• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ನಂಗೆ ಕಲ್ಲಿನ ಮೇಲೆ ಹೆಸರು ಕೆತ್ತಿಸಿಕೊಳ್ಳೋ ಆಸೆಯಿಲ್ಲ"; ಎಚ್.ಡಿ.ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|

ರಾಮನಗರ, ಆಗಸ್ಟ್ 5: "ರಾಜ್ಯದ ಒಟ್ಟಾರೆ ಅಭಿವೃದ್ಧಿ ಕಡೆಗೆ ಗಮನ ನೀಡುವ ನಿಟ್ಟಿನಲ್ಲಿ ಕ್ಷೇತ್ರದತ್ತ ಮುಖ ಮಾಡಲಾಗಿರಲಿಲ್ಲ. ಈಗ ಸದ್ಯಕ್ಕೆ ನನಗೆ ಬಿಡುವು ಸಿಕ್ಕಿದೆ. ಸದ್ಯದಲ್ಲೇ ಚನ್ನಪಟ್ಟಣದ ಪ್ರತಿ ಹಳ್ಳಿಗೆ ಭೇಟಿ ನೀಡಲಿದ್ದೇನೆ' ಎಂದು ಹೇಳಿದ್ದಾರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ. ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿನ ಪಟ್ಟಲದಮ್ಮ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

"ಕ್ಷೇತ್ರದ ಶಾಸಕನಾಗಿ, 14 ತಿಂಗಳು ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ. ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಟೀಕೆ, ಹೊಗಳಿಕೆ ಎರಡನ್ನೂ ಕಂಡಿದ್ದೇನೆ. ಇಗ್ಗಲೂರಿನ ಜಲಾಶಯಕ್ಕೆ ಸತ್ತೆಗಾಲದಿಂದ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಆದರೆ ಅದಕ್ಕೂ ಕೊಕ್ಕೆ ಹಾಕಲು ಈಗಿನ ಸರ್ಕಾರ ಹೊರಟಿದೆ, ಅವಕಾಶ ನೀಡುವುದಿಲ್ಲ" ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಚಕ್ಕೆರೆ ಗ್ರಾಮದ ದೇಗುಲ ಉದ್ಘಾಟನೆಯಲ್ಲಿ ಎಚ್ ಡಿಕೆ- ಯೋಗೇಶ್ವರ್ ಮುಖಾಮುಖಿ
ಇದೇ ಸಮಯದಲ್ಲಿ ಮತ್ತೊಮ್ಮೆ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದರು. "ಮಾಧ್ಯಮ ಮಿತ್ರರು ನನಗೆ ಬೆಂಬಲ ನೀಡಲಿಲ್ಲ. ನನಗೆ ಕಲ್ಲಿನ ಮೇಲೆ ಹೆಸರು ಕೆತ್ತಿಸಿಕೊಳ್ಳುವ ಉದ್ದೇಶವಿಲ್ಲ. ಆರೂವರೆ ಕೋಟಿ ಜನರ ಹೃದಯದಲ್ಲಿ ಹೆಸರು ಪಡೆದಿದ್ದೇನೆ. ಅಷ್ಟೇ ಸಾಕು" ಎಂದರು.


"ಋಣಮುಕ್ತ ಕಾಯಿದೆಯಿಂದ ಸಾಮಾನ್ಯ ಜನರಿಗೆ ಅನುಕೂಲವಿದೆ. ಈ ಕಾಯಿದೆ ಅನುಷ್ಠಾನ ಈ ಸರ್ಕಾರದ ಮೇಲಿದೆ. ಬಡವರ ಪರವಿದ್ದರೆ ಯಡಿಯೂರಪ್ಪನವರು ಈ ಕಾಯಿದೆಯನ್ನ ಜಾರಿಗೊಳಿಸುತ್ತಾರೆ. ಆದರೆ ಹಣವಂತರು, ಬಡ್ಡಿಕೋರರು, ಚುನಾವಣೆಗೆ ಹಣ ನೀಡುವವರೇ ಇವರ ಬಳಿ ಇರೋದು. ಬಡವರ ಪರವಾಗಿ ಯಾರಿದ್ದಾರೆ, ಬಡವರ ವಿರುದ್ಧ ಯಾರಿದ್ದಾರೆ ಎಂದು ಜನರೇ ಯೋಚಿಸಬೇಕು" ಎಂದು ಟೀಕಿಸಿದರು.

ರಾಜಕೀಯ ನಿವೃತ್ತಿಯ ಮಾತನ್ನಾಡಿದ ಎಚ್ ಡಿ ಕುಮಾರಸ್ವಾಮಿ
"ಯಡಿಯೂರಪ್ಪ, ಅವರ ಮಗ ವಿಜಯೇಂದ್ರ, ಸಿಟಿ ರವಿ ಶಾಂಗ್ರೀಲಾ ಹೋಟೆಲ್ ನಲ್ಲಿ ಬಿಲ್ಡರ್ ಗಳ ಸಭೆ ನಡೆಸ್ತಾರೆ. ನಾನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಕ್ಕೆ ಟೀಕಿಸ್ತಾರೆ. ಇದೀಗ ಮಂಡ್ಯದ ಕೆಆರ್ ಪೇಟೆ, ಹುಣಸೂರಿನಲ್ಲಿ ನಿಖಿಲ್ ನಿಲ್ತಾರೆ ಅಂತ ಸುದ್ದಿ ಹಬ್ಬಿಸಿದರು. ನಿಖಿಲ್ ವರ್ಸಸ್ ಸುಮಲತಾ, ನಿಖಿಲ್ ವರ್ಸಸ್ ವಿಜಯೇಂದ್ರ ಅಂತಾ ಸುದ್ದಿ ಮಾಡ್ತಾರೆ. ನನ್ನ ಬಗ್ಗೆ ಸುಮ್ಮನೆ ಅಪಪ್ರಚಾರ ಮಾಡಿದ್ರೆ ನಿಮಗೇನು ಪ್ರಯೋಜನ. ಮಾಧ್ಯಮದವರು ನನಗೆ ಕೊಟ್ಟ ಹಿಂಸೆ ನಾನು ಯಾವತ್ತೂ ಮರೆಯಲ್ಲ" ಎಂದು ಸಿಡುಕಿದರು.

"ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ, ಬಡವರ ಪರ ಕೆಲಸ ಮಾಡಿದ್ದೇನೆ. ಲೇಔಟ್ ಮಾಡಿ ಬಡವರ ತಲೆ ಹೊಡೆದು ನಾನು ರಾಜಕೀಯ ನಡೆಸಿಲ್ಲ. ನನಗೆ ಬೇಕಿರುವುದು ನಿಮ್ಮ ಪ್ರೀತಿ. ಯಾವ ಮುಖ್ಯಮಂತ್ರಿ ಪಟ್ಟವೂ ಬೇಕಿಲ್ಲ. ಮಾಧ್ಯಮಗಳು ಏನ್ ಬೇಕಾದ್ರು ಬರೆಯಲಿ, ಬಿಡಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮಾಧ್ಯಮಗಳನ್ನ ನಾನು ಬಿಟ್ಟಿದ್ದೇನೆ, ನನ್ನ ಕಷ್ಟವನ್ನ ನಿಮ್ಮ ಬಳಿ ನೇರವಾಗಿ ಹೇಳಿಕೊಳ್ತೀನಿ ಅಷ್ಟೇ" ಎಂದರು.

"ಕೈ- ತೆನೆ ಮೈತ್ರಿ ಖತಂ, ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ"
"ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ನಮ್ಮ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಆರೋಪ ಮಾಡಿದ್ದರು. ಆದರೆ ಈಗ ಅವರ ಸರ್ಕಾರದಲ್ಲಿ ಏನು ನಡೆಯುತ್ತಿದೆ ಅನ್ನೋದನ್ನ ಅವರೇ ಹೇಳಬೇಕು" ಎಂದು ಪ್ರಶ್ನಿಸಿದರು.

English summary
Former CM HD Kumaraswamy spoke about state government in chakkere village in channapatna. He also critisize media this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X