• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ; ಕುಡಿದ ನಶೆಯಲ್ಲಿ ಈತ ಮಾಡಿದ ಅವಾಂತರ ಒಂದೆರಡಲ್ಲ

By ರಾಮನಗರ ಪ್ರತಿನಿಧಿ
|
   ರಾಮನಗರ ಪೊಲೀಸ್ ಠಾಣೆಯಲ್ಲೇ ಕುಡುಕನ ರಂಪಾಟ | Oneindia Kannada

   ರಾಮನಗರ, ಡಿಸೆಂಬರ್ 6: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಇಬ್ಬರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ರಂಪಾಟ ಮಾಡಿದ ಘಟನೆ ಗುರುವಾರ ತಡರಾತ್ರಿ ರಾಮನಗರದ ಸಂಚಾರಿ ಪೊಲೀಸ್ ಠಾಣೆ ಎದುರು ನಡೆದಿದೆ.

   ಗಿರೀಶ್ ಎಂಬಾತ ಕಂಠ ಪೂರ್ತಿ ಕುಡಿದು, ಬಿಡದಿಯಿಂದ ಟಾಟಾ ಏಸ್ ಗಾಡಿಯಲ್ಲಿ ಮನಬಂದಂತೆ ಡ್ರೈವಿಂಗ್ ಮಾಡಿಕೊಂಡು ರಾಮನಗರದ ಕಡೆ ಬಂದಿದ್ದಾನೆ. ಹೊಟ್ಟೆಯಲ್ಲಿದ್ದ ಎಣ್ಣೆ ನಶೆಯಲ್ಲಿ ಹೈವೇನಲ್ಲಿ ಜೋರಾಗಿ ಗಾಡಿ ಓಡಿಸುತ್ತಾ ಸಾಗಿದ್ದಾನೆ. ಇಷ್ಟು ಸಾಲದು‌ ಎಂಬಂತೆ ನಡು ರಸ್ತೆಯಲ್ಲೇ ಬಿಯರ್ ಚೆಲ್ಲಾಡುತ್ತಾ ಕೂಗಾಡಿದ್ದಾನೆ.

   ಕುಡಿತ ಬಿಡಿಸಲು ಕೌನ್ಸೆಲಿಂಗ್ ಕೇಳಿದ್ದೇವೆ, ಆದರೆ ಕಲಿಯಲೂ ಕೂಡ ಕೌನ್ಸೆಲಿಂಗ್?

   ಈ ವೇಳೆ ಸಾರ್ವಜನಿಕರೊಬ್ಬರು ಅಡ್ಡಗಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಮಲಿನಲ್ಲಿದ್ದ ಗಿರೀಶ್ ಅವರ ಮೇಲೇ ಹರಿಹಾಯ್ದಿದ್ದಾನೆ. ಎಸ್ಪಿ ಕಚೇರಿಯ ಮುಂಭಾಗವೇ ಘಟನೆ ನಡೆದಿದ್ದು, ಗಲಾಟೆ ಬಿಡಿಸಲು‌ ಹೋದ ಟ್ರಾಫಿಕ್ ಪೊಲೀಸರೊಬ್ಬರ ಮೇಲೂ ಹಲ್ಲೆಗೆ‌ ಮುಂದಾಗಿ, ಟೌನ್ ಸ್ಟೇಷನ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ.

   ಈತನನ್ನು ಟ್ರಾಫಿಕ್ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಠಾಣೆಯಲ್ಲೂ ಕೆಲ ಪೀಠೋಪಕರಣವನ್ನು ಧ್ವಂಸ ಮಾಡಿದ್ದಾನೆ. ಕುಡಿದ‌ ಕಿಕ್ ನಲ್ಲಿ ಪೊಲೀಸರಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಹರಸಹಾರ ಪಟ್ಟು, ಆತನನ್ನು ಆಂಬುಲೆನ್ಸ್ ಹತ್ತಿಸುವಷ್ಟರಲ್ಲಿ ಪೊಲೀಸರು ಹೈರಾಣಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ ಯುವಕನ ಮೇಲೆ ಪ್ರಕರಣ ದಾಖಲಿಸಿದರು.

   English summary
   A drunker created mess in ramanagar police station yesterday
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X