳು ಕಣ್ವ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+