ಡಿ.ಕೆ.ಶಿ ಗೆ ಮಹಿಳೆಯರಿಂದ ಪೊರಕೆ ಸೇವೆ ಮಾಡಿಸ್ತೇನೆ: ಯೋಗೇಶ್ವರ್

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಜನವರಿ 04: ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ತೀರ್ವ ವಾಗ್ದಾಳಿ ನಡೆಸಿದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ 'ಡಿ.ಕೆ.ಶಿಗೆ ಚನ್ನಪಟ್ಟಣ ತಾಲ್ಲೂಕಿನ ಮಹಿಳೆಯರಿಂದ ಪೊರಕೆ ಸೇವೆ ಮಾಡಿಸುತ್ತೇನೆ' ಎಂದಿದ್ದಾರೆ.

ಡಿ ಕೆ ಶಿವಕುಮಾರ್ ಸಹೋದರರ ನಡುವೆ ಭುಗಿಲೆದ್ದ ಮನಸ್ತಾಪ?

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಡಿಕೆಎಸ್ ಸಹೋದರರು ನನ್ನ ರಾಜಕೀಯ ವೈರಿಗಳು, ಡಿ.ಕೆ.ಶಿವಕುಮಾರ್ ಅವರ ಪ್ರಕಾರ ನಾನು ಗೆಲ್ಲುವುದಿಲ್ಲವಂತೆ, ಅವರೇ ಬಂದು ಇಲ್ಲಿ ಚುನಾವಣೆಗೆ ನಿಲ್ಲಲಿ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಅವರ ವಿರುದ್ಧ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇನೆ ಎಂದು ಸವಾಲ್ ಹಾಕಿದರು.

ಚನ್ನಪಟ್ಟಣದಲ್ಲೇ ಯೋಗೇಶ್ವರ್ ಜನ್ಮ ಜಾಲಾಡಿದ ಸಿದ್ದರಾಮಯ್ಯ

ಡಿ.ಕೆ.ಶಿವಕುಮಾರ್ ಬಗ್ಗೆ ಏಕವಚನದಲ್ಲಿಯೇ ಮಾತನಾಡಿದ ಯೋಗೇಶ್ವರ್ ಅವರು ಡಿಕೆಶಿಗೆ ಇದು ಕೊನೆಯ ಚುನಾವಣೆ, ಅವನಿಗೆ ಹುಚ್ಚು ಹಿಡಿದುಬಿಟ್ಟಿದೆ, ಆತ ಕನಕಪುರದಲ್ಲಿ ಅನೇಕ ದಲಿತ ನಾಯಕರನ್ನು ಕೊಲೆ ಮಾಡಿದ್ದಾನೆ ಎಂದು ಪುಂಖಾನು ಪುಂಖವಾಗಿ ಆರೋಪಗಳ ಸುರಿಮಳೆಯನ್ನೇ ಸುರಿಸಿದರು.

ಇಲ್ಲ ಸಲ್ಲದ ಹೇಳಿಕೆ

ಇಲ್ಲ ಸಲ್ಲದ ಹೇಳಿಕೆ

ಕೆಲವೇ ದಿನಗಳಲ್ಲಿ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ, ಅದಲ್ಲದೆ ಡಿಕೆಎಸ್ ಸಹೋದರರು ಪರಸ್ಪರ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ ಇದೆಲ್ಲದರಿಂದ ಹತಾಶರಾಗಿರುವ ಡಿ.ಕೆ.ಶಿವಕುಮಾರ್ ನನ್ನ ಮೇಲೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಮೂರು ಬಿಟ್ಟವರು ಡಿಕೆಎಸ್ ಸೋದರರು

ಮೂರು ಬಿಟ್ಟವರು ಡಿಕೆಎಸ್ ಸೋದರರು

ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸುವಂತೆ ಡಿಕೆಶಿ ಬಂದು ನನ್ನ ಕಾಲು ಹಿಡಿದುಕೊಂಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ ಯೋಗೇಶ್ವರ್ ಅವರು ಈಗ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ, ಡಿಕೆಶಿಗೆ ನೈತಿಕತೆ ಇಲ್ಲ, ಮೂರೂ ಬಿಟ್ಟವರು ಡಿಕೆಎಸ್ ಸಹೋದರರು ಎಂದರು.

ಬಲವಂತದಿಂದ ಜನ ಸೇರಿಸಿದ್ದರು

ಬಲವಂತದಿಂದ ಜನ ಸೇರಿಸಿದ್ದರು

ಸಿದ್ದರಾಮಯ್ಯ ಅವರ ಸರ್ಕಾರದ ಮೇಲೂ ಹರಿಹಾಯ್ದ ಯೋಗೇಶ್ವರ್ ಅವರು 'ಸಿದ್ದರಾಮಯ್ಯನವರು ಈಗ ಘೋಷಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ದೇಶದ ಪೂರ್ಣ ಬಜೆಟ್ ತಂದರೂ ಸಾಧ್ಯವಾಗಲ್ಲ' ಎಂದರು. ನಿನ್ನೆ ನಡೆದ ಕಾರ್ಯಕ್ರಮಕ್ಕೆ ಬಲವಂತದಿಂದ ಜನಗಳನ್ನು ಸೇರಿಸಿದ್ದಾರೆ ಎಂದ ಯೋಗೇಶ್ವರ್ ಅವರು, ಸಿಎಂ ಮನ ಒಲಿಸಲು ಡಿಕೆಎಸ್ ಸಹೋದರರು ಈ ಕಾರ್ಯಕ್ರಮ ಆಯೋಜನೆ ಮಾಡಿಸಿದ್ದಾರೆ. ಸರ್ಕಾರಿ ಹಣದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ ಎಂದರು.

ಜನವರಿ 17ರಂದು ನನ್ನ ಶಕ್ತಿ ಪ್ರದರ್ಶನ

ಜನವರಿ 17ರಂದು ನನ್ನ ಶಕ್ತಿ ಪ್ರದರ್ಶನ

ನಿನ್ನೆಯ ಕಾರ್ಯಕ್ರಮ ಸರ್ಕಾರಿ ಹಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಂತಿತ್ತು ಹಾಗಾಗಿ ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ, ಸಾರ್ವಜನಿಕ ಸಭೆಯಾಗಿದ್ರೆ ನಾನು ಹೋಗುತ್ತಿದೆ ಎಂದು ಯೋಗೇಶ್ವರ್ ಅವರು ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಸ್ಪಷ್ಟೀಕರಣ ನೀಡಿದರು. ಜನವರಿ 17ರಂದು ನಾನು ಸಾರ್ವಜನಿಕ ಸಭೆ ನಡೆಸಲಿದ್ದೇನೆ ಅಂದು ನನ್ನ ಶಕ್ತಿ ಪ್ರದರ್ಶನ ನಡೆಯಲಿದೆ, ತಾಲ್ಲೂಕಿನಲ್ಲಿ ಯಾರು ಶಕ್ತಿವಂತ ರಾಜಕಾರಣಿ ಎಂಬುದು ಅಂದು ಗೊತ್ತಾಗಲಿದೆ ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Channapatna MLA CP Yogeshwar said he will make women to beat DK Shivakumar with broomstick. He also said DK Shivakumar and his brother Suresh has become mental.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ