ಕಾಂಗ್ರೆಸ್‌ಗೆ ಒಲಿದ ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ; ಸಂಭ್ರಮ
ರಾಮನಗರ, ಅಕ್ಟೋಬರ್, 18; ರಾಮನಗರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಪವಿತ್ರ ಲಕ್ಷ್ಮಿಕಾಂತ್ ಜಯಗಳಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡಿದ್ದು, ಪಕ್ಷದ ನಾಯಕರು ಸಂಭ್ರಮಿಸಿದರು.
ಈ ಹಿಂದೆ ಪಾರ್ವತಮ್ಮ ನಗರಸಭೆಯ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಲ್ಲೇ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ನಗರದ 27ನೇ ವಾರ್ಡ್‌ನಿಂದ ಪವಿತ್ರ ಲಕ್ಷ್ಮಿಕಾಂತ್ ಪ್ರತಿನಿಧಿಸಿದ್ದರು. ಈ ಮೂಲಕ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಒಟ್ಟು 31 ಸದಸ್ಯ ಬಲ ಇದ್ದು, ಅದರಲ್ಲಿ 20 ಜನ ಕಾಂಗ್ರೆಸ್ ಸದಸ್ಯರಿದ್ದರು. ಇನ್ನು 11 ಜನ ಜೆಡಿಎಸ್ ಸದಸ್ಯರು ಪ್ರತಿನಿಧಿಸಿದ್ದರು. ಅಕ್ಟೋಬರ್ 18ರಂದು ನಡೆದ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಪವಿತ್ರ ಲಕ್ಷ್ಮಿಕಾಂತ್ ಹಾಗೂ ಜೆಡಿಎಸ್ ಸದಸ್ಯೆ ಮಂಜುಳಾ ವೆಂಕಟೇಶ್ ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ 20 ಮತ ಪಡೆದು ಕಾಂಗ್ರೆಸ್ ಸದಸ್ಯೆ ಪವಿತ್ರ ಲಕ್ಷ್ಮಿಕಾಂತ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ
ಇದೇ ಸಮಯದಲ್ಲಿ ನಗರಸಭಾ ಸದಸ್ಯ ಕೆ.ಶೇಷಾದ್ರಿ ಮಾತನಾಡಿದ್ದು, ಪಕ್ಷದಲ್ಲಿ 4-5 ಜನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇದ್ದರು. ಈ ಹಿನ್ನೆಲೆ ಸ್ವಲ್ಪ ಗೊಂದಲ ಉಂಟಾಗಿತ್ತು. ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಆದೇಶದಂತೆ ಪಕ್ಷದ ಎಲ್ಲಾ ಸದಸ್ಯರು ಮತ ಹಾಕುವ ಮೂಲಕ ಪವಿತ್ರ ಲಕ್ಷ್ಮಿಕಾಂತ್ ಅವರನ್ನು ಆಯ್ಕೆ ಮಾಡಿದ್ದಾರೆ. ಚುನಾವಣೆ ವರ್ಷದಲ್ಲಿ ನಗರಸಭೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಬಹು ಮುಖ್ಯವಾಗಿತ್ತು. ಮುಂದಿನ ದಿನಗಳಲ್ಲಿ ನಗರದ ಸಭೆ ಜೊತೆಗೆ ವಿಧಾನಸಭೆ ಕ್ಷೇತ್ರವನ್ನು ಸಹ ಗೆಲುವು ಸಾಧಿಸಬೇಕು. ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಡಿ.ಕೆ ಶಿವಕುಮಾರ್ ಆಗಲೀ ಅಥವಾ ಇಕ್ಬಾಲ್ ಹುಸೇನ್ ಅವರೇ ಅಭ್ಯರ್ಥಿ ಆಗಲಿ, ಒಟ್ಟಿನಲ್ಲಿ ನಮ್ಮ ನಾಯಕರು ಸೂಚಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಹಿಸುತ್ತೇವೆ ಎಂದು ನಗರಸಭೆ ಸದಸ್ಯ ಕೆ.ಶೇಷಾದ್ರಿ ಹೇಳಿದರು.

ನಮ್ಮ ಪಕ್ಷದವರಿಗಾಗಿ ಸತತ ಶ್ರಮ
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಬಾವುಟ ಹಾರಿಸುತ್ತೇವೆ. ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಇನ್ನು ಕೆಲವೇ ದಿನಗಳಲ್ಲಿ ರಾಮನಗರದ ಅಭ್ಯರ್ಥಿ ಯಾರು ಅನ್ನುವುದನ್ನು ತಿಳಿಸುತ್ತಾರೆ. ಇಕ್ಬಾಲ್ ಹುಸೇನ್ ಸೇರಿದಂತೆ ಬೇರೆ ಯಾರೇ ಅಭ್ಯರ್ಥಿ ಆದರು ಎಲ್ಲರೂ ಒಗ್ಗೂಡಿ ಕೆಲಸ ಮಾಡ್ತುತ್ತೇವೆ. ಒಟ್ಟಾರೆಯಾಗಿ ರಾಮನಗರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಪಣ ತೊಡುತ್ತೇವೆ ಎಂದು ನಗರಸಭೆ ಸದಸ್ಯ ಕೆ.ಶೇಷಾದ್ರಿ ಹೇಳಿದರು.











Click it and Unblock the Notifications