ಇಂದು ಡಿ.ಕೆ.ಶಿವಕುಮಾರ್ ಜಾಮೀನು ತೀರ್ಪು; ಮನೆ ದೇವರ ಮೊರೆ ಹೋದ ಡಿಕೆಶಿ ತಾಯಿ
Recommended Video
ಡಿ ಕೆ ಶಿವಕುಮಾರ್ ಬಿಡುಗಡೆಗೆ ಇಂದು ಅವರ ತಾಯಿ ಮಾಡಿದ್ದೇನು ಗೊತ್ತಾ..? | Dk shivakumar | Oneindia Kannada
ಕನಕಪುರ, ಸೆಪ್ಟೆಂಬರ್ 25: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಡಿ ಬಲೆಯಲ್ಲಿ ಸಿಲುಕಿ ತಿಹಾರ ಜೈಲು ಪಾಲಾಗಿದ್ದಾರೆ. ನ್ಯಾಯಾಲಯ ಜಾಮೀನು ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಕಾದಿರಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಡಿಕೆಶಿ ಅವರಿಗೆ ಜಾಮೀನು ಮಂಜೂರು ಮಾಡಲಿ ಎಂದು ಡಿಕೆಶಿ ತಾಯಿ ದೇವರ ಮೊರೆ ಹೋಗಿದ್ದಾರೆ.
ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ತಮ್ಮ ಕುಲದೈವ ನಗರದ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಿಕೆಶಿಗೆ ಜಾಮೀನು ಮಂಜೂರಾಗಲಿ ಎಂದು ಇಂದು ಪ್ರಾರ್ಥನೆ ಸಲ್ಲಿಸಿದರು. ಡಿಕೆಶಿ ತಾಯಿಗೆ ಡಿಕೆಶಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜೊತೆಯಾದರು.

ಡಿಕೆಶಿ ತೂಂದರೆಗೆ ಸಿಲುಕಿದಾಗ ಮತ್ತು ತಮ್ಮ ಮನೆಯ ಮೇಲೆ ಐಟಿ ದಾಳಿ ನಡೆದಾಗಲೂ ತಮ್ಮ ಮನೆ ದೇವರು ಕೆಂಕೇರಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.












Click it and Unblock the Notifications