ಅಪ್ಪು ಸಾವಿನಿಂದ ಮನನೊಂದು ಆತಹತ್ಯೆಗೆ ಶರಣಾದ ಅಭಿಮಾನಿಯಿಂದ ನೇತ್ರದಾನ

ರಾಮನಗರ, ನವೆಂಬರ್, 4: ಮೇರು ಚಿತ್ರನಟ ಪುನೀತ್ ರಾಜ್‌ಕುಮಾರ್ ಸಾವಿನಿಂಧ ಮನನೊಂದು ಅತ್ಮಹತ್ಯೆಗೆ ಶರಣಾದ ಅಭಿಮಾನಿಯೊಬ್ಬ ಬಳಿಕ ಪುನೀತ್ ಅವರಂತೆಯೇ ತಾನೂ ಸಹ ನೇತ್ರದಾನ ಮಾಡುವ ಮೂಲಕ ಅಪ್ಪುವಿನಂತೆ ಆದರ್ಶವನ್ನು ಮೆರೆದಿದ್ದಾನೆ.

ಪುನೀತ್ ರಾಜ್‌ಕುಮಾರ್ ನಿಧನದಿಂದ ಮನನೊಂದಿದ್ದ ಅಭಿಮಾನಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಪಟ್ಟಣದ ಎಲೇಕೇರಿ ಬಡಾವಣೆಯಲ್ಲಿ ನಡೆದಿದೆ.

ಚನ್ನಪಟ್ಟಣ ತಾಲ್ಲೂಕಿನ ಸವಿತಾ ಸಮಾಜದ ಗೌರವಾಧ್ಯಕ್ಷ ದಿವಂಗತ ಎಲೇಕೇರಿ ಕೃಷ್ಣಪ್ಪನವರ ಮಗ ವೆಂಕಟೇಶ್(ಡಾಲಿವೆಂಕಿ) (25) ಮೃತ ಅಪ್ಪು ಅಭಿಮಾನಿ ಆಗಿದ್ದಾರೆ. ಪವರ್ ಸ್ಟಾರ್ ನಟಿಸಿದ ಚಿತ್ರ ಎಂದ್ರೆ ಸಾಕು ಮೊದಲ ದಿನವೇ ಚಿತ್ರ ಮಂದಿರಕ್ಕೆ ಹೋಗಿ ನೋಡುತ್ತಿದ್ದ ಎನ್ನಲಾಗಿದೆ.

Ramanagara: Eye donation from fan of Puneeth Rajkumar

ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ವೆಂಕಟೇಶ್‌, ಅಪ್ಪು ನಿಧನದಿಂದ ಮನವೊಂದು ಕಳೆದ ಮೂರು ದಿನಗಳಿಂದ ಊಟ ಬಿಟ್ಟಿದ್ದನು ಎನ್ನಲಾಗಿದ್ದು. ಅಪ್ಪು ಸಮಾಧಿ ನೋಡಲೇಬೇಕೆಂಬ ಆಶಯ ಹೊಂದಿದ್ದ. ಮೃತ ವೆಂಕಟೇಶ ತನ್ನ ಸ್ನೇಹಿತರ ಬಳಿ ಅಪ್ಪು ಸಮಾಧಿಗೆ ಹೋಗಬೇಕು ಎಂಬ ತನ್ನ ಆಸೆಯನ್ನೂ ವ್ಯಕ್ತಪಡಿಸಿದ್ದ.

ಪುನೀತ್ ರಾಜ್‌ಕುಮಾರ್‌ ಅವರ ಅಭಿಮಾನಿಯಗಿರುವ ವೆಂಕಟೇಶ್ ತನ್ನ ಕೈ ಮೇಲೆ ಪುನೀತ್‌ ಹೆಸರನ್ನು ಬರೆಸಿಕೊಂಡಿದ್ದ. ಜೊತೆಗೆ ಪುನೀತ್‌ಅವರ ಹುಟ್ಟುಹಬ್ಬದ ವೇಳೆ ಅವರು ಎಲ್ಲಿದ್ದರೂ ಭೇಟಿ ಮಾಡಿ ಶುಭಾಶಯ ಕೋರುತ್ತಿದ್ದರು. ಪುನೀತ್‌ ನಿಧನದಿಂದ ಮಾನಸಿಕವಾಗಿ ಮನನೊಂದು ಖಿನ್ನತಗೆಗೂ ಒಳಗಾಗಿದ್ದ. ರಾತ್ರಿ ಮಲಗಿ ಬೆಳಗಾಗುವುದರೊಳಗೆ ನೇಣಿನ ಶರಣಾಗಿದ್ದಾನೆ.

ಅಪ್ಪು ಅಭಿಮಾನಿಯ ಆತ್ಮಹತ್ಯೆಯ ಬಗ್ಗೆ ಯಾರಿಗೂ ಮಾಹಿತಿ ನೀಡದೆ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ ಆತನ ಸ್ನೇಹಿತರ ಮೂಲಕ ಯುವಕ ಆತ್ಮಹತ್ಯೆ ಮಾಡಿಕೊಂಡಿರು ಬಗ್ಗೆ ಮಾಹಿತಿ ಪಡೆದ ಪೋಲಿಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಪೋಷಕರಿಗೆ ಶವ ಹಸ್ತಾಂತರ ಮಾಡಿದ್ದಾರೆ.

Ramanagara: Eye donation from fan of Puneeth Rajkumar

ಪುನೀತ್‌ರಂತೆ ತಾನು ನೇತ್ರದಾನ ಮಾಡಿದ ಅಭಿಮಾನಿ :

ಸಾವಿನ ಬಳಿಕ ನೇತ್ರ ದಾನ ಮಾಡಿ ನಾಲ್ಕು ಮಂದಿಗೆ ದೃಷ್ಠಿ ನೀಡಿರುವ ಅಪ್ಪು ಅವರ ದಾರಿಯಲ್ಲೇ ಅಭಿಮಾನಿ ವೆಂಕಟೇಶ್ ಕುಟುಂಬದವರು ಮಗನ ಕಣ್ಣನ್ನು ದಾನ ಮಾಡಿ ಮಗನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವ ಮೂಲಕ ದುಃಖದಲ್ಲೂ ಆದರ್ಶ ಮೆರಿದ್ದಿದ್ದಾರೆ.

ಆತ್ಮಹತ್ಯೆ ದಾರಿಯಲ್ಲ:

ಪನೀತ್ ರಾಜ್ ಕುಮಾರ್ ನಿಧನದಿಂದ ಮನನೊಂದು ಹಲವು ಅಭಿಮಾನಿಗಳು ಆತ್ಮಹತ್ಯೆ ಶರಣಾಗುದ್ದು, ಇನ್ನೂ ಅಭಿಮಾನಿಗಳ ಅತ್ಮಹತ್ಯೆ ಘಟನೆಗಳು ವರದಿಯಾಗುತ್ತಿದ್ದು ಖಂಡನೀಯವಾಗಿದ್ದೆ.

''ಪುನೀತ್ ಮೇಲೆ ಅಭಿಮಾನ ಹೊಂದಿರವ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಕುಟುಂಬವನ್ನು ಸಂಕಷ್ಟಕ್ಕೆ ದೂಡಬೇಡಿ. ಇದರಿಂದ ಪುನೀತ್ ಕಳೆದುಕೊಂಡಿರುವ ನಮಗೂ ಸಹ ಹೆಚ್ಚಿನ ದುಃಖ ಆಗುತ್ತದೆ. ಪುನೀತ್ ಅವರ ಪತ್ನಿ ಅಶ್ವಿನಿ ಅವರೂ ಸಹ ಅಭಿಮಾನಿಗಳ ಸಾವಿನಿಂದ ಬಹಳ ನೊಂದುಕೊಂಡಿದ್ದಾರೆ. ಆದ್ದರಿಂದ ಅಭಿಮಾನಿಗಳಿಗೆ ಕಾಲುಮುಗಿದು ಕೇಳುತ್ತೇನೆ. ಆತ್ಮಹತ್ಯೆಯ ನಿರ್ಧಾರ ಮಾಡಬೇಡಿ" ಎಂದು ಪುನೀತ್ ರಾಜ್‌ಕುಮಾರ್ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+