ಡಿಕೆಶಿ ಆಪ್ತರಿಗೆ ಇಡಿ ಸಮನ್ಸ್; ದೆಹಲಿಗೆ ವಿಚಾರಣೆಗೆ ಬರಲು ಸೂಚನೆ

ರಾಮನಗರ, ಸೆಪ್ಟೆಂಬರ್ 30 : ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತ, ರಾಮನಗರ ಕಾಂಗ್ರೆಸ್ ನಾಯಕನಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ದೆಹಲಿಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ.

ರಾಮನಗರ ಕಾಂಗ್ರೆಸ್ ಮುಖಂಡದ ಇಕ್ಬಾಲ್ ಹುಸೇನ್‌ಗೆ ಇಡಿ ಸಮನ್ಸ್ ನೀಡಿದ್ದು, ಗುರುವಾರ ವಿಚಾರಣೆಗೆ ಬರಬೇಕು ಎಂದು ಸೂಚಿಸಿದೆ. ಇಕ್ಬಾಲ್ ಹುಸೇನ್ ಡಿ. ಕೆ. ಶಿವಕುಮಾರ್‌ ಆಪ್ತರು.

ಇಕ್ಬಾಲ್ ಹುಸೇನ್ ಆದಾಯದ ಮೂಲಗಳ ಬಗ್ಗೆ ಇಡಿ ಮಾಹಿತಿ ಸಂಗ್ರಹ ಮಾಡಿದೆ. ಬ್ಯಾಂಕ್ ವಿವರ, ಕಾರ್ಖಾನೆ, ವ್ಯವಹಾರದ ಕುರಿತು ಮಾಹಿತಿಯನ್ನು ಇಡಿ ಕೇಳಿದೆ.

ED Issues Summons To Ramanagara Congress Leader Iqbal Hussain

ಗ್ರಾನೈಟ್ ಉದ್ಯಮಿಯಾಗಿರುವ ಇಕ್ಬಾಲ್ ಹುಸೇನ್, ರಾಮನಗರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಹೌದು. ಡಿ. ಕೆ. ಶಿವಕುಮಾರ್ ಕುಟುಂಬಕ್ಕೆ ಆಪ್ತರಾಗಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 69,990 ಮತಗಳನ್ನು ಪಡೆದು ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರು.

ರಾಮನಗರ, ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ್ದ ಎಚ್. ಡಿ. ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.

ಡಿ. ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಯ ಆರೋಪದ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಇಕ್ಬಾಲ್ ಅವರನ್ನು ವಿಚಾರಣೆಗೆ ಕರೆದಿದೆಯೇ? ಎಂಬುದು ಇನ್ನೂ ತಿಳಿದು ಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+