ಕನಕಪುರ ಸೋಂಕಿತ ವೈದ್ಯ ದಂಪತಿಯಿಂದ ಚಿಕಿತ್ಸೆ ಪಡೆದಿದ್ದ 25 ಮಂದಿಗೆ ಸೋಂಕು
ರಾಮನಗರ, ಜೂನ್ 20: ಕನಕಪುರದ ಖಾಸಗಿ ಕ್ಲಿನಿಕ್ ನ ವೈದ್ಯ ದಂಪತಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ ಅವರ ಬಳಿ ಚಿಕಿತ್ಸೆ ಪಡೆದು ಪ್ರಾಥಮಿಕ ಸಂಪರ್ಕ ಹೊಂದಿದ್ದವರಲ್ಲಿ ನಿನ್ನೆ ಒಂದೇ ದಿನ 25 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಮೂಡಿದೆ.
Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada
ರಾಮನಗರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ನಿನ್ನೆ ಒಂದೇ ದಿನ 35 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟಾರೆ ಸೋಂಕಿತರ ಸಂಖ್ಯೆ ನೂರರ ಗಡಿಗೆ ಸಮೀಪಿಸಿದ್ದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚು ಮಾಡಿದೆ.
ಕನಕಪುರದ ವೈದ್ಯ ದಂಪತಿಗೆ ಸೋಂಕು; ಚಿಕಿತ್ಸೆ ಪಡೆದಿದ್ದರು ನೂರಾರು ಮಂದಿ!
ನಿನ್ನೆಯ ಕೋವಿಡ್-19 ತಪಾಸಣೆಯಲ್ಲಿ ಕನಕಪುರದಲ್ಲಿ -25, ಮಾಗಡಿಯಲ್ಲಿ-4, ಚನ್ನಪಟ್ಟಣದಲ್ಲಿ - 2 ಹಾಗೂ ರಾಮನಗರದಲ್ಲಿ- 4 ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.