ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರಿಗೆ ಸ್ಥಳೀಯ ಆಹಾರದ ರುಚಿ ಪರಿಚಯಿಸಲಿದೆ ಜಾನಪದ ಲೋಕ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 27: ಜಾನಪದ ಲೋಕ ದಸರಾ ಪ್ರವಾಸಿಗರಿಗೆ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಜೊತೆಗೆ ಸ್ಥಳೀಯ ಗ್ರಾಮೀಣ ತಿನಿಸುಗಳನ್ನು ಪರಿಚಯಿಸಲು ಸಜ್ಜಾಗಿದೆ.

Recommended Video

Dasara 2019 : ಮಹಿಷ ದಸರಾಗ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದ ಬಳಿ 144 ಸೆಕ್ಷನ್ ಜಾರಿ | Oneindia Kannada

ದಸರಾ ಆಹಾರ ಮೇಳದಲ್ಲಿ ಈ ಬಾರಿ ಟಿಬೇಟಿಯನ್ ಸ್ಪೆಷಲ್ ಖಾದ್ಯದಸರಾ ಆಹಾರ ಮೇಳದಲ್ಲಿ ಈ ಬಾರಿ ಟಿಬೇಟಿಯನ್ ಸ್ಪೆಷಲ್ ಖಾದ್ಯ

"ಮೈಸೂರು -ಬೆಂಗಳೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದ ಯಂಗಯ್ಯನಕೆರೆ ವೃಕ್ಷೋದ್ಯಾನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹತ್ತು ದಿನಗಳ ದಸರಾ ಆಹಾರ ಮೇಳವನ್ನು ಅ.1 ರಿಂದ ಅ.10 ವರೆಗೆ ಹಮ್ಮಿಕೊಂಡಿದೆ" ಎಂದು ಜಿಲ್ಲಾ ಪ್ರವಾಸೋದ್ಯಮ ನಿರ್ದೇಶಕ ಶಂಕರಪ್ಪ ತಿಳಿಸಿದರು.

Food Fest In Ramanagar For Dasara Tourists

ಸ್ಥಳೀಯ ಆಹಾರಗಳಾದ ರಾಗಿ ಮುದ್ದೆ, ಸೊಪ್ಪು ಸಾರು ಊಟ, ತಟ್ಟೆ ಇಡ್ಲಿ, ಮಾಂಸಾಹಾರಿ ಊಟ, ಸಿಹಿ ತಿನಿಸುಗಳು ಸೇರಿದಂತೆ ಗ್ರಾಮೀಣ ಪರಿಸರದಲ್ಲಿ ತಯಾರಿಸುವ ಅಡುಗೆಗಳನ್ನು ಪ್ರವಾಸಿಗರಿಗೆ ಉಣಬಡಿಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಗತ್ಯ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಮೇಳದಲ್ಲಿ ಆಹಾರ ಸುರಕ್ಷತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಹಾರ ಮೇಳದಲ್ಲಿ ವೈದ್ಯಕೀಯ ಸೌಲಭ್ಯದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಹವ್ಯಕರ ಸಿಗ್ನೇಚರ್ ಫುಡ್: ಕಿಕ್ಕುಹೊಡೆಯೋ ಅಪ್ಪೆ ಹುಳಿ ಅಂದ್ರೆ... ಬಾಯಲ್ಲಿ ನೀರು!ಹವ್ಯಕರ ಸಿಗ್ನೇಚರ್ ಫುಡ್: ಕಿಕ್ಕುಹೊಡೆಯೋ ಅಪ್ಪೆ ಹುಳಿ ಅಂದ್ರೆ... ಬಾಯಲ್ಲಿ ನೀರು!

ಮೈಸೂರು ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರಿಗೆ ಜಿಲ್ಲೆಯ ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸಲು ಅಲಂಕೃತ ಎತ್ತಿನ ಗಾಡಿಗಳ ಪ್ರದರ್ಶನ, ಜಾನಪದ ಕಲೆಗಳ ಪ್ರದರ್ಶನ, ಸಿರಿಧಾನ್ಯ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೇಳಕ್ಕೆ ಪ್ರವೇಶ ಉಚಿತ.

English summary
Janapada Loka in ramanagar geared to introduce the local rural cuisine to the tourists. Food fest is conducted from october 1 to 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X